ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುತ್ತಿರುವ ಹೋರಾಟದ ಕಾವು

Last Updated 21 ಸೆಪ್ಟೆಂಬರ್ 2017, 5:06 IST
ಅಕ್ಷರ ಗಾತ್ರ

ಮೂಡಲಗಿ: ಮೂಡಲಗಿ ತಾಲ್ಲೂಕು ರಚನೆಗಾಗಿ ಸ್ಥಳೀಯ ಕಲ್ಮೇಶ್ವರ ವೃತ್ತದಲ್ಲಿ ಮಂಗಳವಾರ ನಡೆಸಿರುವ 13ನೇ ದಿನದ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಖಾನಟ್ಟಿ ಗ್ರಾಮಸ್ಥರು ಸೇರಿದಂತೆ ವಿವಿಧ ಸಂಘಟನೆಗಳ  ಪದಾಧಿಕಾರಿಗಳು, ಪಕ್ಷಗಳ ಮುಖಂಡರು, ರೈತ ಸಂಘಗಳ ಪದಾಧಿಕಾರಿಗಳು ಮತ್ತು ಮಹಿಳೆಯರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದರು.

ಧರಣಿ ಸ್ಥಳದಲ್ಲಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆಗೆ ಧ್ವನಿಗೂಡಿಸಿದರು. ಡೊಳ್ಳು, ಕರಡಿ ಮಜಲು ವಾದ್ಯಗಳ ಅಬ್ಬರವು ಪ್ರತಿಭಟನೆಯ ಕಾವನ್ನು ಏರಿಸಿತು. ಗ್ರಾಮದ ಮುಖಂಡರು ಹೋರಾಟ ಸಮಿತಿಯಗೆ ಮನವಿ ಸಲ್ಲಿಸಿ ‘ಸರ್ಕಾರವು ಕೆಲವೇ ದಿನಗಳಲ್ಲಿ ಮೂಡಲಗಿ ತಾಲ್ಲೂಕು ರಚನೆ ಮಾಡಬೇಕು. ಇಲ್ಲದಿದ್ದರೆ ಗ್ರಾಮ ಪಂಚಾಯ್ತಿ ಸದಸ್ಯರು ರಾಜೀನಾಮೆ ನೀಡಿ ಉಗ್ರ ಹೋರಾಟಕ್ಕೆ ನಿಲ್ಲಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಕನ್ನಡ ರಕ್ಷಣಾ ಸಮಿತಿ ಬೆಳಗಾವಿ ಜಿಲ್ಲಾ ಘಟಕದ ಪ್ರಭಾರಿ ಅಧ್ಯಕ್ಷ ಸಂತೋಷ ಅರಳಿಕಟ್ಟಿ, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಶ್ರೀದೇವಿ ಬಳೋಬಾಳ, ಉಪಾಧ್ಯಕ್ಷೆ ಪಿಯಾಂಕಾ ಕಟ್ಟಿ, ವಿಜಯ ಕೇರಿ, ರಮೇಶ ಪಾಸೋಡಿ, ಶೋಭಾ ತೊಂಡಿಕಟ್ಟಿ, ಲತಾ ಕಳ್ಳಿಮನಿ ಮನವಿ ನೀಡಿ ಹೋರಾಟಕ್ಕೆ ಬೆಂಬಲಿಸಿದರು.

ಕಟ್ಟಡ ಕಾರ್ಮಿಕರ ಸಂಘ, ಜವಳಿ ವರ್ತಕರ ಸಂಘ, ಶೇಖ ಮೌಲಾ ಮೊಹಲ್ಲಾ ಜಮಾತ್‌ಗಳ ಪದಾಧಿಕಾರಿ ಗಳು, ಸದಸ್ಯರು ಧರಣಿ ಸ್ಥಳಕ್ಕೆ ಭೇಟಿ ನೀಡಿ  ಹೋರಾಟಕ್ಕೆ  ಬೆಂಬಲ ನೀಡುತ್ತೇವೆ ಎಂದು ಮನವಿ ಸಲ್ಲಿಸಿದರು. ನಿವೃತ್ತ ಶಿಕ್ಷಕರು, ನಿವೃತ್ತ ಅಧಿಕಾರಿ ಗಳು, ದೇವಸ್ಥಾನಗಳ ಆರ್ಚಕರು ಸರ್ಕಾರ ಮತ್ತು ಜನಪ್ರತಿನಿಧಿಗಳನ್ನು ತೀವ್ರವಾಗಿ ನಿಂದಿಸಿದರು.

ಆಚಾರ್ಯ ರಾಘವೇಂದ್ರ ತೆಗ್ಗಿ ಮಾತನಾಡಿ ‘ಸರ್ಕಾರದ ವಿರುದ್ಧ ತಾಳ್ಮೆ ಯಿಂದ ಹೋರಾಡಿ ಗೆಲ್ಲೋಣ’ ಎಂದರು. ಮೂಡಲಗಿಯನ್ನು ತಾಲ್ಲೂಕು ಪಟ್ಟಿಯಿಂದ ಕೈಬಿಟ್ಟಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಖಂಡಿಸಿ ಧುರೀಣರಾದ ಅಶೋಕ ಪೂಜೇರಿ, ಈರಪ್ಪ ಕಡಾಡಿ, ಈರಪ್ಪ ಬೆಳಕೂಡ ಮಾತನಾಡಿದರು.

ಕಮಲವ್ವ ಹಳಬರ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿ ಬೆಳಿಗ್ಗೆಯಿಂದ ಧರಣಿ ವೇದಿಕೆಯಲ್ಲಿ ಭಾಗವಹಿಸಿದ್ದು ಗಮನ ಸೆಳೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಕೆಲವು ಜನಪ್ರತಿನಿಧಿಗಳ ಭಾವಚಿತ್ರಕ್ಕೆ ಚಪ್ಪಲಿಗಳ ಹಾರ ಹಾಕಿ ಕಸಬರಿಗೆ ಸೇವೆ ಮಾಡಿ ಅಣುಕು ಪ್ರದರ್ಶನಕ್ಕೆ ಮುಂದಾದರು. 

ಪುರಸಭೆ ಮಾಜಿ ಅಧ್ಯಕ್ಷೆ ಗಂಗವ್ವ ಬಳಿಗಾರ, ಮಾಲಾ ಆಶ್ರೀತ್‌, ನಿರ್ಮಲಾ ಹಿರೇಮಠ, ಸುಜಾತಾ ಹಿರೇಮಠ, ಶಾರದಾ ಪೂಜೇರಿ, ಬಸವರಾಜ ಮಡಿವಾಳರ, ಶಂಕರಯ್ಯ ಹಿರೇಮಠ, ಆದಮ್‌ ತಾಂಬೋಳಿ, ಎಸ್.ಜಿ. ಗೋಡಿಗೌಡರ, ಸುಭಾಷ ತುಪ್ಪದ, ಬಸವರಾಜ ಕೌಜಲಗಿ, ಸಿದ್ದಪ್ಪ ಹಳ್ಳೂರ, ಹಣಮಂತ ಲಂಗೋಟಿ, ರವಿ ತುಪ್ಪದ, ಚೇತನ ರಡೇರಟ್ಟಿ, ಬಸವರಾಜ ನಿಂಗನೂರ, ಶ್ರೀಶೈಲ್‌ ಅಂಗಡಿ, ಸದಾಶಿವ ತಲಬಟ್ಟಿ, ಶಿವನಪ್ಪ ಗುದಗನ್ನವರ, ಉಷಾಂತ ಕೆಮ್ಮನಕೋಳ  ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT