ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆಯಿಂದ ಮುಕ್ತಿ ಕೊಡಿ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಇಷ್ಟೊಂದು ತೆರಿಗೆ ವಿಧಿಸುವ ಅಗತ್ಯವಿದೆಯೇ?’ ಪ್ರಸನ್ನ ಅವರ ಲೇಖನ ಸಕಾಲಿಕವಾದುದು (ಪ್ರ.ವಾ., ಸೆ.14). ಜಿ.ಎಸ್.ಟಿ. ವ್ಯವಸ್ಥೆ ಈಗಷ್ಟೇ ದೇಶದಲ್ಲಿ ಜಾರಿಗೆ ಬಂದಿದೆ. ಆರಂಭದ ಹಂತದಲ್ಲೇ ಈ ಲೇಖನ ಬಂದಿರುವುದು ಸ್ವಾಗತಾರ್ಹ.

ದೇಶದಲ್ಲಿ ಪರಂಪರಾಗತವಾಗಿ ಬಂದಿರುವ ಖಾದಿ ಮತ್ತು ಕೈಮಗ್ಗದಂಥ ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಜಿ.ಎಸ್‌.ಟಿ. ವ್ಯಾಪ್ತಿಗೆ ತಂದಿರುವುದು ಸರಿಯಲ್ಲ. ದೇಶದ ಹಳ್ಳಿ ಹಳ್ಳಿಗಳಲ್ಲಿ ಶ್ರಮದ ಕಸುಬು ಮತ್ತು ಗುಡಿ ಕೈಗಾರಿಕೆಗಳನ್ನೇ ಅವಲಂಬಿಸಿರುವವರಿಗೆ ಜಿ.ಎಸ್‌.ಟಿ. ಒಂದು ಶಾಪವಾಗಿ ಪರಿಣಮಿಸಲಿದೆ ಎನ್ನುವುದು ಪ್ರಸನ್ನ ಅವರ ಲೇಖನದಿಂದ ಮನದಟ್ಟಾಗುತ್ತದೆ. ತೆರಿಗೆ ಹೆಚ್ಚಾದರೆ ಇಂಥ ಉತ್ಪನ್ನಗಳಿಗೆ ಬೇಡಿಕೆಯೇ ಇಲ್ಲವಾಗುತ್ತದೆ. ಪರಿಣಾಮ ನಮ್ಮ ರೈತರು ಮತ್ತು ಬಡ ಕುಶಲಕರ್ಮಿಗಳು ಖಂಡಿತವಾಗಿಯೂ ಸಂಕಷ್ಟಕ್ಕೆ ಒಳಗಾಗುತ್ತಾರೆ.

ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಖಾದಿ, ಕೈಮಗ್ಗ ಮತ್ತು ಇತರ ಗುಡಿ ಕೈಗಾರಿಕೋತ್ಪನ್ನಗಳನ್ನು ಜಿ.ಎಸ್.ಟಿ ವ್ಯಾಪ್ತಿಯಿಂದ ಹೊರಗೆ ಇಡಬೇಕು.

–ಬಸ್ತಿ ವಾಮನ ಶೆಣೈ, ಬಂಟ್ವಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT