ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೌಢಶಾಲೆ ಶಿಕ್ಷಕರ ಸಮಾನಾಂತರ ಹುದ್ದೆಗೂ ವೇತನ ಬಡ್ತಿ ಮಂಜೂರು

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪ್ರೌಢಶಾಲೆಗಳ ಮುಖ್ಯ  ಶಿಕ್ಷಕರು, ಸಹ ಶಿಕ್ಷಕರಾಗಿ ನೇಮಕವಾಗಿ ಸಮಾನಾಂತರ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವರಿಗೆ 2016ರ ಜೂನ್ 1ರಿಂದ ಅನ್ವಯ ಆಗುವಂತೆ ಒಂದು ಹೆಚ್ಚುವರಿ ವೇತನ ಬಡ್ತಿ ಮಂಜೂರು ಮಾಡಲಾಗಿದೆ.

ಆಯುಕ್ತರ ಕಚೇರಿಯಲ್ಲಿ ಶಿಕ್ಷಣ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿರುವವರು ಮತ್ತು ತರಬೇತಿ ಹೊಂದಿದ ಪದವೀಧರ ಶಿಕ್ಷಕರಿಗೂ (ಟಿ.ಜಿ.ಟಿ) ಇದು ಅನ್ವಯ ಆಗುತ್ತದೆ.

ಪ್ರೌಢಶಾಲಾ ಶಿಕ್ಷಕರು ಮತ್ತು ಸಹ ಶಿಕ್ಷಕರಿಗೆ 2016ರ ಜೂನ್ 1ರಿಂದಲೇ ಅನ್ವಯ ಆಗುವಂತೆ ವೇತನ ಬಡ್ತಿ ಮಂಜೂರು ಮಾಡಲಾಗಿತ್ತು. ಸಮಾನಾಂತರ ಹುದ್ದೆಗಳಲ್ಲಿ ಅಂದರೆ, ಪಿಯು ಕಾಲೇಜುಗಳ ಪ್ರೌಢಶಾಲಾ ಉಪವಿಭಾಗದಲ್ಲಿ ಉಪ ಪ್ರಾಂಶುಪಾಲರು, ಸಹಾಯಕ ನಿರ್ದೇಶಕರು, ತಾಂತ್ರಿಕ ಸಹಾಯಕರು, ಚಿತ್ರಕಲಾ ಶಿಕ್ಷಕರು, ಕ್ಷೇತ್ರ ಸಂಪನ್ಮೂಲ ವ್ಯಕ್ತಿಗಳು, ವಯಸ್ಕರ ಶಿಕ್ಷಣ ಸಹಾಯಕರಿಗೆ ಇದು ಅನ್ವಯ ಆಗಿರಲಿಲ್ಲ.

‘ಸರ್ಕಾರಕ್ಕೆ ಸಾಕಷ್ಟು ಬಾರಿ ಮನವಿ ಸಲ್ಲಿಸಲಾಗಿತ್ತು. ಕೊನೆಗೂ ಮನವಿಗೆ ಮನ್ನಣೆ ದೊರೆತಿದೆ. ಇದರಿಂದ ಸುಮಾರು 16,000 ಸಿಬ್ಬಂದಿಗೆ ಲಾಭ ಆಗಲಿದೆ’ ಎಂದು ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಕೆ. ಮಂಜುನಾಥ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT