ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ: ಸಂಚಾರ ದುಸ್ತರ

Last Updated 20 ಸೆಪ್ಟೆಂಬರ್ 2017, 6:21 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನಾದ್ಯಂತ ಹಲವು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಸತ್ತೇಗಾಲ-ಉಗನಿಯ ಮಾರ್ಗದ ಪಾಳ್ಯ ಸಂಪರ್ಕ ರಸ್ತೆ ತೀರಾ ಹದಗೆಟ್ಟಿದೆ. ರಸ್ತೆಯಲ್ಲಿ ದೊಡ್ಡ ಹಳ್ಳಗಳು ಸೃಷ್ಟಿಯಾಗಿವೆ.

ಮಲೆಮಹದೇಶ್ವರ ಬೆಟ್ಟ, ಚಿಕ್ಕ ಲ್ಲೂರು, ಬೆಂಗಳೂರು, ಮಳವಳ್ಳಿ, ಕನಕಪುರ ಇತರೆಡೆಗಳಿಂದ ವಾಹನಗಳಲ್ಲಿ ತೆರಳುವ ಭಕ್ತರು ಮತ್ತು ಪ್ರವಾಸಿಗರು ಹತ್ತಿರವಾದ ಕಾರಣಕ್ಕೆ ಈ ಮಾರ್ಗವನ್ನು ಬಳಸಿ ಕೊಳ್ಳುತ್ತಾರೆ. ಆದರೆ, ಅಪಾಯಕ್ಕೆ ಎಡೆಮಾಡಿಕೊಡು ವಂತಾಗಿರುವ ರಸ್ತೆಯಲ್ಲಿ ಭಯದಿಂದ ವಾಹನ ಚಾಲನೆ ಮಾಡುವಂತಾಗಿದೆ.

ರಸ್ತೆ ಹದಗೆಟ್ಟರುವುದರಿಂದ ಅಪಘಾತಗಳು ಸಂಭವಿಸುತ್ತಿವೆ. ವಾಹನದ ಚಕ್ರಕ್ಕೆ ಸಿಕ್ಕಿ ಸಿಡಿದ ನಿಂತ ನೀರು ದಾರಿಹೋಕರ ಮೇಲೆ ಹಾರಿ ಘರ್ಷಣೆಗಳಿಗೂ ಕಾರಣವಾಗಿದೆ.
‘ವಾಹನ ಚಾಲನೆ ಮಾಡಲು ತುಂಬಾ ತೊಂದರೆಯಾಗಿದೆ. ಮೃತ್ಯು ಕೂಪವಾಗಿ ಬಾಯ್ದೆರೆದು ಕುಳಿತಿರುವ ಹೊಂಡಗಳನ್ನು ಮುಚ್ಚಿ ಅವಘಡಗಳನ್ನು ತಪ್ಪಿಸಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಗಮನಹರಿಸಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಪ್ರತಿಭಟನೆ ಎಚ್ಚರಿಕೆ: ರಸ್ತೆ ತೀರಾ ಹದಗೆಟ್ಟು ಸಮಸ್ಯೆಗಳಿಗೆ ಕಾರಣ ವಾಗುತ್ತಿರುವುದರಿಂದ ಅಧಿಕಾರಿಗಳು ತಕ್ಷಣ ದುರಸ್ತಿಗೆ ಮುಂದಾಗಬೇಕು. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ರೈತ ಮುಖಂಡರು ಹಾಗೂ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT