ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಾಲಿಗಳ ದಸರಾ ವಿಶೇಷ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನಗರದ ಬೆಂಗಾಳಿ ಅಸೋಸಿಯೇಷನ್ 68 ವರ್ಷಗಳಿಂದ ದುರ್ಗಾಪೂಜೆಯನ್ನು ವಿಜೃಂಭಣೆಯಿಂದ ಆಚರಿಸುತ್ತಿದೆ. ಪ್ರತಿ ವರ್ಷವೂ ದುರ್ಗಾ ದೇವಿಯ ವಿವಿಧ ರೂಪಗಳ ಮೂರ್ತಿಗಳನ್ನು ದುರ್ಗಾಪೂಜೆಯ ಆಕರ್ಷಣೆಗಳಲ್ಲೊಂದು.

ಈ ವರ್ಷ ಮಯೂರ್ ಪಂಖ್ ದೋಣಿಯಲ್ಲಿ ವಿಹರಿಸುತ್ತಿರುವ ದುರ್ಗಾದೇವಿ ಭಕ್ತರ ಆಕರ್ಷಣೆಯಾಗಲಿದೆ ಎನ್ನುತ್ತಾರೆ ಬೆಂಗಾಳಿ ಅಸೋಸಿಯೇಷನ್‌ ಅಧ್ಯಕ್ಷ ಶುಭೇಂದು ಘೋಷ್.

ದಸರಾ ಹಬ್ಬ ಸಾಮಾನ್ಯವಾಗಿ ಅಕ್ಟೋಬರ್‌ನಲ್ಲಿ ಬರುತ್ತಿತ್ತು. ಈ ಬಾರಿ ಸೆಪ್ಟೆಂಬರ್‌ನಲ್ಲಿ ಬಂದಿದೆ. ಹಾಗಾಗಿ, ಮಳೆಯಲ್ಲಿ ದುರ್ಗಾಪೂಜೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ತೊಂದರೆಯಾಗಬಾರದೆಂದು ಮಾನ್ಯತಾ ಟೆಕ್‌ಪಾರ್ಕ್ ಸಮೀಪದ ಮ್ಯಾನ್‌ಪೊ ಬೃಹತ್ ಸಭಾಂಗಣದಲ್ಲಿ ದುರ್ಗಾ ಪೂಜೆ ಆಯೋಜಿಸಿದ್ದೇವೆ. ಇದೇ ಸಂಭಾಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳೂ ಜರುಗುತ್ತವೆ. ಪಾರ್ಕಿಂಗ್‌ಗಾಗಿ ದೊಡ್ಡ ಮೈದಾನವೂ ಇಲ್ಲಿರುವುದರಿಂದ ಭಕ್ತರಿಗೆ ವಾಹನಗಳ ಪಾರ್ಕಿಂಗ್ ಸಮಸ್ಯೆ ಎದುರಾಗದು ಎಂದು ಮಾಹಿತಿ ನೀಡುತ್ತಾರೆ ಅವರು.

ಸೆ. 25ರ ಸಂಜೆ 6.30ರಿಂದ ‘ಮಹಾಪಂಚಮಿ’ ಕಾರ್ಯಕ್ರಮದಡಿ ಆನಂದ ಮೇಳ ಮತ್ತು ಮಕ್ಕಳ ಪ್ರತಿಭಾ ಪ್ರದರ್ಶನ ನಡೆಯಲಿದೆ. ಸೆ. 26ರಂದು ಸಂಜೆ 7ಕ್ಕೆ ಮೂಲಕ ದುರ್ಗಾಷ್ಟಮಿಯ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಅಂದು ಮಹಿಳೆಯರು ಮನೆಯಲ್ಲಿ ಮಾಡಿಕೊಂಡ ಅಡುಗೆ ಪದಾರ್ಥಗಳ ಪ್ರದರ್ಶನ ಮತ್ತು ಮಾರಾಟವೂ ಇದೆ. ಮಾರಾಟದಿಂದ ಬಂದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡಲಾಗುವುದು.

ಸೆ. 25ರಿಂದ 29ರ ತನಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸ್ಥಳೀಯ ಬಿಜು ನಾಯರ್ ಬ್ಯಾಂಡ್, ಕೋಲ್ಕತ್ತದ ಜನಪದ ಹಾಡುಗಾರರು ಮತ್ತು ಸ್ಥಳೀಯ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವರು. ಸೆ. 29ರ ಮಹಾನವಮಿಯಂದು ದಾಂಡಿಯಾ ನೃತ್ಯ ಕಾರ್ಯಕ್ರಮ ನಡೆಯಲಿದೆ. ಅಂದು ದುರ್ಗಾದೇವಿಯ ವಿಸರ್ಜನೆ ಕಾರ್ಯಕ್ರಮವೂ ನಡೆಯಲಿದೆ. ಸಪ್ತಮಿ, ಅಷ್ಟಮಿ, ನವಮಿ ಈ ಮೂರು ದಿನಗಳಲ್ಲಿ ದುರ್ಗಾ ಪೂಜೆಗೆ ಆಗಮಿಸುವ ಭಕ್ತರಿಗೆ ಉಚಿತವಾಗಿ ಭೋಗ್ ಪ್ರಸಾದ್ ವಿತರಣೆ ನಡೆಯಲಿದೆ.

ಸ್ಥಳ: ರಾಯಲ್ಸ್, ಮ್ಯಾನ್‌ಪೊ ಕನ್ವೆಷನ್ಸ್‌ ಸೆಂಟರ್, ಮಾನ್ಯತಾ ಟೆಕ್‌ಪಾರ್ಕ್ ಹತ್ತಿರ, ಹೊರವಲಯದ ರಿಂಗ್ ರಸ್ತೆ, ಬಿಇಎಲ್ ಕಾರ್ಪೋರೇಟ್ ಕಚೇರಿ ಎದುರು, ನಾಗವಾರ. ಹೆಚ್ಚಿನ ಮಾಹಿತಿಗೆ: 96111 12903ಗೆ ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT