ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತೆರಿಗೆ ವಂಚನೆ ದಾಖಲೆ ಸಿಕ್ಕಿಲ್ಲ’

Last Updated 21 ಸೆಪ್ಟೆಂಬರ್ 2017, 19:39 IST
ಅಕ್ಷರ ಗಾತ್ರ

ಬೆಂಗಳೂರು: ‘ಆದಾಯ ತೆರಿಗೆ ಇಲಾಖೆ ಕಲ್ಯಾಣಿ ಡೆವಲಪರ್ಸ್‌ ಮೇಲೆ ನಡೆಸಿದ ದಾಳಿ ಸಮಯದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದ ಯಾವುದೇ ದಾಖಲೆ ಸಿಕ್ಕಿಲ್ಲ’ ಎಂದು ಸಂಸ್ಥೆಯ ಮೂಲಗಳು ಸ್ಪಷ್ಟಪಡಿಸಿವೆ.

ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿರುವ ಕಲ್ಯಾಣಿ ಡೆವಲಪರ್ಸ್‌ಗೆ ಸೇರಿದ ಸಂಸ್ಥೆಗಳ ಮೇಲೆ ಗುರುವಾರ (ಸೆ. 14) ಐ.ಟಿ ದಾಳಿ ನಡೆದಿತ್ತು. ಒಟ್ಟು ಎಂಟು ಕಡೆ ಶೋಧ, 21 ಜಾಗಗಳಲ್ಲಿ ಪರಿಶೀಲನೆ ಮಾಡಲಾಗಿತ್ತು.

ಬೆಂಗಳೂರಿನಲ್ಲಿರುವ ಕಲ್ಯಾಣಿ ಪ್ಲಾಟಿನಾ, ಕಲ್ಯಾಣಿ ವಿಸ್ತಾ, ಕೃಷ್ಣ ಮ್ಯಾಗ್ನಮ್, ಕಲ್ಯಾಣಿ ಟವರ್ಸ್ ಮತ್ತು ಕಲ್ಯಾಣಿ ಟೆಕ್ ಪಾರ್ಕ್ ಮತ್ತು ಹೈದರಾಬಾದ್‌ನ ಕಲ್ಯಾಣಿ ಮೋಟಾರ್ಸ್‌ ಮೇಲೆ ಏಕಕಾಲಕ್ಕೆ ದಾಳಿ ಆಗಿತ್ತು.

‘ನಮ್ಮ ಸಂಸ್ಥೆಯ ಲೆಕ್ಕ ಪರಿಶೋಧನೆಯ ದಾಖಲೆಗಳು ಸಮರ್ಪಕವಾಗಿದ್ದು, ಆರೋಪಗಳಿಗೆ ಪೂರಕವಾದ ಯಾವುದೇ ದಾಖಲೆಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿಲ್ಲ’ ಎಂದೂ ಮೂಲಗಳು ಸ್ಪಷ್ಟಪಡಿಸಿವೆ. ಕಲ್ಯಾಣಿ ಡೆವಲಪರ್ಸ್ ಎ. ಮೋಹನ್ ರಾಜು ಅವರಿಗೆ ಸೇರಿದ ಸಂಸ್ಥೆಯಾಗಿದ್ದು, 1991ರಿಂದ ಕಾರ್ಯನಿರ್ವಹಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT