ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇ–ಟೋಲ್ ಸಂಗ್ರಹ ವ್ಯವಸ್ಥೆ ಜಾರಿ

ಫಾಸ್ಟ್ ಟ್ಯಾಗ್ ಮಾರ್ಗದಲ್ಲಿ ಬೇರೆ ವಾಹನ ಬಂದರೆ ದಂಡ
Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಫಾಸ್ಟ್ ಟ್ಯಾಗ್’ ಹೊಂದಿರುವ ವಾಹನಗಳ ಸರಾಗ ಸಂಚಾರಕ್ಕೆ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಟೋಲ್‌ ಸಂಗ್ರಹ ಕೇಂದ್ರಗಳ ಬಳಿ ಪ್ರತ್ಯೇಕ ಲೇನ್ ವ್ಯವಸ್ಥೆ ಮಾಡಲಾಗಿದ್ದು, ಅಲ್ಲಿ ಬೇರೆ ವಾಹನಗಳು ನುಗ್ಗಿದರೆ ದಂಡ ಹಾಕಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ಟೋಲ್ ಸಂಗ್ರಹ ಕೇಂದ್ರದ ಎರಡೂ ಬದಿಯಲ್ಲಿ  ಫಾಸ್ಟ್‌ ಟ್ಯಾಗ್‌ಗೆ ಪ್ರತ್ಯೇಕ ಲೇನ್‌ ಮೀಸಲಿಡಲಾಗಿದೆ. ವಾಹನ ಸವಾರರಿಗೆ ಈ ಬಗ್ಗೆ ಮಾಹಿತಿ ಕೊಡಲು ಅರ್ಧ ಕಿ.ಮೀ ದೂರದಲ್ಲೇ ಮಾಹಿತಿ ಫಲಕಗಳನ್ನು ಅಳವಡಿಸಲಾಗಿದೆ ಎಂದು ಎನ್.ಎಚ್.ಎ.ಐ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ ವೈ.ವೆಂಕಟರೆಡ್ಡಿ ಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

ಫಾಸ್ಟ್ ಟ್ಯಾಗ್ ವಾಹನಗಳಿಗೆ ಮೀಸಲಿರುವ ಮಾರ್ಗದಲ್ಲಿ ಬೇರೆ ವಾಹನಗಳು ಪ್ರವೇಶಿಸುತ್ತಿರುವ ದೂರುಗಳಿದ್ದು, ಅವುಗಳನ್ನು ತಡೆಯಲು ಸಿಬ್ಬಂದಿ ನೇಮಿಸಲಾಗಿದೆ. ನಿಯಮ ಮೀರಿ ಆ ಮಾರ್ಗದಲ್ಲಿ ಬರುವ ಬೇರೆ ವಾಹನಗಳಿಗೆ ದಂಡ ವಿಧಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಮೊಬೈಲ್ ಆ್ಯಪ್: ‘ಮೈ ಫಾಸ್ಟ್‌ ಟ್ಯಾಗ್‌’, ‘ಫಾಸ್ಟ್‌ ಟ್ಯಾಗ್‌ ಪಾರ್ಟನರ್‌’ ಎಂಬ ಎರಡು ಮೊಬೈಲ್ ಆ್ಯಪ್‌ ಗಳನ್ನು ಎನ್‌.ಎಚ್‌.ಎ.ಐ ಅಭಿವೃದ್ಧಿಪಡಿಸಿದೆ. ವಾಹನ ಮಾಲೀಕರು ಈ ಆ್ಯಪ್‌ ಗಳ ಮೂಲಕ ಫಾಸ್ಟ್‌ ಟ್ಯಾಗ್‌ ಖರೀದಿ ಮತ್ತು ರೀಚಾರ್ಜ್‌ ಮಾಡಬಹುದು. ಟೋಲ್‌ ಸಂಗ್ರಹ ಕೇಂದ್ರಗಳಲ್ಲೂ ಫಾಸ್ಟ್‌ ಟ್ಯಾಗ್‌ ಖರೀದಿ ಮಾಡಬಹುದು ಎಂದೂ ಮಾಹಿತಿ ನೀಡಿದರು.

ಟೋಲ್ ಕೇಂದ್ರಗಳಲ್ಲಿ ಹಾದುಹೋದ ಕೂಡಲೇ ತಮ್ಮ ಫಾಸ್ಟ್ ಟ್ಯಾಗ್ ಖಾತೆಯಲ್ಲಿದ್ದ ಹಣ ಟೋಲ್ ನಿರ್ವಾಹಕರ ಖಾತೆಗೆ ಸಂದಾಯ
ವಾಗಲಿದೆ. ಈ ಕುರಿತ ಮಾಹಿತಿ ವಾಹನಗಳ ಮಾಲೀಕರ ಮೊಬೈಲ್‌ಗೂ ಎಸ್.ಎಂ.ಎಸ್ ಮೂಲಕ ರವಾನೆಯಾ
ಗಲಿದೆ ಎಂದು ಅವರು ವಿವರಿಸಿದರು.

ಜಾಗೃತಿ ಕಾರ್ಯಕ್ರಮ: ಸಾರ್ವಜನಿಕರಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆ ಮತ್ತು ಬಳಕೆ ಕುರಿತು  ಜಾಗೃತಿ ಮೂಡಿಸಲಾಗುತ್ತಿದೆ. ಆಗಸ್ಟ್ 16ರಿಂದಲೇ ಕರಪತ್ರಗಳನ್ನು ಎಲ್ಲಾ ಟೋಲ್ ಕೇಂದ್ರಗಳಲ್ಲಿ ವಿತರಿಸಲಾಗುತ್ತಿದೆ ಎಂದೂ ಹೇಳಿದರು.

ಫಾಸ್ಟ್ ಟ್ಯಾಗ್ ವ್ಯವಸ್ಥೆಯಿಂದಾಗಿ ಗ್ರಾಹಕರು ಕಾದು ನಿಲ್ಲುವುದು ತಪ್ಪುವ ಜೊತೆಗೆ ಕಾಗದ ರಹಿತವಾಗಿ ವ್ಯವಹರಿಸಬಹುದು ಎಂದರು.

ಶೇ 7.5ರಷ್ಟು ಮರುಪಾವತಿ
ಫಾಸ್ಟ್ ಟ್ಯಾಗ್ ಅಳವಡಿಕೆ ಮಾಡಿಕೊಳ್ಳಲು ವಾಹನಗಳ ಮಾಲೀಕರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಶೇ 7.5 ಹಣ ಮರುಪಾವತಿ ಮಾಡಲು ಎನ್‌.ಎಚ್.ಎ.ಐ ತೀರ್ಮಾನಿಸಿದೆ. 2018ರ ಮಾರ್ಚ್ 31ರೊಳಗೆ ಫಾಸ್ಟ್ ಟ್ಯಾಗ್ ಅಳವಡಿಸಿಕೊಳ್ಳುವವರಿಗೆ ಮಾತ್ರ ಇದರ ಲಾಭ ದೊರಕಲಿದೆ.

*
ಫಾಸ್ಟ್ ಟ್ಯಾಗ್ ಅಳವಡಿಸಿಕೊಂಡ ವಾಹನಗಳು ಪ್ರತ್ಯೇಕ ಮಾರ್ಗದಲ್ಲಿ ಸರಾಗವಾಗಿ ಸಾಗಬಹುದು.
–ವೈ.ವೆಂಕಟರೆಡ್ಡಿ ಪ್ರಸಾದ್, ಎನ್.ಎಚ್.ಎ.ಐ ಪ್ರಾದೇಶಿಕ ಪ್ರಧಾನ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT