ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎನ್‌ಎಸ್‌ ಅಧ್ಯಕ್ಷರಾಗಿ ಅಖಿಲಾ ಉರ್ನಾಕರ್‌ ಆಯ್ಕೆ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ದಿ ಇಂಡಿಯನ್‌ ನ್ಯೂಸ್‌ ಪೇಪರ್‌ ಸೊಸೈಟಿಯ (ಐಎನ್‌ಎಸ್‌) 2017–18ನೇ ಸಾಲಿ‌ನ ನೂತನ ಅಧ್ಯಕ್ಷರಾಗಿ ಅಖಿಲಾ ಉರ್ನಾಕರ್‌ (ಬಿಸಿನೆಸ್‌ ಸ್ಟ್ಯಾಂಡರ್ಡ್) ಆಯ್ಕೆ ಆಗಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಸೊಸೈಟಿಯ 78ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಡೆಪ್ಯುಟಿ ಅಧ್ಯಕ್ಷರಾಗಿ ಜಯಂತ್‌ ಮಾಮನ್‌ ಮ್ಯಾಥ್ಯೂ (ಮಲಯಾಳ ಮನೋರಮಾ), ಉಪಾಧ್ಯಕ್ಷರಾಗಿ ಶೈಲೇಶ್‌ ಗುಪ್ತ (ಮಿಡ್‌ ಡೇ), ಗೌರವ ಖಜಾಂಚಿಯಾಗಿ ಶರದ್‌ ಸಕ್ಸೇನಾ (ಹಿಂದೂಸ್ತಾನ್‌ ಟೈಮ್ಸ್, ಪಟ್ನಾ), ಪ್ರಧಾನ ಕಾರ್ಯದರ್ಶಿಯಾಗಿ ಡಾ.ಎಸ್‌.ಪಿ. ಗೌರ್‌ ಆಯ್ಕೆ ಆಗಿದ್ದಾರೆ.

ಕಾರ್ಯಕಾರಿ ಸಮಿತಿಗೆ ಡೆಕ್ಕನ್‌ ಹೆರಾಲ್ಡ್‌ ಅಂಡ್‌ ಪ್ರಜಾವಾಣಿಯ ಕೆ.ಎನ್‌. ತಿಲಕ್‌ ಕುಮಾರ್‌ ಒಳಗೊಂಡಂತೆ ವಿವಿಧ ಪತ್ರಿಕಾ ಸಂಸ್ಥೆಗಳ 41 ಪ್ರತಿನಿಧಿಗಳು ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT