ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಾತ್ರಿ ಹಬ್ಬಕ್ಕೆ ವಿಶೇಷ ಅಡುಗೆ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವರಾತ್ರಿ ಹಬ್ಬದ ಸಂದರ್ಭದಲ್ಲಿ ದುರ್ಗೆಯನ್ನು ವಿವಿಧ ರೂಪದಲ್ಲಿ ಆರಾಧಿಸುತ್ತಾರೆ. ಎಲ್ಲಾ ದೇವಾಲಯಗಳಲ್ಲೂ ವಿಶೇಷ ಪೂಜೆಗಳು ನೆಡೆಯುತ್ತವೆ. ದುರ್ಗಾ ಪೂಜೆ ವೇಳೆ ನೈವೇದ್ಯಕ್ಕೆ ಮಾಡಬಹುದಾದ ಹಬ್ಬದ ರೆಸಿಪಿಗಳು ಇಲ್ಲಿವೆ.

ನೈಪಾಯಸ
ಬೇಕಾಗುವ ವಸ್ತುಗಳು: 1 ಕಪ್ ಬೆಳ್ತಿಗೆ ಅಕ್ಕಿ, ¾ ಕಪ್ ಬೆಲ್ಲ, ¼ ಕಪ್ ದನದ ತುಪ್ಪ, 7-8 ಗೋಡಂಬಿ, 8-9 ಒಣದ್ರಾಕ್ಷಿ.

ಮಾಡುವ ವಿಧಾನ: ಬೆಳ್ತಿಗೆ ಅಕ್ಕಿಯನ್ನು ಚೆನ್ನಾಗಿ ತೊಳೆದು ಮೆತ್ತಗೆ ಇಂಗಿಸಿ ಬೇಯಿಸಿ. ನಂತರ ಬೆಲ್ಲ ಹಾಕಿ ಮಗುಚುತ್ತಾ ಇದ್ದು ಬೆಲ್ಲ ಕರಗಿದ ಮೇಲೆ ತುಪ್ಪ ಹಾಕಿ ಮಗುಚಿ. 2 ಚಮಚ ಬಿಸಿ ಮಾಡಿ ದ್ರಾಕ್ಷಿ ಮತ್ತು ಗೋಡಂಬಿ ಹಾಕಿ ಹುರಿದು, ನೈಪಾಯಸಕ್ಕೆ ಹಾಕಿ ಮುಚ್ಚಿ. ದೇವಿಗೆ ಇಷ್ಟವಾದ ಪಾಯಸವಿದು.

ಗೋಧಿ ಹಿಟ್ಟಿನ ಬರ್ಫಿ
ಬೇಕಾಗು ವಸ್ತುಗಳು: 1 ಕಪ್ ಗೋಧಿ ಹಿಟ್ಟು, 1 ಕಪ್ ಸಕ್ಕರೆ, 1 ಕಪ್ ದಪ್ಪ ಹಾಲು, ½ ಕಪ್ ತುಪ್ಪ, ಚಿಟಿಕೆ ಕೇಸರಿ, 7-8 ತುಪ್ಪದಲ್ಲಿ ಹುರಿದ ಗೋಡಂಬಿ.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದ ಮೇಲೆ ಗೋಧಿ ಹಿಟ್ಟು ಹಾಕಿ ಸಣ್ಣ ಉರಿಯಲ್ಲಿ ಮಗುಚುತ್ತಾ ಇರಬೇಕು. ಕಂದು ಬಣ್ಣ ಬಂದಾಗ ಸಕ್ಕರೆ ಹಾಕಿ ತೊಳೆಸಿ. ಸಕ್ಕರೆ ಕರಗಿ ಸ್ವಲ್ಪ ಗಟ್ಟಿಯಾಗುತ್ತಾ ಬರುವಾಗ ಕೇಸರಿ ಹಾಕಿದ ಹಾಲು ತೊಳಸಿ. ಮಿಶ್ರಣ ಗಟ್ಟಿಯಾದ ಕೂಡಲೇ ತುಪ್ಪ ಸವರಿದ ತಟ್ಟೆಯಲ್ಲಿ ಹರಡಿ. ಬೇಕಾದ ಆಕಾರದಲ್ಲಿ ತುಂಡು ಮಾಡಿ ಇಡಿ. ಇದು ತಿನ್ನಲು ತುಂಬ ರುಚಿಯಾಗಿರುತ್ತದೆ.

ಅಂಜೂರ ಹಲ್ವಾ
ಬೇಕಾಗುವ ವಸ್ತುಗಳು: 8-9 ಬಾದಾಮಿ, 9-10 ಅಂಜೂರ, 1 ಕಪ್ ಹಾಲು, ½ ಕಪ್ ತುಪ್ಪ, ¼ ಕಪ್ ಕೋವಾ, 1 ಕಪ್ ಸಕ್ಕರೆ, ½ ಚಮಚ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ಗೋಡಂಬಿ.

ಮಾಡುವ ವಿಧಾನ: ಬಾದಾಮಿ ಮತ್ತು ಅಂಜೂರವನ್ನು ಬಿಸಿ ನೀರಲ್ಲಿ ಹಾಕಿ ಎರಡು ಗಂಟೆ ನೆನೆಯಿಸಿ. ನಂತರ ಸ್ವಲ್ಪ ಹಾಲು ಹಾಕಿ ರುಬ್ಬಿ. ಬಾಣಲೆಯನ್ನು ಒಲೆಯ ಮೇಲಿಟ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದಾಗ ರುಬ್ಬಿದ ಮಿಶ್ರಣ ಹಾಕಿ ತೊಳಸಿ. ಮಿಶ್ರಣ ಬೆಂದಾಗ ಸಕ್ಕರೆ ಹಾಕಿ ತೊಳಸಿ. ಸಕ್ಕರೆ ಕರಗಿ ಗಟ್ಟಿಯಾಗುತ್ತಾ ಬಂದಾಗ ಕೋವಾ ಹಾಕಿ ಬೆರೆಸಿ. ಸ್ವಲ್ಪ ತುಪ್ಪ, ಏಲಕ್ಕಿ ಪುಡಿ ಹಾಕಿ ಬಾಣಲೆಯಿಂದ ಮಿಶ್ರಣ ತಳ ಬಿಡುತ್ತಾ ಬಂದಾಗ ತುಪ್ಪ ಸವರಿದ ತಟ್ಟೆಗೆ ಹಾಕಿ. ತಣಿದ ನಂತರ ತುಂಡು ಮಾಡಿ. ಹುರಿದ ಗೋಡಂಬಿಯಿಂದ ಅಲಂಕರಿಸಿ.

ಮುಳ್ಳುಸೌತೆ ಚಕ್ಕುಲಿ
ಬೇಕಾಗುವ ವಸ್ತುಗಳು: 1 ಕಪ್ ಅಕ್ಕಿ ಹಿಟ್ಟು, 1 ½ ಕಪ್ ತುರಿದ ಮುಳ್ಳು ಸೌತೆ, ¼ ಕಪ್ ಜೀರಿಗೆ, 2 ಚಮಚ ಬೆಣ್ಣೆ, ಕರಿಯಲು ಬೇಕಾದಷ್ಟು ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಬಾಣಲೆಯನ್ನು ಒಲೆಯ ಮೇಲಿಟ್ಟು, ಅಕ್ಕಿ ಹಿಟ್ಟು ಹಾಕಿ ಸ್ವಲ್ಪ ಪರಿಮಳ ಬರುವವರೆಗೆ ಹುರಿದು ಕೆಳಗಿಳಿಸಿ. ನಂತರ ತುರಿದ ಮುಳ್ಳುಸೌತೆ ಮಿಕ್ಸಿಗೆ ಹಾಕಿ ರುಬ್ಬಿ. ನಂತರ ನೀರು ಆರುವವರೆಗೆ ಬಾಣಲೆಗೆ ಹಾಕಿ ಬೇಯಿಸಿ ಇಳಿಸಿ. ನಂತರ ಹುರಿದ ಅಕ್ಕಿ ಹಿಟ್ಟು, ಉಪ್ಪು, ಜೀರಿಗೆ, ಬೆಣ್ಣೆ ಹಾಕಿ ಗಟ್ಟಿಗೆ ಕಲಸಿ. ನಂತರ ಚಕ್ಕುಲಿ ಮುಟ್ಟಿನಲ್ಲಿ ಹಾಕಿ ಪೇಪರಿನ ಮೇಲೆ ಚಕ್ಕುಲಿ ಒತ್ತಿ ಕಾದ ಎಣ್ಣೆಗೆ ಹಾಕಿ ಹದ ಹುರಿಯಲ್ಲಿ ಕರಿದು ತೆಗೆಯಿರಿ. ಈಗ ರುಚಿಯಾದ, ಗರಿ ಗರಿಯಾದ, ಘಮಘಮಿಸುವ ಚಕ್ಕುಲಿ ದೇವಿಯ ನೈವೇದ್ಯಕ್ಕೆ ಸಿದ್ಧ.

ಸರಸ್ವತಿ ಎಸ್. ಭಟ್
’ವಿಶ್ರಾಂತಿ’,
ಬೊಳುವಾರು ಬೈಲ್,
ಬೊಳುವಾರ್,
ಪುತ್ತೂರು -574201 (ದ.ಕ)
ಮೊಬೈಲ್ – 9481845400

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT