ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

228 ಬೂತ್‌ಗಳಲ್ಲಿ ಮನೆಮನೆಗೆ ಪ್ರಚಾರ

ನೂತನವಾಗಿ ಜಿಲ್ಲಾ ಕಾಂಗ್ರೆಸ್‌ಗೆ ಆಯ್ಕೆಯಾದ ಪ್ರತಿನಿಧಿಗಳಿಗೆ ಸನ್ಮಾನ
Last Updated 22 ಸೆಪ್ಟೆಂಬರ್ 2017, 4:25 IST
ಅಕ್ಷರ ಗಾತ್ರ

ತುರುವೇಕೆರೆ: ‘ಮುಖ್ಯ ಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ದೀನ, ದಲಿತರ, ಹಿಂದುಳಿದ ವರ್ಗ ಹಾಗೂ ಬಡವರ ಪರವಾದ 38ಕ್ಕೂ ಹೆಚ್ಚು ಜನಪರ ಯೋಜನೆ ಜಾರಿಗೆ ತಂದಿದೆ’ ಎಂದು ರಾಜ್ಯ ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮಿನಾರಾಯಣ್ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ನಡೆದ ನೂತನವಾಗಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಎಚ್.ಬಿ.ನಂಜೇಗೌಡ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಅದ್ದೆ ಹಾಗು ಜಿಲ್ಲಾ ಕಾರ್ಯದರ್ಶಿಯಾಗಿ ಟಿ.ಎನ್.ಶಿವರಾಜು ನೇಮಕವಾದ ಕಾರಣ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.

‘ತಾಲ್ಲೂಕಿನ 228 ಬೂತ್‌ಗಳಲ್ಲಿಯೂ ಸಹ ಮನೆಮನೆಗೆ ಕಾಂಗ್ರೆಸ್ ಪ್ರಚಾರ ಆಂದೋಲನವನ್ನು ಹಾಗೂ ಸರ್ಕಾರದ ಸಾಧನೆಗಳನ್ನು ಮನೆಮನೆಗೆ ತಲುಪಿಸಲು ತಾಲ್ಲೂಕಿನ ಬಾಣಸಂದ್ರ ಭೂತ್‌ನಲ್ಲಿ ಉದ್ಘಾಟನೆ ಮಾಡಲಾಗುವುದು’ ಎಂದರು.

‘ವಿರೋಧ ಪಕ್ಷಗಳು ವಿನಾಕಾರಣ ಸರ್ಕಾರದ ಮೇಲೆ ಭ್ರಷ್ಟ್ರಚಾರದ ಆರೋಪ ಹೊರಿಸುತ್ತಿವೆ. ಅವರ ಆರೋಪಗಳಲ್ಲಿ ಯಾವುದೇ ಉರುಳಿಲ್ಲ’ ಎಂದು ಹೇಳಿದರು.

‘ಈ ವಿಷಯವಾಗಿ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಪಕ್ಷ ಸಿದ್ಧವಿದೆ. ತಾಲ್ಲೂಕಿನಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ರಾಜ್ಯ ಘಟಕದ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ಅಕ್ಟೋಬರ್ 3ರಂದು ಮಧ್ಯಾಹ್ನ 2 ಗಂಟೆಗೆ ತುರುವೇಕೆರೆಗೆ ಆಗಮಿಸಲಿದ್ದಾರೆ’ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚೌದ್ರಿರಂಗಪ್ಪ, ಮಾಳೇ ಕೃಷ್ಣಪ್ಪ, ತಾಲ್ಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಮಲ ಸ್ವರ್ಣಕುಮಾರ್, ಪ.ಪಂ ಅಧ್ಯಕ್ಷ ಕೆ.ಟಿ.ಶಿವಶಂಕರ್, ಟಿ.ಎನ್.ಶಶಿಶೇಖರ್, ಮುಖಂಡರುಗಳಾದ ದಾನಿಗೌಡ, ಬುಗಡನಹಳ್ಳಿ ಕೃಷ್ಣಮೂರ್ತಿ, ಕೃಷ್ಣಮೂರ್ತಿ, ಟಿ.ಪಿ.ಮಹೇಶ್ , ಜೋಗೀಹಳ್ಳಿ ಶಿವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT