ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಾರ್ಟರ್‌ಗೆ ಪೇಸ್‌–ರಾಜ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಲಿಯಾಂಡರ್ ಪೇಸ್ ಮತ್ತು ಪುರವ್ ರಾಜ ಜೋಡಿ ಎಟಿಪಿ ವಿಶ್ವ ಸರಣಿ ಸೇಂಟ್‌ ಪೀಟರ್ಸ್‌ಬರ್ಗ್‌ ಓಪನ್ ಟೆನಿಸ್ ಟೂರ್ನಿಯಲ್ಲಿ ಗುರುವಾರ ಕ್ವಾರ್ಟರ್‌ಫೈನಲ್ ತಲುಪಿದೆ.

ಪುರುಷರ ಡಬಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಭಾರತದ ಜೋಡಿ 6–3, 6–4ರಲ್ಲಿ ನೇರ ಸೆಟ್‌ಗಳಿಂದ ಫ್ಯಾಬಿಯೊ ಫೋಗ್ನಿನಿ ಮತ್ತು ಜೇಮ್ಸ್‌ ಕೆರೆಟನಿ ಮೇಲೆ ಗೆಲುವು ದಾಖಲಿಸಿದೆ.

ಇಟಲಿ ಹಾಗೂ ಅಮೆರಿಕದ ಆಟಗಾರರ ಎದುರು ಪೇಸ್ ಜೋಡಿ ಅಪೂರ್ವ ಆಟ ಆಡಿತು. ನಾಲ್ಕರ ಘಟ್ಟದಲ್ಲಿ ಪೇಸ್‌–ರಾಜ ಜೋಡಿ ನಾಲ್ಕನೇ ಶ್ರೇಯಾಂಕದ ಮಾರ್ಕಸ್‌ ಡೇನಿಯಲ್ಲೆ ಮತ್ತು ಮಾರ್ಸೆಲ್ಲೊ ಡೊಮೆಲಿನೆರ್ ವಿರುದ್ಧ ಆಡಲಿದೆ. ಈ ಜೋಡಿ ಹಿಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಟಗಾರರ ಎದುರು ಜಯ ದಾಖಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT