ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅ.6ಕ್ಕೆ ಜಿಎಸ್‌ಟಿ ಮಂಡಳಿ ಸಭೆ

Last Updated 19 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ 22ನೇ ಸಭೆ ನಿಗದಿ ಪಡಿಸಿದ್ದ ಅವಧಿಗೂ ಮುನ್ನವೇ ನಡೆಯಲಿದೆ.

ಅಕ್ಟೋಬರ್‌ 24 ರಂದು ಸಭೆ ನಡೆಸಲು ಇದಕ್ಕೂ ಮೊದಲು ನಿರ್ಧರಿಸಲಾಗಿತ್ತು. ಆದರೆ, ‘ಜಿಎಸ್‌ಟಿಎನ್‌’ನಲ್ಲಿ ತಾಂತ್ರಿಕ ದೋಷದಿಂದ ರಿಟರ್ನ್ ಸಲ್ಲಿಕೆಗೆ ಹೆಚ್ಚು ಸಮಯ ಹಿಡಿಯುತ್ತಿದೆ ಎಂದು ತೆರಿಗೆದಾರರು ದೂರುತ್ತಿದ್ದಾರೆ. ರಫ್ತುದಾರರು ಎದುರಿಸುತ್ತಿರುವ ಸಮಸ್ಯೆಗಳನ್ನೂ ಬಗೆಹರಿಸುವ ಉದ್ದೇಶದಿಂದ ಅಕ್ಟೋಬರ್‌ 6 ರಂದೇ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಹಣಕಾಸು ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೀಪಾವಳಿ ಹಬ್ಬ ಸಮೀಪದಲ್ಲೇ ಇರುವುದೂ ಸಹ ಮುಂಚಿತವಾಗಿಯೇ ಸಭೆ ನಡೆಸಲು ಕಾರಣವಾಗಿದೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ನೇತೃತ್ವದಲ್ಲಿ ಈ ಸಭೆ ನಡೆಯಲಿದೆ. ಈ ಹಿಂದೆ, ಜಿಎಸ್‌ಟಿ ಜಾರಿಯಾದ ಬಳಿಕ, ಜುಲೈ 17ರಂದು ಮಂಡಳಿಯ  ಮೊದಲ ಸಭೆಯನ್ನು ವಿಡಿಯೊ ಕಾನ್ಫರೆನ್ಸ್‌ ಮೂಲಕವೇ ನಡೆಸಲಾಗಿತ್ತು.

ತೆರಿಗೆ ಮರಳಿಸಲು ರಫ್ತುದಾರರ ಒತ್ತಾಯ: ಜಿಎಸ್‌ಟಿ ರೂಪದಲ್ಲಿ ಸಂಗ್ರಹವಾಗಿರುವ ತೆರಿಗೆಯಲ್ಲಿ₹ 65 ಸಾವಿರ ಕೋಟಿಗಳನ್ನು ತ್ವರಿತ
ವಾಗಿ ಮರಳಿಸಬೇಕು ಎಂದು ರಫ್ತುದಾರರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ತೆರಿಗೆ ಹಣ ಮರಳಿಸುವ ಪ್ರಕ್ರಿಯೆಯು ತಕ್ಷಣಕ್ಕೆ ಆರಂಭವಾಗದಿದ್ದರೆ, ರಫ್ತುದಾರರಿಗೆ ಹಣಕಾಸು ಬಿಕ್ಕಟ್ಟು ಎದುರಾಗಲಿದೆ ಎಂದು ಭಾರತದ ರಫ್ತು ಸಂಘಟನೆಗಳ ಒಕ್ಕೂಟದ (ಎಫ್‌ಐಇಒ) ನಿರ್ದೇಶಕ ಅಜಯ್‌ ಸಹಾಯ್‌ ಹೇಳಿದ್ದಾರೆ.

‘ಜಿಎಸ್‌ಟಿ ಜಾರಿಗೆ ಬರುತ್ತಿದ್ದಂತೆ ರಫ್ತುದಾರರು ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿ ಬಂದಿದ್ದು, ತಕ್ಷಣಕ್ಕೆ ತೆರಿಗೆ ಮರಳಿಸುವ ಅಗತ್ಯ ಇದೆ’ ಎಂದು ಚರ್ಮ ಉತ್ಪನ್ನಗಳ ರಫ್ತು ಮಂಡಳಿ ಉಪಾಧ್ಯಕ್ಷ ಪಿ. ಅಹ್ಮದ್‌ ಹೇಳಿದ್ದಾರೆ.

ರೆವೆನ್ಯೂ ಕಾರ್ಯದರ್ಶಿ ಹಸ್ಮುಖ ಆಧಿಯಾ ನೇತೃತ್ವದಲ್ಲಿನ ರಫ್ತಿಗೆ ಸಂಬಂಧಿಸಿದ ಸಮಿತಿಯು ಮಂಗಳವಾರ 8 ರಫ್ತು ಉತ್ತೇಜನಾ ಸಂಘಗಳ ಜತೆ ಸಭೆ ನಡೆಸಿ ರಫ್ತುದಾರರ ಸಮಸ್ಯೆಗಳನ್ನು ಚರ್ಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT