ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ಯೆ– ರಾಜಕೀಯೋದ್ಯಮ!

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಗಾಂಧೀಜಿಯಿಂದ ಗೌರಿ ಲಂಕೇಶ್‌ವರೆಗೆ ಅನೇಕ ಉದಾರವಾದಿ ಮತ್ತು ಪ್ರಗತಿಪರ ಚಿಂತಕರು ಗುಂಡಿಗೆ ಬಲಿಯಾಗಿದ್ದಾರೆ. ಇಂಥ ಹತ್ಯೆಗಳ ಬಗ್ಗೆ ಮತ್ತೆ ಮತ್ತೆ ಚರ್ಚೆಗಳು ನಡೆಯುತ್ತವೆ. ಇದರ ಜೊತೆಗೆ ಗುಂಡಿಕ್ಕಿದವರ ಬಗ್ಗೆಯೂ ಯೋಚನೆ ಮಾಡುವುದು ಅಗತ್ಯ.

ಗೋಡ್ಸೆಯಂಥವರ ಕೃತ್ಯ ಹುಂಬತನದ್ದೇ ಇರಬಹುದು. ಇಂಥ ಕೆಲವರನ್ನು ನೇಣಿಗೇರಿಸಿದ ಕ್ರಮವೂ ಸರಿಯಿರಬಹುದು. ನಮಗೆ ಮೇಲ್ಪಂಕ್ತಿಯಲ್ಲದಿದ್ದರೂ, ಒಬ್ಬರ ಹತ್ಯೆ ಮಾಡಬೇಕಾದರೆ ಅವರಿಗೊಂದು ಧ್ಯೇಯವಿದ್ದದ್ದಂತೂ ನಿಶ್ಚಿತ. ಅವರು ಆ ಧ್ಯೇಯಕ್ಕಾಗಿ ಇದ್ದರು, ಕೊಂದರು ಮತ್ತು ಶಿಕ್ಷಗೆ ಒಳಗಾದರು. ನೇಣನ್ನೂ ಅವರು ಪ್ರತಿಭಟಿಸಲಿಲ್ಲ.

ನಕ್ಸಲರು ಯಾರದ್ದೇ ಹತ್ಯೆ ಮಾಡಿದಾಗ ಅವರ ಉದ್ದೇಶವನ್ನು ಮತ್ತು ಬೇಡಿಕೆಗಳನ್ನು ಸರ್ಕಾರಕ್ಕೆ ಮುಟ್ಟಿಸುವ ಕೆಲಸ ಮಾಡುತ್ತಾರೆ. ಬಾಡಿಗೆ ಹಂತಕರಿಗೆ ಇಂಥಾ ನೈತಿಕ ನಿಯತ್ತುಂಟೇ? ಕೊಲೆ ಈಗೊಂದು ಉದ್ಯೋಗ. ಮಾನಗೇಡಿ ಭಂಡರು ಕೊಲೆಗಡುಕರಿಗೆ ಆಶ್ರಯ ನೀಡುತ್ತಾರೆ. ಅಂಥವರು ರಾಜಕಾರಣದ ಸೂತ್ರಧಾರರೂ ಆಗುವ ಅವಕಾಶವಿರುವುದು ಆತಂಕದ ವಿಚಾರ.
–ಆರ್. ಕೆ. ದಿವಾಕರ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT