ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರ ಸ್ನೇಹಿ ಶಾಲೆಗೆ ಪ್ರಶಸ್ತಿ ಗರಿ

Last Updated 20 ಸೆಪ್ಟೆಂಬರ್ 2017, 7:08 IST
ಅಕ್ಷರ ಗಾತ್ರ

ಗುಬ್ಬಿ: ತಾಲ್ಲೂಕಿನ ಕಸಬ ಹೋಬಳಿ ಅಮ್ಮನಘಟ್ಟ ಸರ್ಕಾರಿ ಪ್ರೌಢಶಾಲೆಗೆ ಪ್ರಸಕ್ತ ಸಾಲಿನ ‘ಜಿಲ್ಲಾ ಮಟ್ಟದ ಉತ್ತಮ ಕೃಷಿ ಮತ್ತು ತೋಟಗಾರಿಕಾ ಪ್ರಶಸ್ತಿ’ಯ ಹೆಗ್ಗಳಿಕೆ ಸಿಕ್ಕಿದೆ. ಈ ಶಾಲೆಯ ಶೈಕ್ಷಣಿಕ ಪ್ರಗತಿಯ ಜೊತೆಗೆ ಪರಿಸರ ಸ್ನೇಹಿ ಕಾರ್ಯಚಟುವಟಿಕೆ ಗಮನಿಸಿ ಈಚೆಗೆ ಜಿಲ್ಲಾ ಕೇಂದ್ರದಲ್ಲಿ ನಡೆದ ವೃತ್ತಿ ಶಿಕ್ಷಣ ಮಕ್ಕಳ ಕಲಿಕೋತ್ಸವ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮದಲ್ಲಿ ಗೌರವ ಸಿಕ್ಕಿದೆ.

ಜಿಲ್ಲಾ ಮಟ್ಟದಲ್ಲಿ ಹಸಿರು ಪಡೆ ಶಾಲೆ ಪ್ರಶಸ್ತಿ, ವೃತ್ತಿ ಶಿಕ್ಷಣ ವಸ್ತು ಪ್ರದರ್ಶನದಲ್ಲಿ ಸಾವಯವ ಕೃಷಿ ಉತ್ಪನ್ನ ಪ್ರಶಸ್ತಿ, ವಾಡೆ, ಗೂಡೆ, ಕೊಮ್ಮೆ ಮುಂತಾದ ಪರಿಕರಗಳ ಜೊತೆಗೆ ಸಿರಿಧಾನ್ಯಗಳ ಪ್ರದರ್ಶನಕ್ಕಾಗಿ ಜಿಲ್ಲಾ ಮಟ್ಟದ ಕೃಷಿಕ ವಿಭಾಗದಿಂದ ಪ್ರಥಮ ಸ್ಥಾನ ದೊರೆತಿದೆ.

ಕೆರೆ ಪರಿಸರ ಅಧ್ಯಯನ, ಅರಣ್ಯ ಭೇಟಿ, ಔಷಧವನ ನಿರ್ಮಾಣ, ಸ್ವಚ್ಛ ಶಾಲೆ ಪರಿಕಲ್ಪನೆ, ಪ್ಲಾಸ್ಟಿಕ್ ನಿಷೇಧ ಹಾಗೂ ಜಾಗೃತಿ ಕಾರ್ಯಕ್ರಮಗಳಲ್ಲಿ ಈ ಶಾಲೆಯನ್ನು ಮಾದರಿಯಾಗಿಸಿದೆ.

ಈ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳೇ ತಂದು ಬೆಳೆಸಿರುವ 25ಕ್ಕೂ ಹೆಚ್ಚು ತೆಂಗಿನ ಸಸಿಗಳು, ತೇಗ, ಹೊಂದೆ, ಶಿಶುತಳಿ ಮರ, ಸಿಲ್ವರ್ ಓಕ್‌, ಅಕೇಶಿಯಾ, ಬೋಗನ್ ವಿಲಿಯಾ ಗಿಡ ಮರಗಳಿವೆ. ತೋಟಗಾರಿಕೆ ಅಭಿವೃದ್ಧಿ ಪಡಿಸುವ ಉದ್ದೇಶದಿಂದ 10 ನೇರಳೆ, 8 ಸೀಬೆಗಿಡಗಳನ್ನು ಬೆಳೆಯಲಾಗಿದೆ. ಕೊಳವೆಬಾವಿ ವ್ಯವಸ್ಥೆ ಇರುವುದರಿಂದ ಬಿಸಿಯೂಟಕ್ಕೆ ಅವಶ್ಯವಿರುವ ಹಿತ್ತಿಲು ಮಾದರಿಯ ಪೌಷ್ಟಿಕ ತರಕಾರಿಯನ್ನು ಮಕ್ಕಳೇ ಬೆಳೆಯುತ್ತಿರುವುದು ಎಲ್ಲರಿಗೂ ಮಾದರಿಯಾಗಬೇಕಿದೆ.

ಹಿಂದುಳಿದ ಸಮುದಾಯ ಹಾಗೂ ಪರಿಶಿಷ್ಟ ಸಮುದಾಯಕ್ಕೆ ಸೇರಿದ ಮಕ್ಕಳೇ ಹೆಚ್ಚು ಇರುವುದರಿಂದ ಹಲವು ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿವೆ. ಶಾಲೆಯ ಫಲಿತಾಂಶವು ಪ್ರತಿವರ್ಷ ಏರುಗತಿಯಲ್ಲಿ ಸಾಗುತ್ತಿದ್ದು, ಶಾಲೆಯ ಸರ್ವತೋಮುಖ ಅಭಿವೃದ್ಧಿಗಾಗಿ ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಹಳೆಯ ವಿದ್ಯಾರ್ಥಿಗಳು, ಪೋಷಕರು ಸಹಕರ ಸಿಕ್ಕಿದೆ ಎನ್ನುತ್ತಾರೆ ಇಲ್ಲಿನ ಶಿಕ್ಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT