ಮೂರು ಅವತಾರಗಳ ಸಿನಿಮಾ ಟ್ರೇಲರ್‌

ಯಡಿಯೂರಪ್ಪ, ಸಿಎಂ ಸಿದ್ದರಾಮಯ್ಯ ಅವರಿಗೆ ಹುಚ್ಚ ವೆಂಕಟ್ ಸಲಹೆ!

ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಹುಚ್ಚ ವೆಂಕಟ್‌, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಲು ಸಾಲು ವಿಡಿಯೊಗಳನ್ನು ಪ್ರಕಟಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಬೆಂಗಳೂರು: ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಹುಚ್ಚ ವೆಂಕಟ್‌, ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಸಾಲು ಸಾಲು ವಿಡಿಯೊಗಳನ್ನು ಪ್ರಕಟಿಸಿ ಚರ್ಚೆಗೆ ಗ್ರಾಸವಾಗಿದ್ದಾರೆ.

ಯಡಿಯೂರಪ್ಪ ಮತ್ತು ಸಿಎಂ ಸಿದ್ದರಾಮಯ್ಯ ಅವರಿಗೆ ಮುಂದಿನ ಚುನಾವಣೆಯಲ್ಲಿ ಸ್ವಕ್ಷೇತ್ರದಿಂದಲೇ ಸ್ಪರ್ಧಿಸುವಂತೆ ವಿಡಿಯೊ ಮೂಲಕ ಸಲಹೆ ನೀಡಿದ್ದಾರೆ!

ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲಿ ರೆಕಾರ್ಡ್‌ ಮಾಡಿರುವ ವಿಡಿಯೊಗಳನ್ನು ಯುಟ್ಯೂಬ್‌ನಲ್ಲಿ ಪ್ರಕಟಿಸಿಕೊಂಡಿದ್ದಾರೆ. ಮಡಿಕೇರಿಯಿಂದ ತಲಕಾವೇರಿ ವರೆಗೂ ರಸ್ತೆಗಳು ಗುಂಡಿ ಬಿದ್ದಿವೆ ಸರಿ ಪಡಿಸಿ ಎಂದು ಭಾಗಮಂಡಲ ಶಾಸಕರಿಗೆ ವಿಡಿಯೋ ಮನವಿಯನ್ನೂ ಮಾಡಿದ್ದಾರೆ.

ಮಂಗಳವಾರ ಹುಚ್ಚ ವೆಂಕಟ್ ಹುಟ್ಟಿದ ದಿನದಂದು ಅವರೇ ನಿರ್ದೇಶಿಸಿ, ನಟಿಸುತ್ತಿರುವ ಮೂರು ಚಿತ್ರದ 6–8 ನಿಮಿಷಗಳ ಟ್ರೇಲರ್‌ ಬಿಡುಗಡೆ ಮಾಡಿದ್ದಾರೆ. ಫೈರಿಂಗ್‌ ಸ್ಟಾರ್‌ ಹುಚ್ಚವೆಂಕಟ್‌ ಎಂದು ಕರೆದು ಕೊಂಡಿದ್ದು, ತಿಕ್ಲಾ ಹುಚ್ಚವೆಂಕಟ್‌, ದುರಹಂಕಾರಿ ಹುಚ್ಚವೆಂಕಟ್‌, ಡಿಕ್ಟೇಟರ್‌ ಹುಚ್ಚವೆಂಕಟ್‌ ಚಿತ್ರಗಳ ಟ್ರೇಲರ್ ಪ್ರಕಟಿಸಿದ್ದಾರೆ.

ಟ್ರೇಲರ್‌ ಪ್ರಾರಂಭಕ್ಕೂ ಮುನ್ನ ಇಸ್ರೋ ಮತ್ತು ವಿಜ್ಞಾನಿಗಳು, ಜಗತ್ತಿನಾದ್ಯಂತ ಪ್ರೀತಿಸುವ ಹುಡುಗಿಯರು, ಅಂಬರೀಷ್‌ ಇಂದ ಅಮಿತಾಬ್‌ ಸೇರಿ ಹಲವು ಕಲಾವಿದರು, ದೇವೇಗೌಡರಿಂದ ಮೋದಿ ವರೆಗಿನ ಪ್ರಮುಖ ರಾಜಕಾರಣಿಗಳ ಫೋಟೋದೊಂದಿಗೆ ಇವರ ಆರ್ಶೀರ್ವಾದ ಎಂದು ಪ್ರಕಟಿಸಿಕೊಂಡಿದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು
ದುಬೈನಲ್ಲಿ ‘ಸೋಫಿಯಾ’ ಹವಾ

ಜನವರಿ 19ರಂದು ದುಬೈನಲ್ಲಿ ಬಿಡುಗಡೆ
ದುಬೈನಲ್ಲಿ ‘ಸೋಫಿಯಾ’ ಹವಾ

15 Dec, 2017
ಖಳನಾಯಕಿ ನಾನಲ್ಲ...

ಸಿನಿಮಾ
ಖಳನಾಯಕಿ ನಾನಲ್ಲ...

15 Dec, 2017
ಈ ವಾರ ತೆರೆಗೆ

ಸಿನಿಮಾ
ಈ ವಾರ ತೆರೆಗೆ

15 Dec, 2017
ಶ್ವೇತ ಸುಂದರಿಯ ಅಂತರಂಗ

ಸಿನಿಮಾ
ಶ್ವೇತ ಸುಂದರಿಯ ಅಂತರಂಗ

15 Dec, 2017
ಗುಡಿಸಲಿನಲ್ಲಿ ಅರಳಿದ ಗುಲಾಬಿ

ಸಿನಿಮಾ
ಗುಡಿಸಲಿನಲ್ಲಿ ಅರಳಿದ ಗುಲಾಬಿ

15 Dec, 2017