ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಕಡಿರುದ್ಯಾವರ ಬಂದ್‌ಗೆ ಚಿಂತನೆ

Last Updated 22 ಸೆಪ್ಟೆಂಬರ್ 2017, 8:54 IST
ಅಕ್ಷರ ಗಾತ್ರ

ಉಜಿರೆ: ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ಊರವರ ವಿರೋ ಧದ ನಡೆವೆಯೂ ಮದ್ಯದಂಗಡಿ ಗುರುವಾರ ಆರಂಭಗೊಂಡಿದ್ದರಿಂದ ಮದ್ಯದಂಗಡಿ ವಿರೋಧಿ ಹೋರಾಟ ಸಮಿತಿ ಹಾಗೂ ಸಾರ್ವಜನಿಕರು ತೀವ್ರ ಪ್ರತಿಭಟನೆ ನಡೆಸಿದರು.

ಗುರುವಾರ ಮದ್ಯದಂಗಡಿಯ ಉದ್ಘಾಟನೆ ಆಗುವ ಸುದ್ದಿ ತಿಳಿ ಯುತ್ತಿದ್ದಂತೆ, ಮದ್ಯದಂಗಡಿ ಎದುರು ಹೋರಾಟ ಸಮಿತಿಯ ಸದಸ್ಯರು, ಮಹಿಳೆಯರು ಜಮಾಯಿಸ ತೊಡಿಗಿದ್ದರು. ಮಹಿಳೆಯರೇ ನೂರಾರು ಸಂಖ್ಯೆಯಲ್ಲಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮದ್ಯದಂಗಡಿಗೆ ಪರವಾನಗಿ ಕೊಟ್ಟ ಅಬಕಾರಿ ಅಧಿಕಾರಿಗಳ ವಿರುದ್ದ ಧಿಕ್ಕಾರ ಕೂಗತೊಡಗಿದರು. ಪ್ರತಿಭಟನೆಯ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು, ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಬಂದೋಬಸ್ ಏರ್ಪಡಿಸಿದ್ದರು. ಜಿಲ್ಲಾ ಮೀಸಲು ತುಕಡಿ ಹಾಗೂ ಅನೇಕ ಮಹಿಳಾ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಲಾಗಿತ್ತು.

ಬೆಳ್ತಂಗಡಿ, ಪುಂಜಾಲಕಟ್ಟೆ, ಧರ್ಮಸ್ಥಳ ಠಾಣೆಯ ಪೊಲೀಸರೂ ಭದ್ರತೆಗೆ ನಿಯೋ ಜನಗೊಂಡಿದ್ದರು. ಪೊಲೀಸ್‌ ಪರವಾನಗಿ ಇಲ್ಲದೆ ಪ್ರತಿಭಟನೆ ನಡೆಸಿರುವುದಕ್ಕೆ ಪೊಲೀಸ್‌ ಅಧಿಕಾರಿಗಳು ಆಕ್ಷೇಪ ವ್ಯಕ್ತಪ ಡಿಸಿದಾಗ, ಮಹಿಳೆಯರು, ಪುರುಷರು ಪೊಲೀಸ್‌ ವಾಹನಕ್ಕೇ ಮುತ್ತಿಗೆ ಹಾಕಿದರು. ಅಬಕಾರಿ ಇಲಾಖೆಯ ಸಿಬ್ಬಂದಿಗಳು ಇದ್ದರು.

ಇತ್ತ ಮದ್ಯದಂಗಡಿಯಲ್ಲಿ ಮದ್ಯದ ವ್ಯಾಪಾರ ಆರಂಭವಾಗುತ್ತಿದ್ದಂತೆ, ಮದ್ಯವನ್ನು ಖರೀದಿಸಿ ಹೋಗಲು ಅನುಮತಿ ಇರುವುದೇ ವಿನಾ ಅಲ್ಲಿಯೇ ಕುಡಿಯಲು ಇಲ್ಲ. ಆದರೆ ಮದ್ಯವನ್ನು ಅಲ್ಲಿಯೇ ಕುಡಿಯುತ್ತಿದ್ದಾರೆ ಎಂದು ಸ್ಥಳದಲ್ಲಿದ್ದ ಅಬಕಾರಿ ಅಧಿಕಾರಿಗಳಿಗೆ ಪ್ರತಿಭಟನಾಕಾರರು ದೂರು ನೀಡಿದರು.

ಅಧಿಕಾರಿಗಳು ಯಾವುದೇ ಸ್ಪಂದನೆ ನೀಡಿದ್ದರಿಂದ ಪ್ರತಿಭಟನಾಕಾರರು ಇನ್ನಷ್ಟು ಕೆರಳಿದರು. ಪ್ರತಿಭಟನಾಕಾ ರರಿಗೆ ಹಾಗೂ ಪೊಲೀಸ್‌ ಅಧಿಕಾರಿಗಳ ಮಧ್ಯೆ ಬಿರುಸಿನ ಮಾತುಕತೆ ನಡೆಯಿತು.

ಅಧಿಕಾರಿಗಳಿಗೆ ತರಾಟೆ: ಕಡಿರುದ್ಯಾವರ ಗ್ರಾಮದ ಕಾನರ್ಪ ಎಂಬಲ್ಲಿ ನೂತನವಾಗಿ ಆರಂಭವಾಗಿರುವ ಮದ್ಯದಂಗಡಿಯ ಸ್ಥಳ ತನಿಖೆಗೆ ಗುರುವಾರ ಸ್ಥಳಕ್ಕೆ ಬಂದ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಯನ್ನು ಊರವರು ತೀವ್ರ ತರಾಟೆಗೆ ತೆಗೆದುಕೊಂಡರು.

ಈ ಪರಿಸರದಲ್ಲಿ ಬಡರೈತರ ಮನೆಗಳು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಲೋನಿಗಳು ಹಾಗೂ 100 ಮೀಟರ್‌ ಅಂತರದಲ್ಲಿ ಅಂಗ ನವಾಡಿ ಕೇಂದ್ರ ಹಾಗೂ 200 ಮೀಟರ್‌ ದೂರದಲ್ಲಿ ಹಿರಿಯ ಪ್ರಾಥ ಮಿಕ ಶಾಲೆ ಮತ್ತು ಮದ್ಯದಂಗಡಿ ಸ್ಥಾಪನೆಗೆ ಮುಂದಾಗಿರುವ ಕಟ್ಟಡದ ಎಡಭಾ ಗದಲ್ಲಿ ಬಸ್‌ ತಂಗುದಾಣವಿದೆ. ಹೀಗಾಗಿ ಮದ್ಯದಂಗಡಿಗೆ ಪರವಾನಗಿ ನೀಡದಂತೆ ಒತ್ತಾಯಿಸಿದರು.

ಪ್ರತಿಭಟನೆಗೆ ಮದ್ಯದಂಗಡಿಯವರು ಮಣಿಯದೇ ಇರುವ ಹಿನ್ನೆಲೆಯಲ್ಲಿ, ಹೋರಾಟವನ್ನು ಶುಕ್ರವಾರ ಇನ್ನಷ್ಟು ತೀವ್ರಗೊಳಿಸುವುದಾಗಿ ನಿರ್ಧರಿಸ ಲಾಯಿತು. ಶುಕ್ರವಾರ ಕಡಿರುದ್ಯಾವರ ಬಂದ್ ಮಾಡಲು ತೀರ್ಮಾನಿಸುವ ಚಿಂತನೆ ಸಮಿತಿಯವರದ್ದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT