ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ: ವಿವಾದಿತ ಸ್ಥಳಕ್ಕೆ ಇನ್ನೂ ಇಬ್ಬರು ವೀಕ್ಷಕರು

Last Updated 22 ಸೆಪ್ಟೆಂಬರ್ 2017, 14:10 IST
ಅಕ್ಷರ ಗಾತ್ರ

ಅಯೋಧ್ಯೆ: ಇಲ್ಲಿನ ಬಾಬ್ರಿ ಮಸೀದಿ–ರಾಮ ಜನ್ಮಮಂದಿರದ ವಿವಾದಿತ ಸ್ಥಳಕ್ಕೆ ಇಬ್ಬರು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಸುಪ್ರೀಂಕೋರ್ಟ್‌ ನಿರ್ದೇಶನದ ಮೇರೆಗೆ ಅಲಹಾಬಾದ್‌ ಹೈಕೋರ್ಟ್‌ ಈ ನೇಮಕ ಮಾಡಿದೆ. ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಬಸ್ತಿಯ ಇರ್ಫಾನ್‌ ಅಹ್ಮದ್‌ ಮತ್ತು ಫೈಜಾಬಾದ್‌ನ ಅಮರಜೀತ್‌ ತ್ರಿಪಾಠಿ ಅವರನ್ನು ವೀಕ್ಷಕರಾಗಿ ನೇಮಿಸಿದ್ದು, 15 ದಿನಗಳಿಗೊಮ್ಮೆ ವಿವಾದಿತ ಸ್ಥಳದ ಕುರಿತು ವರದಿ ಸಲ್ಲಿಸಿದ್ದಾರೆ.

ಸೆ.11ರಂದು ಸುಪ್ರೀಂಕೋರ್ಟ್‌ನ ಮೂವರು ನ್ಯಾಯಮೂರ್ತಿಗಳನ್ನೊಂಡ ವಿಶೇಷ ಪೀಠವು, ನ್ಯಾಯಾಧೀಶರಾದ ಟಿ.ಎಂ ಖಾನ್‌ ಮತ್ತು ಎಸ್‌.ಕೆ. ಸಿಂಗ್‌ ಅವರನ್ನು ಬದಲಾಯಿಸುವಂತೆ ಆದೇಶ ನೀಡಿತ್ತು. ಈ ಇಬ್ಬರನ್ನು 2003ರಲ್ಲಿ ವೀಕ್ಷಕರನ್ನಾಗಿ ನೇಮಿಸಲಾಗಿತ್ತು.

ಇವರಲ್ಲಿ ಒಬ್ಬರು ವೀಕ್ಷಕರು ನಿವೃತ್ತಿಯಾಗಿದ್ದು, ಇನ್ನೊಬ್ಬರು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದಾರೆ ಎಂದು ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಅವರು ಸುಪ್ರೀಂಕೋರ್ಟ್‌ ಗಮನಕ್ಕೆ ತಂದಿದ್ದರು. ಆ ಬಳಿಕ ನ್ಯಾಯಾಲಯ ವೀಕ್ಷಕರ ಬದಲಾವಣೆಗೆ ಆದೇಶ ಹೊರಡಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT