ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಖಲಿ’ ಆಗುತ್ತಾರಾ ಸುಶಾಂತ್‌

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕುಸ್ತಿ ಲೋಕದಲ್ಲಿ ‘ಖಲಿ’ ಎಂದೇ ಪರಿಚಿತರಾಗಿರುವ ದಲೀಪ್ ಸಿಂಗ್ ರಾಣಾ ಜೀವನಚರಿತ್ರೆ ಸಿನಿಮಾ ಆಗಲಿದೆ. ಖಲಿ ಪಾತ್ರ ನಿರ್ವಹಿಸುವ ಅವಕಾಶ ಬಾಲಿವುಡ್‌ನ ಸುಂದರಾಂಗ ಜಾಣ ಸುಶಾಂತ್‌ ಸಿಂಗ್‌ ರಜಪೂತ್‌ ಅವರಿಗೆ ಸಿಕ್ಕಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ಬಾಲಿವುಡ್‌ ಮಂದಿ ಮತ್ತು ಖಲಿಯ ಅಭಿಮಾನಿಗಳು ತಲೆಮೇಲೆ ಕೈಹೊತ್ತು ಕುಳಿತಿದ್ದಾರಂತೆ. ಖಲಿ ಮತ್ತು ಸುಶಾಂತ್‌ ಸಿಂಗ್‌ ರಜಪೂತ್‌ನ ನೋಟವನ್ನು ಕಲ್ಪಿಸಿಕೊಂಡರೆ ನೀವೂ ಹಾಗೇ ಮಾಡುತ್ತೀರಿ.

7.1 ಅಡಿ ಎತ್ತರವಿರುವ ಖಲಿ, ಬರೋಬ್ಬರಿ 176 ಕೆ.ಜಿ. ತೂಕ ಇದ್ದಾರೆ. 5.10 ಅಡಿ ಎತ್ತರದ ಸುಶಾಂತ್ ಕೇವಲ 78 ಕೆ.ಜಿ ತೂಗುತ್ತಾರೆ. 'ಈ ಸುಶಾಂತ್ ಏನಾದರೂ 'ಖಲಿ' ಆಗಬೇಕಾದರೆ, ಪವಾಡವೇ ನಡೆಯಬೇಕು' ಎಂದು ಬಾಲಿವುಡ್‌ ಮಂದಿ ಮಾತನಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಜೀವನಚರಿತ್ರೆ ಆಧರಿತ ಸಿನಿಮಾದಲ್ಲಿ ನಟಿಸಿರುವ ಸುಶಾಂತ್‌, ಪ್ಯಾರಾಲಿಂಪಿಕ್‌ ಈಜು ಪಟು ಮುರಳಿಕಾಂತ್‌ ಪೇಟ್ಕರ್‌ ಜೀವನಕತೆಯ ಸಿನಿಮಾಕ್ಕೂ ಸಹಿ ಮಾಡಿದ್ದಾರೆ. ‘ಕೇದಾರನಾಥ್‌’ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿರುವ ಸುಶಾಂತ್‌ ಮುಂದಿನ ಚಿತ್ರ ‘ದೂರ್‌ ಕೆ ಚಂದಮಾಮ್‌’ ಇನ್ನಷ್ಟೇ ಸೆಟ್ಟೇರಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT