ಸುರಪುರ:ನಗರದ ಸುಂದರ ತಪ್ಪಲು ಪ್ರದೇಶದಲ್ಲಿ ಇರುವ ಶತಮಾನದ ಇತಿಹಾಸ ಹೊಂದಿರುವ ಫಾಲನ್ ಬಂಗಲೆ ಅವಸಾನದ ಅಂಚಿನಲ್ಲಿದೆ. ಹಂಪೆಯ ಕಮಲ ಮಹಲ್ ಮಾದರಿಯಲ್ಲಿ ನಿರ್ಮಿಸಲಾಗಿರುವ ಈ ಬಂಗ್ಲಾ ನಿರ್ಲಕ್ಷ್ಯಕ್ಕೆ ಒಳಗಾಗಿದೆ.
ಫಾಲನ್ ಎಂಬ ಬ್ರಿಟಿಷ್ ಅಧಿಕಾರಿ 1854 ರಂದು ಈ ಕಟ್ಟಡ ನಿರ್ಮಿಸಿದ್ದರು. ಬ್ರಿಟಿಷ್ ಸರ್ಕಾರದ ಪ್ರತಿನಿಧಿಯಾಗಿದ್ದ ಅವರು ಈ ಕಟ್ಟಡವನ್ನು ತಮ್ಮ ಆಡಳಿತ ಕಚೇರಿಯನ್ನಾಗಿ ಮಾಡಿಕೊಂಡಿದ್ದರು.
ಇದಕ್ಕೆ ಅನತಿ ದೂರದಲ್ಲಿ ಇಂತಹ ಎರಡು ಮೂರು ಕಟ್ಟಡಗಳು ಇವೆ. ಎಲ್ಲವೂ ಶಿಥಿಲಗೊಂಡಿವೆ. ಆಗಿನ ಕಾಲಘಟ್ಟದಲ್ಲಿ ಕಟ್ಟಡಗಳು ಉತ್ತಮ ರೀತಿಯಲ್ಲಿ ಸದ್ಬಳಕೆಯಾಗುತ್ತಿದ್ದವು. ಆದರೆ ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಇವುಗಳತ್ತ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು.
ಐತಿಹಾಸಿಕ ಪರಂಪರೆಯ ಈ ಭವ್ಯ ಕಟ್ಟಡವನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕು. ವಸ್ತು ಸಂಗ್ರಹಾಲಯ ಇಲ್ಲವೇ ಗ್ರಂಥಾಲಯವನ್ನಾಗಿ ಈ ಕಟ್ಟಡವನ್ನು ಪರಿವರ್ತಿಸಬೇಕು. ರಾಜಾ ರಾಮಪ್ಪನಾಯಕ ಜೇಜಿ
ಮಾಜಿ ಸದಸ್ಯ, ಪುರಸಭೆ