ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯವರ್ಧಕ ಮೆಂತ್ಯೆ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೆಂತ್ಯೆ ಕಾಳು ಸೌಂದರ್ಯವರ್ಧಕವೂ ಹೌದು. ಇದನ್ನು ಹಲವು ಬಗೆಗಳಲ್ಲಿ ಬಳಸುವುದರಿಂದ ಸುಂದರ ಚರ್ಮದ ಜೊತೆಗೆ ನುಣುಪಾದ ಕೂದಲನ್ನು ಪಡೆಯಬಹುದು

* ರಾತ್ರಿ ನೆನಸಿಟ್ಟ ಮೆಂತ್ಯೆಕಾಳನ್ನು ಬೆಳಿಗ್ಗೆ ಮೊಸರಿನೊಂದಿಗೆ ರುಬ್ಬಿ ಮುಖಕ್ಕೆ ಹಚ್ಚಿ, ಅರ್ಧ ಗಂಟೆಯ ನಂತರ ಮುಖ ತೊಳೆಯಬೇಕು. ಹೀಗೆ ಮಾಡುವುದರಿಂದ ಚರ್ಮ ಸುಕ್ಕಾಗುವುದನ್ನು ನಿಯಂತ್ರಿಸಬಹುದು

* ನೆನಸಿಟ್ಟ ಮೆಂತ್ಯೆಯನ್ನು ನೀರಿನೊಂದಿಗೆ ರುಬ್ಬಿ ಪೇಸ್ಟ್‌ ಥರ ಮಾಡಿಕೊಳ್ಳಿ. ಅದನ್ನು ಮುಖಕ್ಕೆ ಹಚ್ಚಿ ಹದಿನೈದು ನಿಮಿಷ ನಂತರ ಮುಖ ತೊಳೆಯುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ

* ನೆನಸಿದ ಮೆಂತ್ಯೆ ಕಾಳನ್ನು ಬೆಳಿಗ್ಗೆ ರುಬ್ಬಿ ಅದಕ್ಕೆ ಕೊಬ್ಬರಿ ಎಣ್ಣೆ, ಕಾಯಿ ಹಾಲನ್ನು ಬೆರೆಸಿಕೊಳ್ಳಿ. ಈ ಮಿಶ್ರಣವನ್ನು ತಲೆಗೆ ಹಚ್ಚುವುದರಿಂದ ಕೂದಲು ನುಣುಪಾಗುತ್ತದೆ

* ನೆನಸಿದ ಮೆಂತ್ಯೆಯನ್ನು ರುಬ್ಬಿ, ಅದಕ್ಕೆ ಜೇನುತುಪ್ಪ ಬೆರೆಸಿ ಮೊಡವೆಗೆ ಹಚ್ಚಿ, ನಂತರ ತಣ್ಣೀರಿನಿಂದ ತೊಳೆಯುವುದರಿಂದ ಮೊಡವೆಗಳು ಕಡಿಮೆಯಾಗುತ್ತವೆ

* ಮೆಂತ್ಯೆ, ಲೋಳೆಸರ ಮತ್ತು ದಾಸವಾಳದ ಎಲೆಯನ್ನು ರುಬ್ಬಿ ಕೂದಲಿಗೆ ಹಚ್ಚುವುದರಿಂದ ತಲೆಹೊಟ್ಟು ನಿಯಂತ್ರಣಕ್ಕೆ ಬರುತ್ತದೆ

* ಮೆಂತ್ಯೆಯನ್ನು ಮೊಳಕೆ ಬರಿಸಿ ಸೇವಿಸುವುದರಿಂದ ಚರ್ಮ ಹೊಳಪಾಗಲು, ಆರೋಗ್ಯಕರವಾಗಿರಲು ಸಹಾಯ ಮಾಡುತ್ತದೆ

* ದಾಸವಾಳದ ಹೂವನ್ನು ಜಜ್ಜಿ, ಅದಕ್ಕೆ ರುಬ್ಬಿದ ಮೆಂತ್ಯೆ ಪೇಸ್ಟ್ ಹಾಕಿ. ಆ ಮಿಶ್ರಣವನ್ನು ತಲೆಗೆ ಹಚ್ಚಿಕೊಂಡು, ಒಂದು ಗಂಟೆಯ ನಂತರ ತೊಳೆದುಕೊಳ್ಳಿ. ಕೂದಲು ಉದುರುವುದು, ಹೊಟ್ಟು, ಬಾಲನೆರೆ, ಸೀಳು ಕೂದಲು ಇತ್ಯಾದಿ ಸಮಸ್ಯೆಗಳಿಗೆ ಇದು ಪರಿಣಾಮಕಾರಿ

* ಮೆಂತ್ಯೆಕಾಳನ್ನು ನೀರಿನಲ್ಲಿ ರಾತ್ರಿ ನೆನೆಸಿಟ್ಟು ಮರುದಿನ ಗಟ್ಟಿಯಾಗಿ ರುಬ್ಬಿಕೊಳ್ಳಬೇಕು. ಅದಕ್ಕೆ ಒಂದು ಚಿಟಿಕೆ ಕಸ್ತೂರಿ ಅರಿಶಿಣ ಹಾಗೂ ಬೇಕಾದ ಪ್ರಮಾಣದಷ್ಟು ಹಾಲು ಸೇರಿಸಿ ಮುಖಕ್ಕೆ ಹಚ್ಚಿ. ಈ ಫೇಸ್ ಪ್ಯಾಕ್ ಚರ್ಮದ ಕಾಂತಿಗೆ ಸಹಕಾರಿ

* ಸ್ವಲ್ಪ ತರಿತರಿಯಾಗಿ ರುಬ್ಬಿದ ಮೆಂತ್ಯದ ಮಿಶ್ರಣವನ್ನು ಸ್ಕ್ರಬ್ ಆಗಿ ಬಳಸಬಹುದು. ಇದರಿಂದ ಕಪ್ಪುಕಲೆಗಳು, ಮುಖದ ಸತ್ತ ಜೀವಕೋಶಗಳು ಕ್ರಮೇಣ ಕಡಿಮೆಯಾಗುತ್ತದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT