ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬಾಮ ಉಪನ್ಯಾಸಕ್ಕೆ ₹2.5 ಕೋಟಿ!

Last Updated 21 ಸೆಪ್ಟೆಂಬರ್ 2017, 6:32 IST
ಅಕ್ಷರ ಗಾತ್ರ

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ಅಮೆರಿಕದ ವಾಲ್‌ಸ್ಟ್ರೀಟ್‌ ನಲ್ಲಿ ಸೋಮವಾರ ಉಪನ್ಯಾಸ ನೀಡಲಿದ್ದಾರೆ. ಇದಕ್ಕಾಗಿ ಅವರು ಹಣ ಪಡೆಯಲಿದ್ದಾರೆ.

ನ್ಯೂಯಾರ್ಕ್ ಟ್ರೇಡಿಂಗ್ ಕಂಪೆನಿ ಕ್ಯಾಂಟರ್ ಫ್ರಿಡ್ಜ್‌ಗೆರಾಲ್ಡ್ ಆಯೋಜಿಸಿರುವ ವಿಚಾರ ಸಂಕಿರಣದಲ್ಲಿ ಅಮೆರಿಕದ ಆರೋಗ್ಯಸೇವೆ ಉದ್ಯಮದ ಕುರಿತು ಅವರು ಮಾತನಾಡಲಿದ್ದಾರೆ.

2010ರಲ್ಲಿ ಅವರು ಜಾರಿಗೊಳಿಸಿದ್ದ ಆರೋಗ್ಯ ಕಾರ್ಯಕ್ರಮ ಒಬಾಮಕೇರ್ ಎಂದೇ ಪ್ರಸಿದ್ಧವಾಗಿತ್ತು. ಈ ಕಾರ್ಯಕ್ರಮದ ಬಗ್ಗೆ ಒಬಾಮ ವಿಷಯ ಮಂಡಿಸಲಿದ್ದಾರೆ. ಇದಕ್ಕಾಗಿ ಅವರು ಸುಮಾರು ₹2.5 ಕೋಟಿ ಪಡೆಯಲಿದ್ದಾರೆ ಎನ್ನಲಾಗಿದೆ.

ಷಿಕಾಗೊದಲ್ಲೂ ಒಬಾಮ ಉಪನ್ಯಾಸ ನೀಡಿದ್ದರು. ಅವರು ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿದ ಬಳಿಕ ವಾಲ್‌ಸ್ಟ್ರೀಟ್‌ನಲ್ಲಿ ನೀಡುತ್ತಿರುವ ಮೊದಲ ಉಪನ್ಯಾಸ ಇದಾಗಿದೆ. ಈ ಮೊದಲು ಕೆನಡಾ, ಜರ್ಮನಿ, ಇಟಲಿ, ಸ್ಕಾಟ್ಲೆಂಟ್, ಇಂಡೊನೇಷ್ಯಾ, ದಕ್ಷಿಣ ಕೊರಿಯಾದಲ್ಲಿ ಹಣ ಪಡೆದು ಭಾಷಣ ಮಾಡಿದ್ದಾರೆ.

‘ಕಡಿಮೆ ಆದಾಯದ ಯುವಜನರಿಗೆ ಉದ್ಯೋಗ ಹಾಗೂ ತರಬೇತಿ ನೀಡುವ ಷಿಕಾಗೊದ ಸ್ವಯಂಸೇವಾ ಸಂಸ್ಥೆಗೆ ತಮ್ಮ ಭಾಷಣದಿಂದ ಬಂದ ಹಣದಲ್ಲಿ ₹1.3 ಕೋಟಿ ದೇಣಿಗೆ ನೀಡಿದ್ದಾರೆ’ ಎಂದು ಅವರ ವಕ್ತಾರ ಕೆವಿನ್ ಲೆವಿಸ್ ತಿಳಿಸಿದ್ದಾರೆ. ಈ ರೀತಿ ಹಣ ಪಡೆದು ಉಪನ್ಯಾಸ ನೀಡಿದ್ದಕ್ಕೆ ಹಿಲರಿ ಕ್ಲಿಂಟನ್ ಅವರು ಟೀಕೆಗೆ ಗುರಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT