ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಗೇಟ್ ‘ಸ್ವರ್ಣ ವೇದಶಕ್ತಿ’ ಟೂತ್‌ಪೇಸ್ಟ್‌

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಚೆನ್ನೈ: ಬಾಯಿಯ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ವದ ಸ್ಥಾನವನ್ನು ಗಳಿಸಿರುವ ಕೋಲ್ಗೇಟ್‌–ಪಾಮೋಲಿವ್‌ ಲಿಮೆಟೆಡ್, ಆಯುರ್ವೇದ ಜ್ಞಾನವನ್ನು ಬಳಸಿಕೊಂಡು ತಯಾರಿಸಿರುವ ಹೊಸ ‘ಕೋಲ್ಗೇಟ್ ಸ್ವರ್ಣ ವೇದಶಕ್ತಿ’ ಟೂತ್‌ಪೇಸ್ಟ್‌ ಅನ್ನು ಇಲ್ಲಿ ಗುರುವಾರ ಬಿಡುಗಡೆಗೊಳಿಸಿತು.

ಈ ಉತ್ಪನ್ನ ತಯಾರಿಕೆಗೂ ಮುನ್ನ ‘ಪರ್ಫೆಕ್ಟ್‌ ಸಂಗಮ್’ (ಪರಿಪೂರ್ಣ ಸಂಗಮ) ಎಂಬ ಅಭಿಯಾನವನ್ನು ನಡೆಸಿದ್ದ ಸಂಸ್ಥೆಯು ಅನೇಕ ದಂತವೈದ್ಯರು, ತಜ್ಞರು ಹಾಗೂ ಜನಸಾಮಾನ್ಯರಿಂದ ಮಾದರಿ ಟೂತ್‌ ಪೇಸ್ಟ್‌ ಕುರಿತು ಅಭಿಪ್ರಾಯ ಸಂಗ್ರಹಿಸಿ ಈ ಟೂತ್‌ಪೇಸ್ಟ್‌ ಅನ್ನು ತಯಾರಿಸಿದೆ. ಆರ್ಯುವೇದ ಗುಣಗಳಿರುವ ಗಿಡಮೂಲಿಕೆಗಳನ್ನು ಬಳಸಿಕೊಂಡು ಹಲ್ಲಿನ ಹುಳುಕು ಆಗದಂತೆ, ಬಾಯಿ ವಾಸನೆ, ರೋಗಗಳು ಬಾರದಂತೆ ತಡೆಯುವಲ್ಲಿ ಈ ಉತ್ಪನ್ನ ಕಾರ್ಯನಿರ್ವಹಿಸಲಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಟೂತ್‌ಪೇಸ್ಟ್ ಬಿಡುಗಡೆಗೊಳಿಸಿದ ಸಂಸ್ಥೆಯ ಮಾರಾಟ ಹಾಗೂ ಗ್ರಾಹಕ ಅಭಿವೃದ್ಧಿ ಘಟಕದ ದಕ್ಷಿಣ ಭಾರತ ವಿಭಾಗದ ಮುಖ್ಯಸ್ಥ ಎನ್.ಕೆ.ಸಂತೋಷ್ ಮಾತನಾಡಿ, ‘ದಕ್ಷಿಣ ಭಾರತದ ನಾಲ್ಕು ರಾಜ್ಯಗಳ ಮಾರುಕಟ್ಟೆಯಲ್ಲಿ ಈ ಟೂತ್‌ಪೇಸ್ಟ್ ಮೊದಲು ಲಭ್ಯವಾಗಲಿದೆ. ನಂತರ, ಉತ್ತರ ಭಾರತದಲ್ಲಿ  ಬಿಡುಗಡೆಗೊಳಿಸಲಾಗುವುದು’ ಎಂದು ಹೇಳಿದರು.

‘1999ರಲ್ಲಿ ‘ಕೋಲ್ಗೇಟ್ ಹರ್ಬಲ್’ ಎಂಬ ಆಯುರ್ವೇದ ಟೂತ್‌ಪೇಸ್ಟ್‌ ಬಿಡುಗಡೆಗೊಳಿಸಲಾಗಿತ್ತು. ಇದಾದ ನಂತರ ಬಿಡುಗಡೆಗೊಂಡಿರುವ ಆಯುರ್ವೇದ ಉತ್ಪನ್ನವಿದು. ಈ ಹೊಸ ಟೂತ್‌ಪೇಸ್ಟ್‌ನಲ್ಲಿ ತುಳಸಿ, ಜೇನುತುಪ್ಪ, ಬೇವು, ಲೋಳೆಸರ, ಬೆಟ್ಟದ ನೆಲ್ಲಿಕಾಯಿ ಹಾಗೂ ಲವಂಗ ಬಳಸಲಾಗಿದೆ. ಆಯುರ್ವೇದಿ ಗುಣವುಳ್ಳ ನೈಸರ್ಗಿಕ ಉತ್ಪನ್ನಗಳನ್ನು ಹದವಾದ ಮಿಶ್ರಣದಲ್ಲಿ ಬೆರೆಸಿ ತಯಾರಿಸಲಾಗಿದೆ. ಈ ಮೂಲಕ ಬಾಯಿಯ ಆರೋಗ್ಯ ಕ್ಷೇತ್ರದಲ್ಲಿ ಕೋಲ್ಗೇಟ್ ಪಾಮೋಲಿವ್‌ನ ಪಾಲನ್ನು ಮತ್ತಷ್ಟು ವಿಸ್ತರಿಸುವುದು ಸಂಸ್ಥೆಯ ಉದ್ದೇಶವಾಗಿದೆ.

‘1976ರಲ್ಲಿ ಕೋಲ್ಗೇಟ್‌ ಆರಂಭವಾದಾಗ 15 ಲಕ್ಷ ಗ್ರಾಹಕರಿದ್ದರು. ಈಗ 14 ಕೋಟಿ ಗ್ರಾಹಕರು ನಮಗಿದ್ದಾರೆ. ಈಗ ನಾವು ಶೇ 50ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದೇವೆ. ಶೇ 90ರಷ್ಟು ದಂತವೈದ್ಯರು ಕೋಲ್ಗೇಟ್‌ ಬಳಸುವಂತೆ ಸಲಹೆ ನೀಡುತ್ತಿದ್ದಾರೆ. ಈ ಸ್ಥಾನವನ್ನು ಮತ್ತಷ್ಟು ಬಲಪಡಿಸಿಕೊಂಡು, ಮಾರುಕಟ್ಟೆ ವಿಸ್ತರಿಸಿಕೊಳ್ಳುವುದಕ್ಕೆ ಆದ್ಯತೆ ನೀಡುತ್ತಿದ್ದೇವೆ’ ಎಂದರು.

ಮಾರುಕಟ್ಟೆ ವ್ಯವಸ್ಥಾಪಕಿ ಶಿಲ್ಪಾ ನಾಯಕ್‌ ಮಾತನಾಡಿ, ‘ವಿಶ್ವದ 8 ರಾಷ್ಟ್ರಗಳಲ್ಲಿ ಕೋಲ್ಗೇಟ್‌ನ ಸಂಶೋಧನಾ ಕೇಂದ್ರಗಳಿವೆ. ಭಾರತದಲ್ಲಿರುವ ಸಂಶೋಧನಾ ಕೇಂದ್ರವು 13 ವರ್ಷಗಳಿಂದ ಉತ್ತಮ ಸಂಶೋಧನಾ ಚಟುವಟಿಕೆ ನಡೆಸುತ್ತಿದೆ. ಆಯುರ್ವೇದವನ್ನು ಕೇಂದ್ರೀಕರಿಸಿ ಸಂಶೋಧನೆ ನಡೆಸುತ್ತಿರುವ ಕೋಲ್ಗೇಟ್‌ನ ಏಕೈಕ ಕೇಂದ್ರವಿದು’ ಎಂದು ಅವರು ಹೇಳಿದರು.

‘ಕೋಲ್ಗೇಟ್ ಸ್ವರ್ಣ ವೇದಶಕ್ತಿ’ ಟೂತ್‌ಪೇಸ್ಟ್‌ ಬೆಲೆ 100 ಗ್ರಾಂ ಪ್ಯಾಕೇಜಿಗೆ ₹ 55, 200 ಗ್ರಾಂ ಪ್ಯಾಕೇಜಿಗೆ ₹ 99 ಇದೆ. ಸಂಸ್ಥೆಯ ಆಯುರ್ವೇದ ತಜ್ಞ ಮನಸ್ ವ್ಯಾಸ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT