ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊಬೈಲ್‌ ಕರೆ ದರ ಕಡಿತ?

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಮೊಬೈಲ್‌ ಕರೆ ಸಂಪರ್ಕ ಶುಲ್ಕವನ್ನು  ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಪ್ರತಿ ನಿಮಿಷಕ್ಕೆ  6 ಪೈಸೆಗಳಿಗೆ ತಗ್ಗಿಸಿದ್ದು, ಇದರ ಫಲವಾಗಿ ಮೊಬೈಲ್‌ ಕರೆ ದರಗಳು ಅಗ್ಗವಾಗುವ ಸಾಧ್ಯತೆ ಇದೆ.

ಅಂತರ್‌ ಸಂಪರ್ಕ ಬಳಕೆ ಶುಲ್ಕವನ್ನು (ಐಯುಸಿ) 14 ಪೈಸೆಗಳಿಂದ 6 ಪೈಸೆಗಳಿಗೆ ಇಳಿಸುವ ನಿರ್ಧಾರವು ಇದೇ ಅಕ್ಟೋಬರ್‌ 1 ರಿಂದ ಜಾರಿಗೆ ಬರಲಿದೆ. ಮೊಬೈಲ್ ಸೇವಾ ಸಂಸ್ಥೆಗಳು ಈ ಶುಲ್ಕ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾಯಿಸಿದರೆ ಮೊಬೈಲ್‌ ಕರೆ ದರಗಳು ಇನ್ನಷ್ಟು ಅಗ್ಗವಾಗಲಿವೆ. ಹೊಸ ಸಂಸ್ಥೆ ರಿಲಯನ್ಸ್‌ ಜಿಯೊಗೆ ಇದರಿಂದ ಹೆಚ್ಚಿನ ಪ್ರಯೋಜನ ಸಿಗಲಿದೆ.

‘ಟ್ರಾಯ್‌’ನ ಈ ನಿರ್ಧಾರವು ಮೊಬೈಲ್‌ ಸಂಸ್ಥೆಗಳಿಗೆ  ಭಾರಿ ಹಾನಿ  ಉಂಟು ಮಾಡಲಿದೆ ಎಂದು ಮೊಬೈಲ್ ಸೇವಾ ಸಂಸ್ಥೆಗಳ ಸಂಘವು (ಸಿಒಎಐ) ಪ್ರತಿಕ್ರಿಯಿಸಿದೆ. ಈ ನಿರ್ಧಾರದ ವಿರುದ್ಧ ಕೋರ್ಟ್‌ಗೆ ಮೊರೆ ಹೋಗಲಾಗುವುದು ಎಂದು ತಿಳಿಸಿದೆ.2020ರ ಜನವರಿ 1 ರಿಂದ ‘ಐಯುಸಿ’ಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಗುವುದು ಎಂದು ‘ಟ್ರಾಯ್‌’ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT