ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪಷ್ಟ ದೂರದೃಷ್ಟಿ ಹೊಂದಿರುವ ಚೀನಾ; ಭಾರತದ ಸಮರ್ಥ ಸ್ಪರ್ಧೆ ಅಗತ್ಯ: ರಾಹುಲ್‌ ಗಾಂಧಿ

Last Updated 20 ಸೆಪ್ಟೆಂಬರ್ 2017, 6:50 IST
ಅಕ್ಷರ ಗಾತ್ರ

ನ್ಯೂ ಜೆರ್ಸಿ: ಸ್ಪಷ್ಟ ದೂರದೃಷ್ಟಿಯೊಂದಿಗೆ ಮುನ್ನಡೆಯುತ್ತಿರುವ ಚೀನಾದೊಂದಿಗೆ ನಾವು ಸ್ಪರ್ಧಿಸಬೇಕಾಗಿದೆ. ಆದರೆ, ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ ಎಂದು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅಭಿಪ್ರಾಯ ಪಟ್ಟಿದ್ದಾರೆ.

ಪ್ರಿನ್ಸ್‌ಟನ್‌ ವಿಶ್ವವಿದ್ಯಾಲಯದಲ್ಲಿ ಬುಧವಾರ ಸಂವಾದದಲ್ಲಿ ಮಾತನಾಡಿದರು. ಭಾರತ–ಚೀನಾ ರಾಷ್ಟ್ರಗಳ ಕಾರ್ಯನಿರ್ವಹಣೆ ಜಗತ್ತಿನ ಬದಲಾವಣೆಯಲ್ಲಿ ವಹಿಸುವ ಪ್ರಮುಖ ಪಾತ್ರದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದರು. ಜಗತ್ತಿನ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಉಭಯ ರಾಷ್ಟ್ರಗಳ ನಡುವೆ ಸಹಕಾರ ಹಾಗೂ ಸ್ಪರ್ಧೆಯಿದೆ. ಚೀನಾದೊಂದಿಗೆ ನಾವು ಸ್ಪರ್ಧಿಸುವುದು ಅಗತ್ಯವಾಗಿದೆ, ಆದರೆ ನಮ್ಮ ಸ್ಪರ್ಧೆ ಅಷ್ಟು ಸಮರ್ಥವಾಗಿಲ್ಲ ಎಂದರು.

ಒಂದು ವಲಯ, ಒಂದು ರಸ್ತೆ ಯೋಜನೆಯಂತಹ ದೂರದೃಷ್ಟಿಯೊಂದಿಗೆ ಚೀನಾ ಮುನ್ನಡೆಯುತ್ತಿದೆ. ಭಾರತವೂ ಅಂಥ ದೂರದೃಷ್ಟಿಯನ್ನು ಒಳಗೊಂಡಿದೆಯೇ? ಹೇಗಿದೆ ಆ ಯೋಜನೆ? ನಮ್ಮ ಮತ್ತು ಆ ರಾಷ್ಟ್ರದ ನಡುವಿನ ಸಹಕಾರ ಯಾವ ನಿಟ್ಟಿನಲ್ಲಿ ಸಾಗಲಿದೆ? ಈ ಮೂಲಭೂತ ಪ್ರಶ್ನೆಗಳನ್ನು ಮುಂದಿಟ್ಟು ಸಾಗಬೇಕಿದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT