ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕುಂಕುಮದಲ್ಲಿ ಅಧಿಕ ಪ್ರಮಾಣದ ಸೀಸ’

Last Updated 20 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಭಾರತೀಯ ಸಂಪ್ರದಾಯದಲ್ಲಿ ಮಹತ್ವದ ಪಾತ್ರ ವಹಿಸಿರುವ ಕುಂಕುಮದಲ್ಲಿ (ಸಿಂಧೂರ) ಸೀಸವನ್ನು ಅತಿ ಹೆಚ್ಚು ಪ್ರಮಾಣದಲ್ಲಿ ಬಳಸಿರುವ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ.

ಸಂಶೋಧನೆಗಾಗಿ ಭಾರತ ಮತ್ತು ಅಮೆರಿಕದ ಕೆಲವೆಡೆಯಿಂದ ಕುಂಕುಮದ ಮಾದರಿ ಸಂಗ್ರಹಿಸಲಾಗಿತ್ತು. ಕೆಲವು ಕುಂಕುಮಗಳಲ್ಲಿ ಸೀಸದ ಬಳಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣ, ಇದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಒಟ್ಟು 118 ಕುಂಕುಮದ ಪುಡಿಯ ಮಾದರಿಗಳನ್ನು ಪರೀಕ್ಷಿಸಲಾಗಿತ್ತು. ಅದರಲ್ಲಿ 85 ಮಾದರಿಗಳು ನ್ಯೂಜೆರ್ಸಿಯ ಸೌತ್‌ ಏಷ್ಯಾ ಸ್ಟೋರ್‌ಗಳಿಂದ ಬಂದಿದ್ದರೆ ಉಳಿದವು ಮುಂಬೈ ಹಾಗೂ ನವದೆಹಲಿಯಿಂದ ಬಂದಿದ್ದವು. ಅವುಗಳಲ್ಲಿ ಶೇ 80 ರಷ್ಟು ಮಾದರಿಗಳಲ್ಲಿ ಸೀಸದ ಮಟ್ಟ ಮಿತಿಗಿಂತಲೂ ಅಧಿಕ ಇದ್ದವು.

ಒಂದು ಗ್ರಾಂನಷ್ಟು ಪುಡಿಯಲ್ಲಿ ಒಂದು ಮೈಕ್ರೋಗ್ರಾಂ ಸೀಸದ ಅಂಶವಿರುವುದು ಕಂಡು ಬಂದಿದೆ. ಇದು ಬಹಳ ಅಪಾಯಕಾರಿಯಾದುದು ಎಂದು ಈ ಸಂಶೋಧನಾ ತಂಡದಲ್ಲಿದ್ದ ಪ್ರೊ. ಡೆರೆಕ್‌ ಶೇಂಡೆಲ್‌ ಹೇಳಿದ್ದಾರೆ.

ಇಷ್ಟೇ ಅಲ್ಲದೆ, ಭಾರತ ಮತ್ತು ನೈಜೀರಿಯಾದಲ್ಲಿ ಹೆಚ್ಚಾಗಿ ಬಳಸುತ್ತಿರುವ ಕಾಜಲ್‌ ಅನ್ನು ಕೂಡ ಅಮೆರಿಕದ ಆಹಾರ ಮತ್ತು ಔಷಧ ಆಡಳಿತ (ಎಫ್‌ಡಿಎ) ನಿಷೇಧಿಸಿದೆ. ಈಗ ಕುಂಕುಮದ ಕುರಿತು ಸಂಶೋಧನೆ ನಡೆಸಿದ ಬಳಿಕ, ಇದರ ಬಳಕೆಯ ಕುರಿತು ಎಚ್ಚರಿಕೆಯನ್ನು ಎಫ್‌ಡಿಎ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT