ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುನೀತ್‌ ರಾಜ್‌ಕುಮಾರ್‌ ಸಂದರ್ಶನ: ‘ಪ್ರಯೋಗಾತ್ಮಕ ಚಿತ್ರಗಳಿಗೆ ಮನ್ನಣೆ ನೀಡುವೆ’

Last Updated 22 ಸೆಪ್ಟೆಂಬರ್ 2017, 9:55 IST
ಅಕ್ಷರ ಗಾತ್ರ

ನಟ ಪುನೀತ್‌ ರಾಜಕುಮಾರ್‌ ತಮ್ಮ ವೃತ್ತಿಬದುಕಿನ ‘ಕವಲು ದಾರಿ’ಯಲ್ಲಿ ನಿಂತಿದ್ದಾರೆ. ಈ ಮಾತನ್ನು ಎರಡು ರೀತಿಯಿಂದ ಅರ್ಥೈಸಬಹುದು. ಇದುವರೆಗೆ ನಟನಾಗಿ, ಗಾಯಕನಾಗಿ ಗುರ್ತಿಸಿಕೊಂಡಿದ್ದ ಅವರು ಈಗ ‘ಪಿಆರ್‌ಕೆ ಪ್ರೊಡಕ್ಷನ್‌’ (ಪಾರ್ವತಮ್ಮ ರಾಜಕುಮಾರ್‌ ಪ್ರೊಡಕ್ಷನ್‌) ಹೆಸರಿನ ಸಂಸ್ಥೆಯಡಿಯಲ್ಲಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಅವರು ಹಣ ಹೂಡುತ್ತಿರುವ ಸಿನಿಮಾದ ಹೆಸರು ‘ಕವಲು ದಾರಿ’.

ಹೇಮಂತ್‌ ರಾವ್‌ ನಿರ್ದೇಶನದ ಈ ಸಿನಿಮಾದಲ್ಲಿ ರಿಷಿ ಮತ್ತು ರೋಶಿನಿ ಪ್ರಕಾಶ್‌ ನಾಯಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ಅನಂತ್‌ನಾಗ್‌ ಕೂಡ ಒಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರ ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಸೆಟ್ಟೇರಿತು. ಈ ಸಮಯದಲ್ಲಿ ಪುನೀತ್‌ ರಾಜ್‌ಕುಮಾರ್‌ ಸಹ ಹಾಜರಿದ್ದರು. ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಅಷ್ಟಾಗಿ ಮಾತನಾಡದ ಪುನೀತ್‌, ಅಂದು ಮಾತನಾಡುವ ಹುಮ್ಮಸ್ಸಿನಲ್ಲಿದ್ದರು. ನಿರ್ಮಾಪಕನ ಹೊಸಪಾತ್ರ ಅವರಲ್ಲಿ ಉತ್ಸಾಹದ ಜತೆಗೆ ಜವಾಬ್ದಾರಿಯನ್ನೂ ಹೆಚ್ಚಿಸಿರುವುದು ಅವರ ಮಾತುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತಿತ್ತು. ನಿರ್ಮಾಪಕ ಪುನೀತ್‌ ಜತೆಗಿನ ಮಾತುಕತೆಯ ಅಕ್ಷರರೂಪ ಇಲ್ಲಿದೆ.

* ಸಿನಿಮಾ ನಿರ್ಮಾಣಕ್ಕೆ ಇಳಿಯುವ ಆಲೋಚನೆ ಬಂದಿದ್ದು ಹೇಗೆ?

ನನಗೆ ಮೊದಲಿನಿಂದಲೂ ಒಳ್ಳೆಯ ಸಿನಿಮಾಗಳನ್ನು ಮಾಡಬೇಕು ಎಂಬ ಆಸೆ ಇದ್ದೇಇತ್ತು. ನನ್ನ ಅಮ್ಮ ಪಾರ್ವತಮ್ಮ ಅವರು ವಜ್ರೇಶ್ವರಿ ಕಂಬೈನ್ಸ್‌ ಅಡಿಯಲ್ಲಿ 82 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಆ ಸಂಖ್ಯೆಯನ್ನು ನೂರರ ಗಡಿ ದಾಟಿಸಬೇಕು ಎಂಬುದು ನನ್ನ ಆಸೆ. ಪಿಆರ್‌ಕೆ ಪ್ರೊಡಕ್ಷನ್‌ ಅನ್ನು ವಜ್ರೇಶ್ವರಿ ಕಂಬೈನ್ಸ್‌ನಿಂದ ಬೇರ್ಪಡಿಸಿ ನೋಡಬೇಕಿಲ್ಲ. ಅದರಂತೆಯೇ ಇದೊಂದು ಸಂಸ್ಥೆ ಅಷ್ಟೆ.

* ‘ಕವಲು ದಾರಿ’ ಸಿನಿಮಾವನ್ನೇ ಯಾಕೆ ನಿಮ್ಮ ನಿರ್ಮಾಣದ ಮೊದಲ ಸಿನಿಮಾ ಆಗಿ ಆಯ್ದುಕೊಂಡಿರಿ?

ನನಗೆ ಹೇಮಂತ್‌ ಅಂದ್ರೆ ತುಂಬಾ ಇಷ್ಟ. ಅವರು ಮಾಡಿದ ಸಿನಿಮಾ ಕೂಡ ಇಷ್ಟ. ಅವರು ನನಗೊಂದು ಕಥೆ ಹೇಳಿದರು. ನನಗದು ತುಂಬಾ ಭಿನ್ನವಾಗಿದೆ ಅನಿಸ್ತು. ಹೇಗಾದರೂ ಮಾಡಿ ಈ ಸಿನಿಮಾ ಮಾಡಬೇಕು ಅನಿಸಿತು. ಹಲವು ಸಲ ಚರ್ಚಿಸಿದ ನಂತರ ಈ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದೇನೆ.

*  ಈ ಪ್ರಯತ್ನಕ್ಕೆ ಪಾರ್ವತಮ್ಮನವರು ಹೇಗೆ ಪ್ರೇರಣೆಯಾಗಿದ್ದಾರೆ?

ನನಗೆ ಅಮ್ಮ ಎಲ್ಲ ರೀತಿಯಿಂದಲೂ ಪ್ರೇರಣೆ ನೀಡಿದ್ದಾರೆ. ಯಾವಾಗಲೂ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಿರಬೇಕು. ನಾವು ಮಾಡುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು ಎಂಬುದನ್ನು ನಂಬಿದವನು ನಾನು. ಇದನ್ನು ನಾನು ಕಲಿತಿದ್ದು ನನ್ನ ತಾಯಿಯಿಂದ. ಅವರು ಬಿಡುವಾಗಿದ್ದುದನ್ನು ನಾನು ನೋಡಿರಲೇ ಇಲ್ಲ. ಅದನ್ನು ನೋಡಿಯೇ ನಾನೂ ಒಳ್ಳೆಯ ಸಿನಿಮಾಗಳನ್ನು ನಿರ್ಮಾಣ ಮಾಡಬೇಕು ಎಂದು ಅನಿಸಿದ್ದು.

* ನಿಮಗೆ ನಿಮ್ಮದೇ ಆದ ಅಭಿಮಾನಿ ಬಳಗವಿದೆ. ನಿಮ್ಮ ಸಿನಿಮಾಗಳೆಂದರೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆಗಳಿರುತ್ತವೆ. ನಿಮ್ಮ ನಿರ್ಮಾಣದ ಸಿನಿಮಾ ಬಗ್ಗೆಯೂ ಆ ನಿರೀಕ್ಷೆಗಳನ್ನು ಇರಿಸಿಕೊಳ್ಳಬಹುದೆ?

ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಕೆಲವು ಪ್ರಕಾರದ ಸಿನಿಮಾಗಳಿರುತ್ತವೆ. ಅವುಗಳನ್ನು ಅಭಿಮಾನಿಗಳಿಗೆ, ಫ್ಯಾಮಿಲಿ ಆಡಿಯನ್ಸ್‌ಗೆ, ಕ್ಲಾಸ್‌ ಆಡಿಯನ್ಸ್‌ಗೆ ಎಂದೆಲ್ಲ ವಿಭಾಗಿಸಲು ಸಾಧ್ಯವೇ ಆಗುವುದಿಲ್ಲ. ಉದಾಹರಣೆಗೆ ‘ರಾಜಕುಮಾರ’ ಯಾವ ವರ್ಗದ ಪ್ರೇಕ್ಷಕರಿಗೆ ಮಾಡಿದ ಸಿನಿಮಾ? ಎಲ್ಲರೂ ನೋಡಿ ಆನಂದಿಸಿದ ಸಿನಿಮಾ ಅದು. ಹಾಗೆಯೇ ‘ಒಂದು ಮೊಟ್ಟೆಯ ಕಥೆ’ ಸಿನಿಮಾ ಯಶಸ್ವಿ ಆಯ್ತು. ಅದನ್ನು ಕ್ಲಾಸ್‌ ಪ್ರೇಕ್ಷಕರು ನೋಡಿದರಾ, ಮಾಸ್‌ ಪ್ರೇಕ್ಷಕರು ನೋಡಿದರಾ? ಅದನ್ನು ಹಾಗೆ ವಿಭಾಗಿಸಿ ಹೇಳುವುದೇ ಸರಿಯಲ್ಲ. ಚಿತ್ರಮಂದಿರದಲ್ಲಿ ಕೂತು ಆ ಸಿನಿಮಾ ನೋಡಿದಾಗ ನನಗೆ ಇಷ್ಟವಾಯ್ತು. ಅಷ್ಟೇ ಅದು. ‘ಕವಲು ದಾರಿ’ಯ ಮೂಲಕವೂ ಅಂಥದ್ದೇ ಪ್ರಯತ್ನವನ್ನು ನಾವು ಮಾಡುತ್ತಿರುವುದು. ಇಂದು ಎಲ್ಲ ಥರದ ಸಿನಿಮಾಗಳನ್ನೂ ಜನರು ಸ್ವೀಕರಿಸುತ್ತಿದ್ದಾರೆ. ಎಲ್ಲ ಜನರೂ ಇಷ್ಟಪಡುವ ಸಿನಿಮಾ ಮಾಡುವುದು ನನಗೆ ಖುಷಿ ಕೊಡುವ ಸಂಗತಿ.

* ಒಬ್ಬ ತಾರಾನಟ ತಾನು ನಟಿಸದ ಇನ್ನೊಂದು ಸಿನಿಮಾವನ್ನು ನಿರ್ಮಾಣ ಮಾಡುವುದು ನಮ್ಮಲ್ಲಿ ಅಪರೂಪ. ಕನ್ನಡ ಚಿತ್ರರಂಗದಲ್ಲಿ ಇಂಥ ಪ್ರಯತ್ನಗಳು ಅವಶ್ಯಕ ಅನಿಸುತ್ತದಾ ನಿಮಗೆ?

ನಮ್ಮಲ್ಲೂ ಅಂಥ ಪ್ರಯತ್ನಗಳು ಆಗೀಗ ನಡೆಯುತ್ತಿವೆ. ನಮ್ಮ ಚಿತ್ರರಂಗದಲ್ಲಿ ಈ ಮೂರ್ನಾಲ್ಕು ವರ್ಷಗಳಿಂದ ಒಂದು ಬದಲಾವಣೆ ಕಾಣುತ್ತಿದೆ. ಹಲವು ಪ್ರಯೋಗಾತ್ಮಕ ಸಿನಿಮಾಗಳನ್ನು ಜನರು ಒಪ್ಪಿಕೊಳ್ಳುತ್ತಿದ್ದಾರೆ. ಹೀಗೆ ಹೊಸ ಚಿತ್ರಗಳನ್ನು ನಟರು ನಿರ್ಮಾಣ ಮಾಡುವ ಪರಂಪರೆ ದೊಡ್ಡಮಟ್ಟದಲ್ಲಿ ನಮ್ಮಿಂದಲೇ ಆರಂಭವಾಗಲಿ. ಹಾಗಂತ ಇದೇ ಮೊದಲು ಅಂತಲ್ಲ, ಈ ಹಿಂದೆ, ದರ್ಶನ್‌, ಸುದೀಪ್‌ ಎಲ್ಲರೂ ಇಂಥ ಪ್ರಯತ್ನಗಳನ್ನು ಮಾಡಿದ್ದಾರೆ.

* ಇಂಥ ಪ್ರಯತ್ನಗಳಿಂದ ಚಿತ್ರರಂಗದ ವಾತಾವರಣದಲ್ಲಿ ಏನಾದರೂ ಬದಲಾವಣೆ ಆಗುತ್ತದೆ ಅನಿಸುತ್ತದೆಯೇ?

ಖಂಡಿತಾ. ಉದಾಹರಣೆಗೆ ಇಂದಿನ ‘ಕವಲು ದಾರಿ’ ಮುಹೂರ್ತ ಕಾರ್ಯಕ್ರಮವನ್ನೇ ನೋಡಿ. ನಾವು ಕರೆದಿರುವ ಎಲ್ಲಾ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಂತೋಷದಿಂದ ಬಂದು ಶುಭ ಹಾರೈಸಿದ್ದಾರೆ. ಇದು ಖುಷಿಯ ಸಂಗತಿ ಅಲ್ಲವೇ?

* ಇದು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲೆಂದೇ ಆರಂಭಿಸಿದ ಸಂಸ್ಥೆಯೇ?

ಆ ರೀತಿ ಏನಿಲ್ಲ. ಬರೀ ಹೊಸಬರಿಗೆ ಎಂದೇನೂ ನಿಬಂಧನೆ ಹಾಕಿಕೊಂಡಿಲ್ಲ. ಒಳ್ಳೆಯ ಸಿನಿಮಾ ಮಾಡಬೇಕು ಎಂಬುದಷ್ಟೇ ನಮ್ಮ ಗುರಿ. ಹಾಗೆಯೇ ಈ ಸಂಸ್ಥೆ ಆರಂಭವಾಗುತ್ತಿದ್ದ ಹಾಗೆ ಪುನೀತ್‌ ಇನ್ನು ಮುಂದೆ ಬೇರೆ ಬ್ಯಾನರ್ ಸಿನಿಮಾದಲ್ಲಿ ನಟನೆ ಮಾಡುವುದಿಲ್ಲ ಎಂಬ ಮಾತುಗಳೂ ಕೇಳಿಬಂದವು. ಖಂಡಿತಾ ಅದು ಸುಳ್ಳು ಸುದ್ದಿ. ನಾನು ಬೇರೆ ಬ್ಯಾನರ್‌ ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ನಮ್ಮ ಬ್ಯಾನರ್‌ ಸಿನಿಮಾಗಳಲ್ಲಿಯೂ ನಟಿಸುತ್ತೇನೆ. ಮುಂದಿನ ವರ್ಷ ಹೋಂ ಬ್ಯಾನರ್‌ನಲ್ಲಿಯೇ ಒಂದು ಸಿನಿಮಾ ಮಾಡುವ ಯೋಜನೆ ಇದೆ. ಯಾವ ಸಂಸ್ಥೆಯಲ್ಲಿ ಎಂಬುದು ಇನ್ನೂ ನಿರ್ಧಾರವಾಗಬೇಕಿದೆ.

* ನಿಮ್ಮ ಬ್ಯಾನರ್‌ನಿಂದ ಯಾವ ರೀತಿಯ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಚನೆ ಇದೆ?

ಖಂಡಿತವಾಗಲೂ ಎಲ್ಲರೂ ಇಷ್ಟಪಡುವ ಕಮರ್ಷಿಯಲ್‌ ಸಿನಿಮಾ ಮಾಡುತ್ತೇವೆ.

* ಹಾಗಾದರೆ  ಕಲಾತ್ಮಕ ಮಾದರಿಯ ಒಳ್ಳೆಯ ಸ್ಕ್ರಿಪ್ಟ್‌ ಸಿಕ್ಕರೆ ಹಣ ಹೂಡುವುದಿಲ್ಲವೇ?

ನಾನು ಆರ್ಟ್‌, ಕಮರ್ಷಿಯಲ್‌ ಎಂದು ವಿಭಾಗವನ್ನೇ ಮಾಡುವುದಿಲ್ಲ. ಆದರೆ ಅದು ಜನರ ಮನಸ್ಸನ್ನು ಮುಟ್ಟಬೇಕು. ಇಂಥ ಸಿನಿಮಾವನ್ನು ಇವರೇ ನೋಡಬೇಕು. ಇವರಿಗಾಗಿ ಸಿನಿಮಾ ಮಾಡಬೇಕು ಎಂಬೆಲ್ಲ ನಿರ್ಬಂಧ ಇರಲೇಬಾರದು. ನಾವು ಎಲ್ಲರಿಗಾಗಿಯೂ ಸಿನಿಮಾ ಮಾಡಬೇಕು. ಪ್ರಯೋಗಾತ್ಮಕ ಸಿನಿಮಾಗಳನ್ನು ಮಾಡಬೇಕು ಎಂಬುದು ನನ್ನ ಆಸೆ.

* ವರ್ಷಕ್ಕೆ ಎಷ್ಟು ಸಿನಿಮಾ ಮಾಡುವ ಆಲೋಚನೆ ಇದೆ?

ಇಷ್ಟೇ ಎಂದೇನಿಲ್ಲ. ಒಂದು, ಎರಡು, ಮೂರು ಎಷ್ಟಾದರೂ ಆಗಬಹುದು. ಅದೇ ಸಮಯದಲ್ಲಿ ನಾವು ವಾಣಿಜ್ಯಾತ್ಮಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT