ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೆಬ್‌ಲಿಂಕ್‌ ಹೋಮ್‌ ಸ್ಕ್ರೀನ್‌ಗೆ ಆ್ಯಡ್‌ ಮಾಡಲು...

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾದ ಮೇಲೆ ಪ್ರತಿದಿನ ಹಲವು ವೆಬ್‌ಸೈಟ್‌ಗಳನ್ನು ಬ್ರೌಸ್‌ ಮಾಡುವುದು ಸಾಮಾನ್ಯವಾಗಿದೆ. ಪ್ರತಿದಿನ ನೀವು ಬ್ರೌಸ್‌ ಮಾಡುವ ವೆಬ್‌ಸೈಟ್‌ನ ಆ್ಯಪ್‌ ಲಭ್ಯವಿದ್ದರೆ ನೀವು ಅದನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಆದರೆ, ಆ್ಯಪ್ ಇಲ್ಲದ ವೆಬ್‌ಸೈಟ್‌ಗಳಿಗೆ ಪ್ರತಿದಿನವೂ ಬ್ರೌಸರ್‌ ಮೂಲಕ ಭೇಟಿ ನೀಡಬೇಕಾಗುತ್ತದೆ. ಇದಕ್ಕಾಗಿ ಬ್ರೌಸರ್‌ ತೆರೆದು ನೀವು ಭೇಟಿ ನೀಡಬೇಕಿರುವ ವೆಬ್‌ಸೈಟ್‌ನ ಯುಆರ್‌ಎಲ್‌ ಟೈಪ್‌ ಮಾಡಬೇಕಾಗುತ್ತದೆ. ಹೀಗೆ ಪ್ರತಿ ಬಾರಿಯೂ ಆಯಾ ವೆಬ್‌ಸೈಟ್‌ಗೆ ಭೇಟಿ ನೀಡಬೇಕಾದಾಗಲೆಲ್ಲಾ ಬ್ರೌಸರ್‌ ತೆರೆದು ಯುಆರ್‌ಎಲ್ ಅಥವಾ ಆ ವೆಬ್‌ಸೈಟ್‌ ಹೆಸರನ್ನು ಟೈಪ್‌ ಮಾಡುವ ಬದಲು ಆ ಸೈಟ್‌ ಅನ್ನು ಆ್ಯಪ್‌ನಂತೆ ಮೊಬೈಲ್‌ನಲ್ಲಿ ಸೇವ್‌ ಮಾಡಿಕೊಳ್ಳಬಹುದು. ವೆಬ್‌ಸೈಟ್‌ ಲಿಂಕ್‌ ಅನ್ನು ಆ್ಯಪ್‌ನಂತೆ ಡಿವೈಸ್‌ನಲ್ಲಿ ಸೇವ್‌ ಮಾಡುವುದು ಅಥವಾ ಹೋಮ್‌ಸ್ಕ್ರೀನ್‌ಗೆ ಆ್ಯಡ್‌ ಮಾಡುವುದು ಹೇಗೆ ಎಂಬ ಬಗ್ಗೆ ಈ ವಾರ ತಿಳಿಯೋಣ.

ಮೊದಲು ಮೊಬೈಲ್‌ನಲ್ಲಿ ಬ್ರೌಸರ್‌ ತೆರೆಯಿರಿ. ನೀವು ಯಾವ ವೆಬ್‌ಸೈಟ್‌ ಅನ್ನು ಹೋಮ್‌ಸ್ಕ್ರೀನ್‌ಗೆ ಆ್ಯಡ್‌ ಮಾಡಬೇಕೋ ಅದರ ಯುಆರ್‌ಎಲ್‌ ಟೈಪ್‌ ಮಾಡಿ ಓಕೆ ಒತ್ತಿ. ವೆಬ್‌ಸೈಟ್‌ನ ಹೋಮ್‌ ಪೇಜ್‌ ತೆರೆದ ಬಳಿಕ ಬ್ರೌಸರ್‌ನ ಮೇಲ್ಭಾಗದಲ್ಲಿ ಬಲಕ್ಕೆ ಕಾಣುವ ಮೂರು ಚುಕ್ಕೆಯ ಸೆಟ್ಟಿಂಗ್ಸ್‌ ಆಯ್ಕೆ ಮೇಲೆ ಕ್ಲಿಕ್‌ ಮಾಡಿ. ಇಲ್ಲಿ ಕಾಣುವ ಆಯ್ಕೆಗಳಲ್ಲಿ Add to Home screen ಮೇಲೆ ಕ್ಲಿಕ್ಕಿಸಿ. ಈಗ ತೆರೆದುಕೊಳ್ಳುವ ಆಯ್ಕೆಯಲ್ಲಿ ಆ ವೆಬ್‌ಸೈಟ್‌ನ ಹೆಸರು ಹಾಗೂ ವಿವರ ಕಾಣಿಸಿ ಕೊಳ್ಳುತ್ತದೆ. ಇಲ್ಲಿ ನಿಮಗೆ ಬೇಕಾದ ಹೆಸರಿನಲ್ಲಿ ಆ ಲಿಂಕ್ ಸೇವ್‌ ಮಾಡಿಕೊಳ್ಳಬಹುದು. ಇಲ್ಲವಾದರೆ ಅಲ್ಲಿ ಕಾಣಿಸಿಕೊಳ್ಳುವ ಹೆಸರಿನಲ್ಲೇ ಉಳಿಸಿಕೊಳ್ಳಬಹುದು. ಈ ಲಿಂಕ್‌ ಅನ್ನು ಹೋಮ್‌ ಸ್ಕ್ರೀನ್‌ಗೆ ಆ್ಯಡ್‌ ಮಾಡಲು Add ಮೇಲೆ ಕ್ಲಿಕ್‌ ಮಾಡಿ. ಈಗ ನೀವು ಆಯ್ಕೆ ಮಾಡಿದ ವೆಬ್‌ಸೈಟ್‌ನ ಲಿಂಕ್‌ ಆ ಸೈಟ್‌ನ ಐಕಾನ್‌ ಜತೆಗೆ ನಿಮ್ಮ ಮೊಬೈಲ್‌ನ ಹೋಮ್‌ಸ್ಕ್ರೀನ್‌ನಲ್ಲಿ ಸೇವ್‌ ಆಗಿರುತ್ತದೆ. ಬೇಕೆಂದಾಗ ಆ ಲಿಂಕ್‌ ಮೇಲೆ ಕ್ಲಿಕ್‌ ಮಾಡಿದರೆ ಸಾಕು ಬ್ರೌಸರ್‌ನಲ್ಲಿ ಆ ವೆಬ್‌ಸೈಟ್‌ ಪುಟ ತೆರೆದುಕೊಳ್ಳುತ್ತದೆ.

ಹೀಗೆ ಯಾವ ಯಾವ ವೆಬ್‌ಸೈಟ್‌ಗಳು ಬೇಕೋ ಆ ವೆಬ್‌ಸೈಟ್‌ಗಳ ಲಿಂಕ್‌ ಅನ್ನು ಹೋಮ್‌ಸ್ಕ್ರೀನ್‌ಗೆ ಆ್ಯಡ್‌ ಮಾಡಿಕೊಳ್ಳಬಹುದು. ಒಂದು ವೇಳೆ ವೆಬ್‌ಸೈಟ್‌ ಒಂದರ ಲಿಂಕ್‌ ಬೇಡ ಎಂದಾದರೆ ಆ ಲಿಂಕ್‌ ಮೇಲೆ ಲಾಂಗ್‌ ಪ್ರೆಸ್‌ ಮಾಡಿ. ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಾಣುವ ರಿಮೂವ್‌ ಕಡೆಗೆ ಎಳೆದು ಬಿಡಿ. ಈಗ ಆ ಲಿಂಕ್‌ ನಿಮ್ಮ ಹೋಮ್‌ಸ್ಕ್ರೀನ್‌ನಿಂದ ಅಳಿಸಿ ಹೋಗುತ್ತದೆ. ಆ್ಯಪ್‌ ಇಲ್ಲದ ವೆಬ್‌ಸೈಟ್‌ಗಳು ಮಾತ್ರವಲ್ಲ ಆ್ಯಪ್‌ ಇರುವ ವೆಬ್‌ಸೈಟ್‌ನ ಲಿಂಕ್‌ ಅನ್ನೂ ಈ ರೀತಿ ಸೇವ್‌ ಮಾಡಿಕೊಳ್ಳಬಹುದು. ಹೆಚ್ಚು ಆ್ಯಪ್‌ಗಳಿಗೆ ಡಿವೈಸ್‌ನಲ್ಲಿ ಸ್ಪೇಸ್‌ ಇಲ್ಲದವರು ಬೇಕಾದ ವೆಬ್‌ಸೈಟ್‌ಗಳ ಲಿಂಕ್‌ ಅನ್ನು ಈ ರೀತಿ ಡಿವೈಸ್‌ನಲ್ಲಿ ಸೇವ್‌ ಮಾಡಿಕೊಂಡು ಬೇಕೆಂದಾಗ ತೆರೆದುಕೊಳ್ಳಬಹುದು. ಮೊಬೈಲ್‌ ಸೈಟ್‌ ರೂಪದಲ್ಲಿ ತೆರೆದು ಕೊಳ್ಳುವ ಈ ಲಿಂಕ್‌ಗಳು ಹೆಚ್ಚೂ ಕಡಿಮೆ ಆ್ಯಪ್ ಬಳಸಿದ ಅನುಭವವನ್ನೇ ನೀಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT