ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕ:‘ಎಚ್‌–1ಬಿ’ ವೀಸಾ ನೀಡಿಕೆ ಪ್ರಕ್ರಿಯೆ ಚುರುಕು

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅಮೆರಿಕವು ‘ಎಚ್‌–1ಬಿ’ ವೀಸಾ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಿದ್ದು, ಭಾರತದ ಐ.ಟಿ ಸಂಸ್ಥೆಗಳು ತಮ್ಮ ವಹಿವಾಟನ್ನು ಸುಗಮವಾಗಿ ನಡೆಸಲು ಇದರಿಂದ ನೆರವಾಗಲಿದೆ.

ಭಾರತದ ಐ.ಟಿ ವೃತ್ತಿ ಪರಿಣತರಲ್ಲಿ ದುಡಿಮೆಯ ವೀಸಾ ಎಂದೇ ಜನಪ್ರಿಯವಾಗಿರುವ ‘ಎಚ್‌–1ಬಿ’ ವೀಸಾ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಲು ಅಮೆರಿಕದ ನಾಗರಿಕ ಮತ್ತು ವಲಸೆ ಸೇವಾ ವಿಭಾಗವು ನಿರ್ಧರಿಸಿದೆ.

ಗ್ರಾಹಕರ ಸ್ಥಳದಲ್ಲಿ ಕೆಲಸ ಮಾಡಲು ಉದ್ಯೋಗಿಗಳನ್ನು ಕಳಿಸಿಕೊಡಲು ದೇಶಿ ಐ.ಟಿ ಸಂಸ್ಥೆಗಳು ಈ ವೀಸಾವನ್ನು ನೆಚ್ಚಿಕೊಂಡಿವೆ. ಅಮೆರಿಕವು 2018ನೇ ಸಾಲಿನಲ್ಲಿ 65 ಸಾವಿರ ಇಂತಹ ವೀಸಾ ನೀಡಲು ಮಿತಿ ವಿಧಿಸಿದೆ. ದೇಶಿ ಐ.ಟಿ ಸಂಸ್ಥೆಗಳು ಇತ್ತೀಚೆಗೆ ಈ ವೀಸಾ ಮೇಲಿನ ಅವಲಂಬನೆ ಕಡಿಮೆ ಮಾಡಲು ಮುಂದಾಗಿದ್ದವು.

‘ಇದೊಂದು ಸ್ವಾಗತಾರ್ಹ ನಡೆ. ನಾವು ಇದನ್ನು ನಿರೀಕ್ಷಿಸಿದ್ದೇವು. ಆದ್ಯತೆ ವೀಸಾ ನೀಡುವ ಪ್ರಕ್ರಿಯೆಯನ್ನು ಕಳೆದ ಏಪ್ರಿಲ್‌ನಿಂದ ಸ್ಥಗಿತಗೊಳಿಸಲಾಗಿತ್ತು’ ಎಂದು ಸಾಫ್ಟ್‌ವೇರ್‌ ಮತ್ತು ಸೇವಾ ಸಂಸ್ಥೆಗಳ ರಾಷ್ಟ್ರೀಯ ಒಕ್ಕೂಟದ (ನಾಸ್ಕಾಂ) ಅಧ್ಯಕ್ಷ ಆರ್‌. ಚಂದ್ರಶೇಖರ್‌ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT