ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಎನ್‌ಎ ವಿಘಟನೆಯ ಮಟ್ಟದ ಮೇಲಿರಲಿ ಗಮನ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಕೃತಕ ವೀರ್ಯಧಾರಣೆ (ಐಯುಐ) ಯಶಸ್ಸಿಗೆ ಡಿಎನ್‌ಎ ವಿಘಟನೆಯ ಮಟ್ಟದ ಮೇಲೂ ಗಮನ ಹರಿಸಬೇಕಾಗುತ್ತದೆ. ದೋಷವುಳ್ಳ ವೀರ್ಯವನ್ನು ಹೊಂದಿದ ಜೀವಕೋಶಗಳ ಸಂಖ್ಯೆಯ ಮೇಲೆ ಡಿಎನ್‌ಎ ವಿಘಟನಾ ಸೂಚ್ಯಂಕದ ಫಲಿತಾಂಶ ಅವಲಂಬಿತವಾಗಿರುತ್ತದೆ. ಡಿಎನ್‌ಎ ದೋಷ ಹೊಂದಿದ ಅಧಿಕ ವೀರ್ಯದಿಂದಾಗಿ ಗರ್ಭಧಾರಣೆಯ ಸಾಧ್ಯತೆಯೂ ಕಡಿಮೆಯೇ.

ಡಿಎನ್‌ಎ ವಿಘಟನೆಗೆ ಕಾರಣವೇನು?
ಒಂದು ಅಂಗಾಂಶದ ಅಂತಿಮ ಬೆಳವಣಿಗೆಗೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಸಂಖ್ಯೆಯ ಕೋಶಗಳು ಅಥವಾ ಹಳೆಯ ಕೋಶಗಳು ತನ್ನಿಂತಾನೇ ಕೊನೆಗೊಳ್ಳುವ ಅಥವಾ ನಿರ್ಜೀವಗೊಳ್ಳುವ ನೈಸರ್ಗಿಕ ಪ್ರಕ್ರಿಯೆಯು ಕೆಲವು ಡಿಎನ್‌ಎ ವಿಘಟನೆಗೆ ಕಾರಣವಾಗಬಲ್ಲವು. ಜೀವಕೋಶಗಳು ಸಾಯುವುದರಿಂದ ಈ ವಿಘಟನೆ ಸಂಭವಿಸಬಲ್ಲದು. ಆದರೆ ಈ ಸಾಮಾನ್ಯ ಪ್ರಕ್ರಿಯೆಯು ಹೆಚ್ಚಿನ ಮಟ್ಟದ ವೀರ್ಯ ಡಿಎನ್‌ಎ ವಿಘಟನೆಗೆ ಬಹುಮುಖ್ಯ ಅಂಶ ಎಂಬುದನ್ನು ಪರಿಗಣಿಸಲು ಸಾಧ್ಯವಿಲ್ಲ.

ವಾತಾವರಣಕ್ಕೆ ಸಂಬಂಧಿಸಿದ ಅಂಶಗಳಾದ ವಿಕಿರಣಗಳು, ಕೀಮೋಥೆರಪಿ ಔಷಧಗಳು, ಕೆಲವು ಔಷಧಗಳು, ಕೀಟನಾಶಕಗಳು, ಧೂಮಪಾನ, ರಾಸಾಯನಿಕ ಹಾಗೂ ಅತಿ ಉಷ್ಣತೆಗೆ ಒಡ್ಡಿಕೊಳ್ಳುವುದು – ಇವೆಲ್ಲವೂ ವೀರ್ಯದ ಡಿಎನ್‌ಎ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುವಂಥವು. ಕ್ರಿಪ್ಟೊರಿಡಿಸಂ, ಕ್ಯಾನ್ಸರ್, ಜ್ವರ ಹಾಗೂ ಇನ್ನಿತರ ಸೋಂಕುಗಳು ಕೂಡ ವೀರ್ಯದ  ಮೇಲೆ ಪರಿಣಾಮ ಬೀರಬಲ್ಲವು.

ಈ ಕೆಲವು ಕಾರಣಗಳು ವೀರ್ಯದ ಉಳಿವಿಗೆ ಅಡ್ಡಿಯುಂಟುಮಾಡಬಲ್ಲ ರಿಯಾಕ್ಟಿವ್ ಆಕ್ಸಿಜನ್ ಸ್ಪೆಸೀಸ್‌ (ಆರ್‌ಒಎಸ್) ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತವೆ. ಆರ್‌ಒಎಸ್‌ ಮಟ್ಟವನ್ನು ಹೆಚ್ಚಿಸುತ್ತವೆ. ಈ ಆರ್‌ಒಎಸ್‌ಗಳು ಡಿಎನ್‌ಎ ವಿಘಟನೆಗೆ ನೇರ ಕಾರಣವಾಗುತ್ತವೆ.
ವೀರ್ಯ ಉತ್ಪತ್ತಿಗೆ ಅಗತ್ಯವಾದ ಜೀನ್ ಹಾಗೂ ಪ್ರೊಟೀನ್‌ ಪ್ರಕ್ರಿಯೆಗೆ ಆರ್‌ಒಎಸ್ ಕೂಡ ಮುಖ್ಯವಾಗಿರುತ್ತದೆ. ಆದರೆ ಅದರ ಪ್ರಮಾಣ ಹೆಚ್ಚಾದಷ್ಟೂ ವೀರ್ಯಕ್ಕೆ ವಿನಾಶಕಾರಿಯಾಗುವುದು.

ಆರೋಗ್ಯವಂತ ಅಥವಾ ಯಾವುದೇ ಲೈಂಗಿಕ ಸಮಸ್ಯೆಯಿಲ್ಲದ ಪುರುಷರಲ್ಲಿ, ಅಧಿಕ ಆರ್‌ಒಎಸ್‌ ಅನ್ನು ನಿಯಂತ್ರಣಕ್ಕೆ ತರಬಲ್ಲ ಅಗತ್ಯ ನೈಸರ್ಗಿಕ ಆ್ಯಂಟಿಯಾಕ್ಸಿಡಂಟ್‌ಗಳು ಸಾಕಷ್ಟು ಪ್ರಮಾಣದಲ್ಲಿರುತ್ತವೆ. ವೃಷಣಗಳಲ್ಲಿನ ವೆರಿಕೋಸ್ ರಕ್ತನಾಳಗಳ ಪರೀಕ್ಷೆ ಈ ನಿಟ್ಟಿನಲ್ಲಿ ಸಹಾಯವಾಗಬಲ್ಲದು.
ಕೆಲವು ರೋಗಿಗಳ ಪರೀಕ್ಷೆ ಹಾಗೂ ವೈದ್ಯಕೀಯ ವರದಿಗಳ ಪ್ರಕಾರ, ಈ ಸಮಸ್ಯೆಗೆ ಆ್ಯಂಟಿಯಾಕ್ಸಿಡಂಟ್‌ ಥೆರಪಿ (ಉದಾಹರಣೆಗೆ, ವಿಟಮಿನ್‌ಗಳನ್ನು ತೆಗೆದುಕೊಳ್ಲುವುದು, ಅಂದರೆ ಆ್ಯಂಟಿಯಾಕ್ಸಿಡಂಟ್ ಹೇರಳವಾಗಿರುವ ವಿಟಮಿನ್ ಸಿ ಅಂಶದ ಸೇವನೆ) ಆರ್‌ಒಎಸ್ ಮಟ್ಟವನ್ನು ಕಡಿಮೆ ಮಾಡಬಹುದು. ಇದು ವೀರ್ಯದ ಡಿಎನ್‌ಎ ಅನ್ನು ಸಮರ್ಪಕವಾಗಿರುವಂತೆ ನೋಡಿಕೊಳ್ಳುತ್ತದೆ.

ಪುರುಷಸಂಬಂಧಿ ಫಲವತ್ತತೆ ಸಮಸ್ಯೆಗೆ ಸಂಬಂಧಿಸಿದಂತೆ ನಡೆದ ಅಧ್ಯಯನದಿಂದ, ಮೂರು ರೀತಿಯ ಡಿಎಫ್‌ಐ (ಡಿಎನ್‌ಎ ಫ್ತಾಗ್ಮೆಂಟೇಷನ್ ಸ್ಕೋರ್) ದೊರೆತಿದೆ. ಅದರಿಂದ ಗರ್ಭಧಾರಣೆಯ ಸಾಧ್ಯತೆಯನ್ನೂ ಅರಿತುಕೊಳ್ಳಬಹುದು.

* ಶೇ.30ಕ್ಕೂ ಹೆಚ್ಚು ವಿಘಟನೆ–ಉತ್ತಮವಲ್ಲ

* ಶೇ. 15–30 ವಿಘಟನೆ–ತಕ್ಕಮಟ್ಟಿಗೆ

* ಶೇ. 15 ವಿಘಟನೆ– ಉತ್ತಮ

ಉದಾಹರಣೆಗೆ, ಗರ್ಭಧಾರಣೆ ಸಮಸ್ಯೆಯಲ್ಲಿ ಸ್ತ್ರೀಸಂಬಂಧಿಯಾದ ದೋಷ ಕಾಣಿಸಿಕೊಳ್ಳದೇ, ಪುರುಷನಲ್ಲಿ ಶೇ. 15ಕ್ಕೂ ಕಡಿಮೆ ವಿಘಟನೆ ಸಂಖ್ಯೆ ಹೊಂದಿದ್ದರೆ ಐಯುಐ ಸಫಲಗೊಳ್ಳುತ್ತದೆ. ವಿಘಟನೆಯ ಮಟ್ಟವು ಶೇ.30ಕ್ಕೂ ಹೆಚ್ಚಿದ್ದರೆ, ಗರ್ಭಧಾರಣೆಯ ಸಾಧ್ಯತೆ ಕಡಿಮೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT