ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಕೆ ತಂಪೆರೆದ ಗಜಲ್‌ ಗಾಯನ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಹಿಂದಿನ ದಿನವಷ್ಟೇ ಮಳೆ ಬಂದಿತ್ತು. ಈ ಹೋತ್ತು ಮಳೆ ಬರುವ ನಿರೀಕ್ಷೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ತಣ್ಣನೆಯ ಗಾಳಿ, ನೂರಾರು ಜನ, ಕೇವಲ ಅವರೋಬ್ಬರ ಧ್ವನಿ ಕೇಳಲು ಬಂದಿದ್ದರು. ಸಿನಿಮಾ, ಟಿ.ವಿಯಲ್ಲಿ ಅವರ ಸ್ವರ ಕೇಳಿದವರಿಗೆ ನಮ್ಮ ಕಣ್ಣ ಪರದೆಯ ಮುಂದೆ ಅವರೇ ಬಂದಿದ್ದಾರೆ, ಹಾಡುತ್ತಿದ್ದಾರೆ ಎನ್ನುವುದೇ ಸಂತಸದ ವಿಚಾರ. ನಿಜಕ್ಕೂ ಸುಂದರವೆಸುವಂತಹ ವಾತಾವರಣ ನಿಮಾರ್ಣವಾಗಿತ್ತು.

ಹಾಗಾದರೆ, ಅವರು ಯಾರು ಎಂಬ ಪ್ರಶ್ನೆ ನಿಮಗೆ ಮೂಡಿರಲಿಕ್ಕೂ ಸಾಕು. ಅವರ ಹೆಸರನ್ನು ಈ ಪ್ಯಾರಾದ ಕೊನೆಯಲ್ಲಿ ಹೇಳುತ್ತೇನೆ. ಅವರದು ಮೃದು ಕಂಠ. ಹಾಡಿನ ಲಾಲಿತ್ಯ ಕೇಳಿಯೇ ತೀರಬೇಕು. ಸಂಗೀತದ ಪರಿಭಾಷೆಯಲ್ಲಿಯೇ ಹೇಳುವುದಾದರೆ ಅವರು ಹಾಡುವ ಸಂಗತಿಗಳು, ಪಲುಕುಗಳು ಎಲ್ಲೂ ಇಲ್ಲಿ ಬೇಕಾಗಿರಲಿಲ್ಲ ಎನ್ನಿಸುವುದಿಲ್ಲ. ಬದಲಿಗೆ ಸಾಹಿತ್ಯವನ್ನು ಅಂದಗಾಣಿಸುತ್ತವೆ: ಶೃಂಗರಿಸುತ್ತವೆ. ಅವರದು ಗಜಲ್ ಗಾಯನಕ್ಕೆ ಹೇಳಿಮಾಡಿಸಿದ ಕಂಠಸಿರಿ ಮತ್ತು ಪ್ರಸ್ತುತಿ ಎಂದು ಯಾರಾದರೂ ಹೇಳಬಹುದು. ಈಗ ಅವರ ಹೆಸರು ನಾನು ಹೇಳುವುದೇ ಬೇಡ, ನಿಮಗೆ ಹೊಳೆದಿರಬೇಕು. ಹೌದು ನಿಮ್ಮ ಊಹೆ ಸರಿಯಾಗಿಯೇ ಇದೆ. ಅವರೇ ಪ್ರಸಿದ್ಧ ಗಜಲ್‌ ಗಾಯಕ ಪಂಕಜ್ ಉದಾಸ್.

ಎರಡು- ಮೂರು ಘಂಟೆಗಳು ನಡೆದ ಕಾರ್ಯಕ್ರಮ ನಿಜಕ್ಕೂ ಕೇಳುಗರನ್ನು ಭಾವನಾ ಲೋಕಕ್ಕೆ ಕರೆದೋಯ್ದಿದ್ದವು. ಗಜಲ್‍ಗಳ ವೈಶಿಷ್ಠ್ಯ ಅದರ ಸಾಹಿತ್ಯ. ಅದರ ಸಾಹಿತ್ಯ ಬಹಳ ಸರಳವಾಗಿ ಇರುತ್ತವೆ. ಜೊತೆಗೆ ಜೀವನ ಪ್ರೀತಿ ಸಾರುತ್ತವೆ. ಪಂಕಜ್ ಅವರ ಧ್ವನಿ ಹಾಗೂ ರಾಗ ಸಂಯೋಜನೆ ಗಜಲ್‍ನ ಸಾಹಿತ್ಯಕ್ಕೆ ಪೂರಕವಾಗಿದ್ದವು.

ಝಾಫರ್‍ಗೋರಕ್‍ಪುರಿ ಅವರ ಸಾಹಿತ್ಯದ ‘ದುಕ್ ಸುಕ್ ಏಕ್ ಸಬ್ಕಾ...’ ಪದ್ಯವಂತೂ ಈ ಕಾಲದ ಮನುಷ್ಯನ ಮೂಲಭೂತ ಸಮಸ್ಯೆಯಾಗಿರುವ ‘ಹಣ’ದ ವಿಚಾರವನ್ನು ಬಹಳ ಚೆನ್ನಾಗಿ ವಿಷದಿಸಲಾಗುತ್ತು. ಮೂರ ತಲೆಮಾರಿನ ಪ್ರಸ್ತಾಪ ಈ ಗಜಲ್‌ನಲ್ಲಿದೆ. ಹಿಂದಿನ ಕಾಲದಲ್ಲಿ ಹಣ ಇರಲಿಲ್ಲ. ಮಣ್ಣಿನ ಮನೆ ಇತ್ತು. ತಿನ್ನಲು ಬೇಕಾಗುವಷ್ಟು ಊಟವೂ ಇರಲಿಲ್ಲ ಆದರೆ, ಅಂದಿನ ಜನ ಕಪಟಿಗಳಾಗಿರಲಿಲ್ಲ. ಜೊತೆಗೆ ಸಂತೋಷ, ನೆಮ್ಮದಿಯಿಂದ ಇದ್ದರು.

ನಂತದ ತೆಲೆಮಾರು ಹಿಂದಿನಕ್ಕಿಂತ ಹಣದ ವಿಚಾರದಲ್ಲಿ ಸ್ವಲ್ಪ ಉತ್ತಮರು. ಇಲ್ಲಿ ಮಣ್ಣಿನ ಮನೆ ಹೋಗಿ ಮಕಾನ್ ಬಂತು. ಹೀಗಾದರೂ ಸುಖವಿತ್ತು. ಆದರೆ, ಈಗ? ಯಾರಿಗೆ ಯಾರೂ ಇಲ್ಲ. ಯಾರ ಪರಿಚಯವೂ ಯಾರಿಗೂ ಇಲ್ಲ. ಕಾರು, ಬಂಗಲೆ, ಜಮೀನು ಎಲ್ಲವೂ ಇವೆ ಆದರೆ, ಸಂತೋಷ ನೆಮ್ಮದಿಗೊಸ್ಕರ ಈಗಿನ ಕಾಲದ ಮನುಷ್ಯ ಹೆಣಗಾಡುತ್ತಿದ್ದಾನೆ. ಆದರೆ, ಮುಂಬರುವ ಪೀಳಿಗೆಗೆ ಹೀಗಾಗಬಾರದು ಎನ್ನುವ ಸಕಾರಾತ್ಮಕ ತಿಳಿಯೊಂದಿಗೆ ಗಜಲ್‌ ಅಂತ್ಯವಾಗುತ್ತದೆ.

ಅನ್ವರ್ ಫಾರುಖಾಬದಿ ಅವರ ಸಾಹಿತ್ಯವಿರುವ ‘ಸಬ್ಕೋ ಮಾಲೂಮ್ ಹೈ ಮೈ ಶರಾಬಿ ನಹಿ....’ ಗಜಲ್‌ ಅಂತೂ ಎಲ್ಲರ ಮೆಚ್ಚುಗೆ ಗಳಿಸಿತು. ಮೇಲು ನೋಟಕ್ಕೆ ಇದು ಕುಡುಕರ ಹಾಡು ಎನಿಸಬಹುದು. ಆದರೆ, ಇದು ಬೇರೆಯದೇ ತತ್ವವನ್ನು ಸಾರುವ ಪದ್ಯ. ಇಲ್ಲಿ ನಿರೂಪಕ ಹೇಳುತ್ತಾನೆ, ನಾನು ಕುಡುಕ ಅಲ್ಲ ಅಂತ ಎಲ್ಲರಿಗೂ ಗೊತ್ತು ಆದರೂ, ಅದು ಎದುರಿಗೆ ಬಂದರೆ, ನನ್ನ ಆಣೆಯನ್ನೂ ಮರೆತು ಕುಡಿದುಬಿಡುತ್ತೇನೆ ಎನ್ನುತ್ತಾನೆ. ನಂತರ ಅವನೇ ಹೇಳುತ್ತಾನೆ. ನನ್ನಲ್ಲಿರುವ ನಶೆ ‘ಪ್ರೀತಿ’ಯದ್ದು ಎಂದು. ಈ ಸಾಲು ಇಡೀ ಪದ್ಯದ ಮುಖ್ಯ ಸಾಲು ಎನ್ನಬಹುದು. ಜಗತ್ತಿಗೆ ನಿಜಕ್ಕೂ ಈ ನಶೆಯ ಜರೂರು ಇದೆ ಎನ್ನುವ ಗಮ್ಯ ಈ ಪದ್ಯದ್ದು.

ಮತ್ತೊಂದು ಗಜಲ್‌, ‘ತೋಡಾ ತೋಡಾ ಪಿಯಾ ಕರೋ...’, ಇದು ಹೆಚ್ಚು ಗಮನ ಸೆಳೆದ್ದು ಪಕ ವಾದ್ಯ ವೃಂದದವರಿಂದ. ಹಾಡಿನ ವೇಗ(ರಿದಮ್), ಪಕ ವಾದ್ಯ ಸಂಯೋಜನೆ ಅದ್ಭುತವಾಗಿದ್ದವು. ಈ ಕಾರಣಕ್ಕಾಗಿಯೇ ಈ ಪದ್ಯ ಎಲ್ಲರ ಗಮನವನ್ನು ಹೆಚ್ಚು ಸೆಳೆಯಿತು.

ಇನ್ನು ಉಳಿದಂತೆ, ‘ಜಿಯೆ ತೊ ಜಿಯೇ ಕೈಸೇ ಬಿನಾ ಆಪಕೆ....’, ‘ಔರ್ ಆಹಿಸ್ತಾ ಕಿಜಿಯೇ ಬಾತೆ...’ ಇನ್ನೂ ಹಲವಾರು ಗಜಲ್‍ಗಳನ್ನು ಅವರು ಹಾಡಿದರು. ವಾತಾವರಣದ ತಂಪಿಗೂ, ಅವರ ಹಾಡಿನ ತಂಪೂ ಹೆಚ್ಚು ಆಪ್ತವಾಗಿತ್ತು. ಹಾಡಿನ ಮಧ್ಯೆ, ಪ್ರಾರಂಭಕ್ಕೆ ಅವರು ಹಾಡಿನ ಮೂಲಕವೇ ಹೇಳುತ್ತಿದ್ದ ಶಾಯರಿಗೆ  ಚಪ್ಪಾಳೆಯ ಮೂಲಕ ಬಂದಿದ್ದವರೆಲ್ಲಾ ಸಂತಸ ವ್ಯಕ್ತಪಡಿಸಿದರು. ಒಟ್ಟಿನಲ್ಲಿ ಒಂದು ಆನಂದಮಯ ಸಂಜೆ ಕಾರ್ಯಕ್ರಮಕ್ಕೆ ಹೋಗಿದ್ದ ನಮ್ಮಗಳ ಪಾಲಿನದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT