ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌1ಬಿ ವೀಸಾ: ಪ್ರಕ್ರಿಯೆಗೆ ಮತ್ತೆ ಚಾಲನೆ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ವಿದೇಶಗಳ ತಂತ್ರಜ್ಞಾನ ಪರಿಣಿತರಿಗೆ ನೀಡುವ ಎಚ್1ಬಿ ಉದ್ಯೋಗ ವೀಸಾ ವಿತರಣೆ ಪ್ರಕ್ರಿಯೆಗೆ ಅಮೆರಿಕ ಮತ್ತೆ ಚಾಲನೆ ನೀಡಿದೆ. ಭಾರತದ ಐಟಿ ಕಂಪೆನಿಗಳಿಂದ ಬಹು ಬೇಡಿಕೆಯಿರುವ ಈ ವೀಸಾಕ್ಕಾಗಿ ಅರ್ಜಿಗಳ ಮಹಾಪೂರ ಇದ್ದುದರಿಂದ ಈ ಪ್ರಕ್ರಿಯೆಯನ್ನು ಏಪ್ರಿಲ್‌ನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಐದು ತಿಂಗಳ ಬಳಿಕ ಇದಕ್ಕೆ ಮರು ಚಾಲನೆ ಸಿಕ್ಕಿದೆ.

2018ರ ಆರ್ಥಿಕ ವರ್ಷಕ್ಕೆ ಅನ್ವಯವಾಗುವಂತೆ ‍ಅಮೆರಿಕದ ಪೌರತ್ವ ಹಾಗೂ ವಲಸೆ ಸೇವೆಗಳ ಇಲಾಖೆಯು ಇದನ್ನು ಪುನರ್ ಆರಂಭಿಸಿದೆ. ಈ ಬಾರಿ 65,000 ವೀಸಾಗಳಿಗೆ ನಿಗದಿಪಡಿಸಲಾಗಿದೆ. ಈ ಪ್ರಕ್ರಿಯೆಯು ಈಗಾಗಲೇ ಬಾಕಿಯಿರುವ ಅರ್ಜಿಗಳಿಗೆ ಮಾತ್ರ ಅನ್ವಯವಾಗುತ್ತದೆ. ಹೊಸ ಅರ್ಜಿಗಳಿಗೆ ಅವಕಾಶವಿಲ್ಲ ಎಂದು ಇಲಾಖೆಯು ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT