ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಿರಿಜನರ ಬದುಕು ಮರುಸೃಷ್ಟಿಗೆ ಯೋಜನೆ

ಜಾನಪದ ಪರಿಷತ್ತಿನಿಂದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಕೆಗೆ ಸಿದ್ಧತೆ
Last Updated 22 ಸೆಪ್ಟೆಂಬರ್ 2017, 4:57 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಾನಪದ ಲೋಕದಲ್ಲಿ ಗಿರಿಜನರ ಬದುಕಿನ ಚಿತ್ರಣ ಕಟ್ಟಿಕೊಡುವ ಸಲುವಾಗಿ ಅವರ ಜೀವನಶೈಲಿಯ ಪ್ರತಿಕೃತಿಗಳನ್ನು ಸೃಜಿಸಲು ಕರ್ನಾಟಕ ಜಾನಪದ ಪರಿಷತ್ತು ಮುಂದಾಗಿದೆ.

‘ಪ್ರಾದೇಶಿಕ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಗಿರಿಜನರು, ಆದಿವಾಸಿಗಳ ಬದುಕನ್ನು ಈ ಪೀಳಿಗೆಯ ಜನರಿಗೆ ಕಟ್ಟಿಕೊಡುವ ಆಶಯದೊಂದಿಗೆ ಪರಿಷತ್ತು ಈ ಕಾರ್ಯಕ್ಕೆ ಕೈಹಾಕಿದೆ. ಪ್ರತಿಕೃತಿಗಳ ನಿರ್ಮಾಣದ ಮೂಲಕ ಗಿರಿಜನರ ಬದುಕನ್ನು ಪ್ರವಾಸಿಗರ ಕಣ್ಮುಂದೆ ತರುವ ಯೋಚನೆ ಇದೆ. ಇದಕ್ಕಾಗಿ ಒಟ್ಟು ₹5 ಕೋಟಿ ವೆಚ್ಚ ಅಂದಾಜಿಸಲಾಗಿದ್ದು, ಅನುದಾನ ಕೋರಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು’ ಎಂದು ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಪ್ರವಾಸಿಗರ ಸಂಖ್ಯೆ ಹೆಚ್ಚಳ: ‘ಜಾನಪದ ಲೋಕಕ್ಕೆ ಬರುವ ಪ್ರವಾಸಿಗರ ಸಂಖ್ಯೆಯು ಗಣನೀಯವಾಗಿ ಏರಿಕೆ ಆಗುತ್ತಿದೆ. ಮಾಸಿಕ ಸರಾಸರಿ ₹1.25 ಲಕ್ಷದಷ್ಟು ಪ್ರವೇಶ ಶುಲ್ಕ ಸಂಗ್ರಹವಾಗುತ್ತಿದೆ’ ಎಂದು ಅವರು ವಿವರಿಸಿದರು.

‘ದಸರಾ ಅಂಗವಾಗಿ ಇದೇ 30ರಂದು ಬೆಳಿಗ್ಗೆ 11ರಿಂದ ಜಾನಪದ ಲೋಕದಲ್ಲಿ ಮಹಿಳೆಯರಿಗಾಗಿ ರಂಗೋಲಿ, ಮೆಹಂದಿ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಸಂಜೆ 4ಕ್ಕೆ ಬನ್ನಿ ಹಬ್ಬ ನಡೆಯಲಿದೆ. 5 ಗಂಟೆಗೆ ಪೂಜಾ ಕುಣಿಷ, ಲಿಂಗಬೀರರ ಕುಣಿತ ಹಾಗೂ ನಂದಿಧ್ವಜ ಕುಣಿತಗಳನ್ನು ಒಳಗೊಂಡ ಕಲಾ ಪ್ರದರ್ಶನ ಇರಲಿದೆ’ ಎಂದು ಅವರು ತಿಳಿಸಿದರು.

ಉದ್ಘಾಟನೆಯಲ್ಲಿ ಭಾಗಿ: ಆದಿಚುಂಚ ನಗಿರಿಯಲ್ಲಿ ಇದೇ 23ರಂದು ಸಂಜೆ 4ಕ್ಕೆ ರಾಜ್ಯಮಟ್ಟದ 39ನೇ ಕಾಲಬೈರವೇಶ್ವರ ಜಾನಪದ ಕಲಾ ಮೇಳವನ್ನು ತಾವು ಉದ್ಘಾಟಿಸಲಿರುವುದಾಗಿ ಅವರು ತಿಳಿಸಿದರು. ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಮು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT