ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಂಗ್ರೆಸ್‌ ತೊರೆಯುವುದಾಗಿ ಘೋಷಿಸಿದ ಹಿರಿಯ ನಾಯಕ ನಾರಾಯಣ ರಾಣೆ

Last Updated 21 ಸೆಪ್ಟೆಂಬರ್ 2017, 12:11 IST
ಅಕ್ಷರ ಗಾತ್ರ

ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ನಾಯಕ ನಾರಾಯಣ ರಾಣೆ ಅವರು ಪಕ್ಷ ತೊರೆಯುವುದಾಗಿ ಘೋಷಿಸಿದ್ದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡುವುದಾಗಿ ತೀಳಿಸಿದ್ದಾರೆ.

ಸಿಂಧುದುರ್ಗ್‌ ಜಿಲ್ಲೆಯ ಕೊಂಕಣ ತೀರ ಪ್ರದೇಶದಲ್ಲಿರುವ ಕುದಾಲ್‌ನಲ್ಲಿ ನಡೆಸಿದ ಬೆಂಬಲಿಗರ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಿರುವ ರಾಣೆ, ಮುಂದಿನ ನಡೆಯನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ‘ಬಹಳಷ್ಟು ಜನ ನನ್ನ ಜತೆ ಇದ್ದಾರೆ. ಕಾಂಗ್ರೆಸ್‌ ಹಾಗೂ ಶೀವಸೇನೆಗೆ ಸರಿಯಾದ ಪಾಠ ಕಲಿಸುತ್ತೇನೆ’ ಎಂದಿದ್ದಾರೆ.

ರಾಣೆ 1999ರಲ್ಲಿ ಶಿವಸೇನಾ–ಬಿಜೆಪಿ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದರು. ಶಿವಸೇನಾ ಸ್ಥಾಪಕ ಬಾಳ ಠಾಕ್ರೆ ಮರಣದ ನಂತರ ಪಕ್ಷದಲ್ಲಿ ಅವರ ಮಗ ಉದ್ಧವ್‌ ಠಾಕ್ರೆ ಪ್ರಾಬಲ್ಯ ಹೆಚ್ಚಾಯಿತು.

ಹೀಗಾಗಿ ರಾಣೆ 2005ರಲ್ಲಿ ಶಿವಸೇನೆಯಿಂದ ಹೊರನಡೆದಿದ್ದರು. ಈ ವೇಳೆ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದ ಕಾಂಗ್ರೆಸ್‌ ಮುಖ್ಯಮಂತ್ರಿ ಮಾಡುವುದಾಗಿ ಘೋಷಿಸಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ.

ಸದ್ಯ ಕಾಂಗ್ರೆಸ್‌ ತರೆಯುವುದಾಗಿ ಹೇಳಿರುವ ಅವರು ಬಿಜೆಪಿ ಜತೆ ಮಾತುಕತೆ ನಡೆಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT