ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕ ಸಂಬೋಧನೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ವಾಮಿ ವಿವೇಕಾನಂದರು 1893ರ ಸೆ. 11 ರಂದು ಷಿಕಾಗೊ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಚರಿತ್ರಾರ್ಹ ಭಾಷಣಕ್ಕೆ ಈಗ 125 ವರ್ಷ.

ಒಂದು ಸೂಕ್ಷ್ಮ ವಿಚಾರ: ಸ್ವಾಮೀಜಿ ವೇದಿಕೆಯಿಂದ ಶ್ರೋತೃಗಳನ್ನು ಸಂಬೋಧಿಸಿದ್ದು ಹೇಗೆ? ಈಗ ‘ಮಹನೀಯರೆ ಮತ್ತು ಮಹಿಳೆಯರೆ’ ಅಥವಾ ‘ಸೋದರರೆ ಮತ್ತು ಸೋದರಿಯರೆ’ ಎಂದು ಸಂಬೋಧಿಸುವುದು ಸಾಮಾನ್ಯ. ವಿವೇಕಾನಂದರ ಬಹುತೇಕ ಜೀವನಚರಿತ್ರೆಗಳಲ್ಲಿ, ಅವರು ‘ಅಮೆರಿಕದ ಸೋದರ, ಸೋದರಿಯರೆ’ ಎಂದು ಸಂಬೋಧಿಸಿದರೆಂದು ಹೇಳಲಾಗಿದೆ’; ಕುವೆಂಪು ಕೂಡ ‘ಸ್ವಾಮಿ ವಿವೇಕಾನಂದ’ ಗ್ರಂಥದಲ್ಲಿ ‘ಅಮೆರಿಕದ ಭ್ರಾತೃ ಭಗಿನಿಯರೆ’ ಎಂದು ಸಂಬೋಧಿಸಿದರೆಂದೇ ಹೇಳುತ್ತಾರೆ.

ವಾಸ್ತವವಾಗಿ, ವಿವೇಕಾನಂದರು ಸಂಬೋಧಿಸಿದ್ದು, ಮಹಿಳೆಯರಿಗೆ ಆದ್ಯತೆ ಕೊಟ್ಟು, ‘ಅಮೆರಿಕದ ಸೋದರಿಯರೆ ಮತ್ತು ಸೋದರರೆ’ (Sisters and Brothers of America) ಎಂದು! ‘ಮಹನೀಯರೆ, ಮಹಿಳೆಯರೆ’ ಎಂಬ ಮಾಮೂಲು ಸಂಬೋಧನೆಯನ್ನು ಅವರು ವರ್ಜಿಸಿದ್ದು ಒಂದು ವಿಸ್ಮಯವಾದರೆ, ‘ಸೋದರಿಯರೆ ಮತ್ತು ಸೋದರರೆ’ ಎಂದು ಸಂಬೋಧಿಸಿದ್ದು ಇನ್ನೂ ದೊಡ್ಡ ವಿಸ್ಮಯ! ಆಗ ಇಡೀ ಸಭಾಂಗಣ ಚಪ್ಪಾಳೆಗಳ ಮೊಳಗಿನಿಂದ ತುಂಬಿಹೋಯಿತು: ‘ಸಾವಿರಾರು ಸಿಡಿಲುಗಳು ಕೋಲಾಟವಾಡುವಂತೆ ದೊಡ್ಡ ಸದ್ದಾಯಿತು’(–ಕುವೆಂಪು).

ಇದು ಮಹಿಳೆಯರ ಬಗೆಗೆ ವಿವೇಕಾನಂದರಿಗಿದ್ದ ಅತೀವ ಗೌರವದ ದ್ಯೋತಕ. ಆದರೆ ಈಗಲೂ ಸ್ತ್ರೀಯರ ಬಗೆಗೆ ಪುರುಷ ಸಮಾನವಾದ ಗೌರವ ಎಲ್ಲಿಯೂ ಇಲ್ಲವೆಂಬುದು ಚರಿತ್ರೆಯ ವಿಪರ್ಯಾಸ. ವಿವೇಕ ಸಂಬೋಧನೆ ಒಂದು ಸಣ್ಣ ಸಂಗತಿಯಾಗಿ ತೋರಬಹುದು; ದಿಟವಾಗಿ ಅದು ಸರ್ವೋದಯ ದೃಷ್ಟಿಯಿಂದ ಮಹತ್ವಪೂರ್ಣ!
–ಸಿ.ಪಿ.ಕೆ., ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT