ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ತೀರ್ಪು ಗೌರವಿಸುವೆ: ಮಾತೆ ಮಹಾದೇವಿ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ಬಸವ ವಚನ ದೀಪ್ತಿ’ ಪುಸ್ತಕವನ್ನು ನಿಷೇಧಿಸಿದ್ದ ರಾಜ್ಯ ಸರ್ಕಾರದ ಕ್ರಮವನ್ನು ಸುಪ್ರೀಂಕೋರ್ಟ್‌ ಎತ್ತಿ ಹಿಡಿದಿದ್ದು, ಅದನ್ನು ಗೌರವಿಸುವುದಾಗಿ ಕೂಡಲಸಂಗಮದ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ತಿಳಿಸಿದರು.

‘ಬಸವಣ್ಣನವರ 800ನೇ ಲಿಂಗೈಕ್ಯ ಸಂಸ್ಮರಣೆಯ ನಿಮಿತ್ತ ಅವರ ವಚನಗಳು ಶುದ್ಧೀಕರಣಗೊಂಡ ಆವೃತ್ತಿಯಾಗಿ ಈ ಗ್ರಂಥವನ್ನು 1996 ರಲ್ಲಿ ಪ್ರಕಟಿಸಿದ್ದೆವು. 1998ರಲ್ಲಿ ರಾಜ್ಯ ಸರ್ಕಾರ ಈ ಗ್ರಂಥವನ್ನು ನಿಷೇಧಿಸಿ, ಮುಟ್ಟುಗೋಲು ಹಾಕಿಕೊಂಡಿತ್ತು. ಈ ಸಂಬಂಧ ಹೈಕೋರ್ಟ್‌ ನೀಡಿದ ಆದೇಶ ಪ್ರಶ್ನಿಸಿ, ನಾವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದೆವು’ ಎಂದು ಅವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

‘ಬಸವಣ್ಣನವರಿಗೆ ಸಾಕ್ಷಾತ್ಕಾರ ಆಗುವ ಮೊದಲು ರಚಿಸಿದ ವಚನಗಳಲ್ಲಿ ‘ಕೂಡಲಸಂಗಮದೇವ’ ಎಂಬ ವಚನಾಂಕಿತವನ್ನು ಹಾಗೆಯೇ ಬಳಸಲಾಗಿದೆ. ನಂತರ, ಬಸವಣ್ಣನವರು ಪರಮಾತ್ಮನನ್ನು ಲಿಂಗದೇವ ಎಂದು ಸಂಬೋಧಿಸಿದ್ದರಿಂದ ‘ಲಿಂಗದೇವ’ ಎಂಬ ವಚನಾಂಕಿತ ಬಳಸಿದೆವು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

‘ವಚನ ದೀಪ್ತಿ ಗ್ರಂಥದ ಮೊದಲನೆ ಆವೃತ್ತಿಯಾಗಿ 5 ಸಾವಿರ ಪ್ರತಿಗಳನ್ನು ಪ್ರಕಟಿಸಿದೆವು. ರಾಜ್ಯ ಸರ್ಕಾರ ನಿಷೇಧಿಸುವುದಕ್ಕೆ ಮೊದಲೇ ಎಲ್ಲ ಪ್ರತಿಗಳೂ ಬಿಸಿ ದೋಸೆಯಂತೆ ಖರ್ಚಾದವು. ಈ ಗ್ರಂಥವನ್ನು ಮರು ಮುದ್ರಣ ಮಾಡುತ್ತಿಲ್ಲ’ ಎಂದು ತಿಳಿಸಿದರು.

ಈ ಪ್ರಸಂಗದಿಂದ ನಿಮಗೆ ಹಿನ್ನಡೆ ಆಗಿದೆಯೆ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಈ ಗ್ರಂಥ ಪ್ರಕಟವಾಗಿ 21 ವರ್ಷಗಳಾಗಿವೆ. ಅಂದಿನಿಂದ ಇಂದಿನವರೆಗೆ ನಮ್ಮ ಕಾರ್ಯಕ್ರಮಗಳು ನಿರಂತರವಾಗಿ ಸಾಗಿವೆ. ನಮ್ಮ ಸಂಸ್ಥೆಗಳು ಬೆಳೆಯುತ್ತಲೇ ಇವೆ. ನಮ್ಮ ಸಂಘಟನೆಯೂ ವಿಸ್ತಾರಗೊಳ್ಳುತ್ತಿದೆ. ಯಾವ ಹಿನ್ನಡೆಯೂ ಆಗುವುದಿಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT