ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಕ್ಕ ಸೇರಿ ಐವರಿಗೆ ‘ಮುರುಘಾ ಶ್ರೀ’ ಪ್ರಶಸ್ತಿ

Last Updated 22 ಸೆಪ್ಟೆಂಬರ್ 2017, 9:25 IST
ಅಕ್ಷರ ಗಾತ್ರ

ಚಿತ್ರದುರ್ಗ: ಇಲ್ಲಿನ ಮುರುಘಾ ಮಠದಿಂದ ಕೊಡಮಾಡುವ ‘ಮುರುಘಾ ಶ್ರೀ’ ಪ್ರಶಸ್ತಿಗೆ ಬೆಳಗಾವಿ ಜಿಲ್ಲೆ ಬೈಲೂರಿನ ನಿಷ್ಕಲಮಠದ ನಿಜಗುಣಾನಂದಸ್ವಾಮೀಜಿ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿರುವ ಐವರು ಮಹನೀಯರನ್ನು ಆಯ್ಕೆ ಮಾಡಲಾಗಿದೆ.

ಕಾಂಗ್ರೆಸ್‌ ಮುಖಂಡ ಸಿ.ಕೆ.ಜಾಫರ್ ಷರೀಫ್, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ಡಾ. ಎಂ.ವೆಂಕಟಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್. ದೊರೆಸ್ವಾಮಿ, ಪರಿಸರವಾದಿ ಸಾಲುಮರದ ತಿಮ್ಮಕ್ಕ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ಪತ್ರ, ಫಲಕ ಮತ್ತು ₹ 25 ಸಾವಿರ ನಗದು ಒಳಗೊಂಡಿದೆ.

28ಕ್ಕೆ ಸಂಜೆ ಪ್ರಶಸ್ತಿ ಪ್ರದಾನ :28ರಂದು ಸಂಜೆ 6.30ಕ್ಕೆ ಮುರುಘಾ ಮಠದಲ್ಲಿ ನಡೆಯಲಿರುವ ಶರಣ ಸಂಸ್ಕೃತಿ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ನಟ ವಿ. ರವಿಚಂದ್ರನ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ.

ಲಿಂಗಾಯತ ಧರ್ಮ – ಬೃಹತ್ ಸಮಾವೇಶ : ಪ್ರಸಕ್ತ ಸಾಲಿನ ಬಹು ಚರ್ಚಿತ ವಿಷಯ ‘ಲಿಂಗಾಯತ ಧರ್ಮ’ ಕುರಿತು 28ರಂದು ‘ಲಿಂಗಾಯತ ಧರ್ಮ – ಸಾಂವಿಧಾನಿಕ ಮಾನ್ಯತೆ’ ಕುರಿತು ಬೃಹತ್ ಸಮಾವೇಶ ಏರ್ಪಡಿಸಲಾಗಿದೆ.

ಕೂಡಲಸಂಗಮ ಬಸವ ಧರ್ಮಪೀಠದ ಮಾತೆಮಹಾದೇವಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸೇರಿದಂತೆ ಹದಿನಾಲ್ಕು ಕ್ಕೂ ಹೆಚ್ಚು ಮಠಾಧೀಶರು, ಮಾತೆಯರು ಪಾಲ್ಗೊಳ್ಳುತ್ತಿದ್ದಾರೆ ಎಂದು ಮಠದ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT