ಟಾಟಾ ಸನ್ಸ್‌ನಲ್ಲಿ ಶೇ 18.4 ರಷ್ಟು ಪಾಲು ಹೊಂದಿದ್ದ ಸೈರಸ್ ಮಿಸ್ತ್ರಿ ಕುಟುಂಬವು, ಈ ಪ್ರಸ್ತಾವದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿತ್ತು. ಸಂಸ್ಥೆಯಲ್ಲಿ ಇರುವ ಕಡಿಮೆ ಪ್ರಮಾಣದ ಷೇರುದಾರರನ್ನು ಬಹುಸಂಖ್ಯಾತ ಷೇರುದಾರರು ತುಳಿಯುವ ಇನ್ನೊಂದು ಪ್ರಯತ್ನ ಇದಾಗಿದೆ. ಸಾರ್ವಜನಿಕ ಪಾಲುದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸೈರಸ್ ಇನ್‌ವೆಸ್ಟ್‌ಮೆಂಟ್ಸ್, ಟಾಟಾ ಸನ್ಸ್ ನಿರ್ದೇಶಕ ಮಂಡಳಿಗೆ ಪತ್ರ ಬರೆದು ತನ್ನ ಆಕ್ಷೇಪ ದಾಖಲಿಸಿತ್ತು.