ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಜುಗರದ ಪಯಣ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

*ಸುಕೃತ ಎಸ್‌.

‘ನಮ್ಮ ಮೆಟ್ರೊ’ ಬೆಂಗಳೂರಿಗರ ಸಮಯ ಮತ್ತು ಶ್ರಮವನ್ನು ಉಳಿಸಿದೆ. ರಸ್ತೆಗಳಲ್ಲಿ ಟ್ರಾಫಿಕ್‌ ಮಧ್ಯೆ ನಿಂತು ಸೊರಗುವುದಕ್ಕಿಂತ ಮೆಟ್ರೊದಲ್ಲಿ ಬರುವುದು ಸುಲಭ ಎನಿಸುತ್ತೆ. ಮೆಟ್ರೊ ವೇಗದಿಂದಾಗಿ ದಿನಕ್ಕೆ ಒಂದು ತಾಸು ಅನೇಕ ಹೆಣ್ಣು ಮಕ್ಕಳಿಗೆ ಉಳಿತಾಯವಾಗುತ್ತಿದೆ. ಅವರು ಈ ಅವಧಿಯನ್ನು ಮಕ್ಕಳಿಗೆ ಅಥವಾ ಕುಟುಂಬದೊಡನೆ ಕಳೆಯಲು ವಿನಿಯೋಗಿಸುತ್ತಿದ್ದಾರೆ.

ಮೆಟ್ರೊದಿಂದ ಇಷ್ಟೆಲ್ಲಾ ಅನುಕೂಲವಿದ್ದರು ಅದು ಮಹಿಳಾ ಸ್ನೇಹಿ ಎನಿಸುತ್ತಿಲ್ಲ. ಬಸ್‌ಗಳಲ್ಲಿ ಸಂಚರಿಸುವಾಗ ಹೆಣ್ಣುಮಕ್ಕಳಿಗೆ ಅಷ್ಟೊಂದು ಸಮಸ್ಯೆ ಉಂಟಾಗುವುದಿಲ್ಲ. ಯಾಕೆಂದರೆ, ಅಲ್ಲಿ ಹೆಂಗಸರಿಗೆ ಮತ್ತು ಗಂಡಸರಿಗೆ ಪ್ರತ್ಯೇಕವಾಗಿ ಜಾಗಗಳನ್ನು ಗುರುತಿಸಲಾಗಿದೆ. ಮೆಟ್ರೊದಲ್ಲಿ ಈ ಅನುಕೂಲ ಇಲ್ಲ.

ಮಹಿಳೆಯರಿಗೆ ಹೆಚ್ಚು ತೊಂದರೆ, ಕಿರಿಕಿರಿ ನೀಡುವುದು ಕೇವಲ ಯುವಕರಷ್ಟೇ ಅಲ್ಲ. ಅವಕಾಶ ಸಿಕ್ಕಾಗ ಹೆಣ್ಣುಮಕ್ಕಳಿಗೆ ಮುಜುಗರ ಉಂಟಾಗುವಂತೆ ನಡೆದುಕೊಳ್ಳುವಲ್ಲಿ ಮಧ್ಯವಯಸ್ಸಿನ ಗಂಡಸರೂ ಕಡಿಮೆಯೇನಿಲ್ಲ. ದಟ್ಟಣೆ ಇರುವಾಗಲೂ, ಜೇಬಿನಲ್ಲಿ ಕೈ ಇರಿಸಿಕೊಂಡು ಇಲ್ಲುವುದನ್ನು ಹೇಗೆ ಸಮರ್ಥಿಸಲು ಸಾಧ್ಯ? ಪಕ್ಕದಲ್ಲಿ ಹೆಣ್ಣುಮಗಳೊಬ್ಬಳು ಇದ್ದಾಗಲೂ ಇಂತಹ ವರ್ತನೆ ಸರಿಯೇ?

ಬ್ಯಾಗ್‌ಗಳನ್ನು ಬೆನ್ನಿಗೆ ನೇತುಹಾಕಿಕೊಂಡು ಮೆಟ್ರೊ ಪ್ರವೇಶಿಸಬಾರದು ಎನ್ನುವ ನಿಯಮ ಜಾರಿಯಲ್ಲಿದೆ. ಕೆಲ ಪುಂಡರ ಪಾಲಿಗೆ ಇದು ವರದಾನವಾಗಿದೆ. ಬ್ಯಾಗ್ ಕೆಳಗೆ ಇರಿಸುವ ನೆಪದಲ್ಲಿ ಹೆಣ್ಣುಮಗಳೊಬ್ಬಳ ಮೈ ಸವರುವಂತೆ ಬೆರಳು ಆಡಿಸುವುದು ಅಸಹ್ಯ ಹುಟ್ಟಿಸುತ್ತದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದಾಗಲೂ ಇಂಥದ್ದೇ ಅನುಭವಗಳು ಆಗುತ್ತವೆ. ರೈಲು ಹತ್ತುವ ಭರದಲ್ಲಿ ಮೈಮೇಲೆ ಬೀಳಲು ಅನೇಕರು ಹಾತೊರೆಯುತ್ತಾರೆ. ಇಂಥವರಿಗೆ ಸಭ್ಯತೆಯ ಪಾಠ ಯಾರು ಹೇಳಬೇಕು?

ಗಂಡಸರ ಇಂತ ವರ್ತನೆಗಳನ್ನು ಅನುಭವಿಸುವ ಹೆಣ್ಣುಮಕ್ಕಳು ಅನೇಕ ಬಾರಿ ತಾವಾಗಿಯೇ ದೂರ ಸರಿಯುವುದು, ಸಿಟ್ಟು ಮುಖ ಮಾಡುವುದು, ನೇರವಾಗಿ ಹೇಳುವುದು ಎಲ್ಲವನ್ನೂ ಮಾಡುತ್ತಾರೆ. ಆದರೆ ಏನೂ ಪ್ರಯೋಜನವಾಗಿಲ್ಲ.

ಮೆಟ್ರೊ ನಿಗಮ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಬೋಗಿ ನೀಡಬೇಕು ಅಥವಾ ಸ್ಥಳ ನಿಗದಿ ಮಾಡಬೇಕು. ಅದೊಂದೇ ಇದಕ್ಕೆ ಪರಿಹಾರ ಎನಿಸುತ್ತದೆ. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT