ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಾಹ್ನದ ಮೇಲೆಯೇ ಅಪಘಾತಗಳು ಹೆಚ್ಚು!

ಶೇ.35ರಷ್ಟು ಅಪಘಾತಗಳು ಸಂಭವಿಸಿರುವುದು ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯೊಳಗೆ
Last Updated 21 ಸೆಪ್ಟೆಂಬರ್ 2017, 14:26 IST
ಅಕ್ಷರ ಗಾತ್ರ

ನವದೆಹಲಿ: ಮಧ್ಯಾಹ್ನದ ಮೇಲೆ ಅಪಘಾತಗಳ ಪ್ರಮಾಣ ಹೆಚ್ಚು ಎನ್ನುತ್ತಿದೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಬಿಡುಗಡೆ ಮಾಡಿರುವ ವಾರ್ಷಿಕ ವರದಿ.

2016ರಲ್ಲಿ ಸಂಭವಿಸಿರುವ ಶೇಕಡ 18ರಷ್ಟು ಅಪಘಾತಗಳು ಮಧ್ಯಾಹ್ನ 3ರಿಂದ ಸಂಜೆ 6 ಗಂಟೆಯೊಳಗೆ ಸಂಭವಿಸಿವೆ. ಶೇಕಡ 35ರಷ್ಟು ಅಪಘಾತಗಳು ಸಂಭವಿಸಿರುವುದು ಮಧ್ಯಾಹ್ನ 3ರಿಂದ ರಾತ್ರಿ 9 ಗಂಟೆಯೊಳಗೆ ಎನ್ನುತ್ತದೆ ಈ ವರದಿ.

2005ರಿಂದ 2016ರ ಅವಧಿಯಲ್ಲಿ ಭಾರತದಲ್ಲಿ ಸುಮಾರು 15 ಲಕ್ಷ (1,550,098) ಮಂದಿ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ.

2016ರಲ್ಲಿ ಪ್ರತಿ ದಿನ ಸರಾಸರಿ 1,317 ರಸ್ತೆ ಅಪಘಾತಗಳು ಸಂಭವಿಸಿವೆ. ಈ ಅಪಘಾತಗಳಿಂದ 1,50,785 ಮಂದಿ ಮೃತಪಟ್ಟಿದ್ದರೆ, 4,94,624 ಮಂದಿ ಗಾಯಗೊಂಡಿದ್ದಾರೆ. ಮೃತಪಟ್ಟವರ ಪೈಕಿ ಶೇಕಡ 25ರಷ್ಟು ಮಂದಿ 25ರಿಂದ 35 ವಯಸ್ಸಿನವರು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT