ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್‌ಟಿಸಿ ವೇಳೆ ದಿನಭತ್ಯೆಗೆ ಕತ್ತರಿ

Last Updated 21 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಇಲ್ಲಿಯವರೆಗೆ ಪ್ರವಾಸ ರಜೆ ಭತ್ಯೆ (ಎಲ್‌ಟಿಸಿ /ಎಲ್‌ಟಿಎ) ಮತ್ತು ದಿನಭತ್ಯೆಗಳನ್ನು ಒಟ್ಟೊಟ್ಟಿಗೆ ಪಡೆಯುತ್ತಿದ್ದ ಸರ್ಕಾರಿ ನೌಕರರ ಒಂದು ಸೌಲಭ್ಯಕ್ಕೆ ಇನ್ನು ಮುಂದೆ ಕೇಂದ್ರ ಸರ್ಕಾರ ಕತ್ತರಿ ಹಾಕಲಿದೆ. 

ಸರ್ಕಾರಿ ನೌಕರರು ಎಲ್‌ಟಿಸಿ ವೇಳೆ ಪಡೆಯುತ್ತಿದ್ದ ದಿನಭತ್ಯೆ, ಸಾಂದರ್ಭಿಕ ಖರ್ಚುವೆಚ್ಚಗಳನ್ನು ಇನ್ನು ಮುಂದೆ ನೀಡುವುದಿಲ್ಲ ಎಂದು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಹೇಳಿದೆ.

ನೌಕರರ ಹುದ್ದೆಯ ಆಧಾರದ ಮೇಲೆ ಭತ್ಯೆ ಮತ್ತು ಪ್ರಯಾಣ ವೆಚ್ಚ ನಿರ್ಧಾರವಾಗುತ್ತದೆ. ಎಲ್‌ಟಿಸಿ ರಜೆಯ ಸೌಲಭ್ಯದ ಜತೆಗೆ ತತ್ಕಾಲ್‌ ಟಿಕೆಟ್‌ ದರ ಮತ್ತು ಸುವಿಧಾ, ಶತಾಬ್ದಿ, ತುರಂತೊ, ರಾಜಧಾನಿಯಂತಹ ದುಬಾರಿ ರೈಲು ಪ್ರಯಾಣ ವೆಚ್ಚವನ್ನೂ ಮರು ಪಾವತಿ ಮಾಡಲಾಗುತ್ತದೆ. ಇಲ್ಲಿಯವರೆಗೆ ಈ ಅವಕಾಶ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT