ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸ ಹೊರಟಿರಾ?

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮಕ್ಕಳಿಗೆ ದಸರಾ ರಜೆ ಇನ್ನೇನು ಶುರುವಾಗುತ್ತದೆ. ಕುಟುಂಬ ಸಮೇತ ಪ್ರವಾಸ ಹೊರಡುವ ಯೋಜನೆ ಹಾಕಿಕೊಂಡವರಿಗೆ ಪೂರ್ವಸಿದ್ಧತೆಗಳು ಒಂದೇ ಎರಡೇ? ವ್ಯವಸ್ಥಿತವಾಗಿ ಸಿದ್ಧತೆ ಮಾಡಿಕೊಂಡರೆ ಪ್ರವಾಸದ ಮೋಜು ಅನುಭವಿಸಬಹುದು. ಪ್ರವಾಸ, ಪ್ರಯಾಸವಾಗದಂತೆ ಒಂದಿಷ್ಟು ತಯಾರಿ ಮಾಡಿಕೊಳ್ಳೋಣ ಬನ್ನಿ...

* ಜೇಬಿಗೆ ಭಾರವಾಗದಂಥ ಹೋಟೆಲ್ ಹುಡುಕಬೇಕು.

* ಇಷ್ಟವಾದ ಹೋಟೆಲ್‌ ಸುರಕ್ಷಿತ ಪ್ರದೇಶದಲ್ಲಿದೆಯೇ ನೋಡಬೇಕು

* ಹೋಟೆಲ್‌ನ ವಿಳಾಸ (ಲೊಕೇಶನ್‌) ತರಿಸಿಕೊಳ್ಳಬೇಕು

* ಆ ಊರಿನಲ್ಲಿ ನೀವು ನೋಡಬೇಕಾದ ಸ್ಥಳಗಳಿಗೆ ಸಮೀಪದಲ್ಲಿರಬೇಕು

* ಅಲ್ಲಿ ಸಿಗುವ ಊಟೋಪಹಾರ ಮತ್ತು ವೇಳಾಪಟ್ಟಿ ಪಡೆಯಬೇಕು

* ಹೋಟೆಲ್‌ನಲ್ಲಿ ಸಿಗುವ ಸವಲತ್ತುಗಳನ್ನು ಗೊತ್ತು ಮಾಡಿಕೊಳ್ಳಬೇಕು

* ಅಗತ್ಯ ಬಿದ್ದಲ್ಲಿ ಹೆಚ್ಚುವರಿ ಬೆಡ್‌ ಕೊಡುತ್ತಾರೆಯೇ ಕೇಳಬೇಕು

* ಸ್ನಾನಕ್ಕೆ ಬಿಸಿ ನೀರು ಸಿಗುತ್ತದೆಯೇ, ಇದ್ದರೆ ಸಮಯದ ಮಿತಿ ಇದೆಯೇ ವಿಚಾರಿಸಬೇಕು. ಒಬ್ಬರಿಗೆ ಒಂದೇ ಬಕೆಟ್‌ ನೀರು ಕೊಡುವ ಹೋಟೆಲ್‌ಗಳಿವೆ!

* ನೀವು ಗೊತ್ತುಮಾಡಿದ ಬಜೆಟ್‌ನದೇ ಮತ್ತು ನಿಗದಿಪಡಿಸಿದ ಕೊಠಡಿಯೇ ಬುಕ್‌ ಆಗಿರುವುದನ್ನು ಖಾತರಿಪಡಿಸಿಕೊಳ್ಳಬೇಕು.

* ಆಧುನಿಕ ಸೌಕರ್ಯಗಳಾದ ಲಾಂಡ್ರಿ, ವೈ ಫೈ, ಪಾರ್ಕಿಂಗ್‌, ಟೇಕ್‌ ಎವೇ ಸರ್ವಿಸ್‌ ಇದೆಯೇ ತಿಳಿದುಕೊಳ್ಳಬೇಕು

* ಮಕ್ಕಳ ಈಜು ಕೊಳ ಇದೆಯೇ, ಇದ್ದರೆ ಈಜುವ ವೇಳೆ ಅವರೊಂದಿಗೆ ಸಹಾಯಕರು ಇರುತ್ತಾರೆಯೇ ಕೇಳಬೇಕು

* ಅಂತಿಮ ಪಾವತಿ ಮಾಡುವ ಮೊದಲು, ಆ ಹೋಟೆಲ್‌ ಕುರಿತ ಗ್ರಾಹಕರ ಅಭಿಪ್ರಾಯ, ಪ್ರತಿಕ್ರಿಯೆಗಳನ್ನು ಗಮನಿಸಿ. ದರ ಕಡಿಮೆ ಇದ್ದರೂ ಹೋಟೆಲ್‌ನ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲದಿದ್ದರೆ ಎಲ್ಲಾ ಗ್ರಾಹಕರನ್ನೂ ಕೀಳುನೋಟದಿಂದ ಕಾಣುವ ಅಪಾಯವಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT