ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಕ್ಷ್ಮೀಪುರವಾಡಿ: ನಿರ್ವಹಣೆ ಕಾಣದ ಶೌಚಾಲಯ

Last Updated 20 ಸೆಪ್ಟೆಂಬರ್ 2017, 5:52 IST
ಅಕ್ಷರ ಗಾತ್ರ

ವಾಡಿ: ರಾವೂರು ಗ್ರಾಪಂ ವ್ಯಾಪ್ತಿಯ ಲಕ್ಷ್ಮೀಪುರವಾಡಿ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯಗಳು ನಿರ್ವಹಣೆಯ ಕೊರತೆಯಿಂದ ಬಳಕೆಗೆ ಬಾರದಂತಾಗಿವೆ. ಇದರಿಂದಾಗಿ ಗ್ರಾಮಸ್ಥರು, ವಿಶೇಷವಾಗಿ ಮಹಿಳೆಯರು, ಶೌಚಕ್ರಿಯೆಗಾಗಿ ಬಯಲು ಪ್ರದೇಶ ಅವಲಂಬನೆ ಅನಿವಾರ್ಯವಾಗಿದೆ.

ಮುಳ್ಳು ಕಂಟಿಗಳಿಂದ ತುಂಬಿ ಹೋಗಿರುವ ಬಯಲು ಶೌಚಾಲಯ ಕಟ್ಟಡಗಳು, ಹಾವು ಚೇಳುಗಳ ಅವಾಸಸ್ಥಾನಗಳಾಗಿ ಪರಿವರ್ತನೆಗೊಂಡಿವೆ. ಮುಳ್ಳು ಕಂಟಿಗಳನ್ನು ದಾಟಿ ಶೌಚಾಲಯಕ್ಕೆ ಹೋಗುವ ಮಹಿಳೆಯರಿಗೆ ಇವು ನರಕದ ಅನುಭವ ನೀಡುತ್ತವೆ. ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಾ ಬಯಲು ಶೌಚಾಲಯಕ್ಕೆ ಹೋಗುವುದು ಇಲ್ಲಿ ಸಾಮಾನ್ಯ ಎನ್ನುತ್ತಾರೆ ಗ್ರಾಮಸ್ಥರು.

ಹಗಲು ಹೊತ್ತಿನಲ್ಲೂ ಬಳಸಲು ಬಾರದಂತಹ ಹಂತಕ್ಕೆ ತಲುಪಿರುವ ಶೌಚಾಲಯಗಳ ನಿರ್ವಹಣೆ ಮಾಡುವಲ್ಲಿ ಮೈಮರೆತ ಸ್ಥಳೀಯ ಪಂಚಾಯಿತಿ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಖ್ಯರಸ್ತೆ ಹಾಗೂ ಸರಕಾರಿ ಶಾಲೆಯ ಹಿಂದುಗಡೆ ಲಕ್ಷಾಂತರ ಅನುಧಾನ ಖರ್ಚು ಮಾಡಿ ಕಳೆದ ಹಲವು ವರ್ಷಗಳ ಹಿಂದೆ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಾಲಯ ನಿರ್ಮಿಸಲಾಗಿದೆ. ಆದರೆ ಕಾಲಕಾಲಕ್ಕೆ ನಿರ್ವಹಣೆ ಮಾಡುವಲ್ಲಿ ಸ್ಥಳೀಯ ಪಂಚಾಯಿತಿ ನಿರ್ಲಕ್ಷ್ಯ ವಹಿಸಿದೆ ಎನ್ನುವುದು ಗ್ರಾಮಸ್ಥರ ಗಂಭೀರ ಆರೋಪವಾಗಿದೆ.

ನಿರ್ವಹಣೆ ಕಾಣದ ಶೌಚಾಲಯಗಳಿಂದ ಇಲ್ಲಿನ ಮಹಿಳೆಯರಿಗೆ ಬಯಲು ಶೌಚ ಅನಿವಾರ್ಯವಾಗಿದೆ. ಇದರಿಂದಾಗಿ ಗ್ರಾಮಸ್ಥರು, ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ಸ್ಥಳೀಯ ಪಂಚಾಯಿತಿಯ ಆಡಳಿತವು ಮುತುವರ್ಜಿ ವಹಿಸಿ ಸಾಮೂಹಿಕ ಶೌಚಾಲಯಗಳ ದುರಸ್ತಿಗೆ ಮುಂದಾಗಬೇಕು ಎನ್ನುವುದು ಗ್ರಾಮಸ್ಥರ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT