ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ಸತ್ವ ಹೇಗಾಯಿತು?

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

‘ಧರ್ಮರಹಿತ ಚಳವಳಿಗಳಾದ ಕಾರ್ಲ್‌ಮಾರ್ಕ್ಸ್‌ನ ಭೌತಿಕವಾದ, ಪೆರಿಯಾರ್‌ ರಾಮಸ್ವಾಮಿ ಅವರ ಸಿದ್ಧಾಂತಗಳು ಹೇಗೆ ನಿಸ್ಸತ್ವಗೊಂಡವು ಎಂಬುದನ್ನು ಇತಿಹಾಸದಿಂದ ಅರಿಯಬೇಕು’ ಎಂದಿದ್ದಾರೆ ಮಾತೆ ಮಹಾದೇವಿ (ಪ್ರ.ವಾ., ಸೆ.17).

ಅದೇ ಇತಿಹಾಸದ ಸ್ಪಷ್ಟ ಅರಿವಿನಿಂದಲೇ ಹೇಳುವುದಾದರೆ ಈಗಲೂ ನಮ್ಮ ದೇಶದಲ್ಲಿಯೇ ತ್ರಿಪುರಾ ಮತ್ತು ಕೇರಳ ರಾಜ್ಯಗಳಲ್ಲಿ ಕಾರ್ಲ್‌ಮಾರ್ಕ್ಸ್‌ರ ತತ್ವಗಳನ್ನು ಒಪ್ಪಿಕೊಂಡ ಸರ್ಕಾರಗಳೇ ಇವೆಯಲ್ಲ? ಅಷ್ಟೇ ಏಕೆ ತ್ರಿಪುರಾ ರಾಜ್ಯದ ಮುಖ್ಯಮಂತ್ರಿ ಮಾಣಿಕ್‌ ಸರ್ಕಾರ್‌ ಅವರು ದೇಶದ ಶ್ರೇಷ್ಠ ಮತ್ತು ಪ್ರಾಮಾಣಿಕ ಮುಖ್ಯಮಂತ್ರಿ ಎಂದು ಗುರುತಿಸಿ ಅವರಿಗೆ ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠವು ಬಸವಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ ಅಲ್ಲವೇ? ಹಾಗಿದ್ದಾಗ ಕಾರ್ಲ್‌ಮಾರ್ಕ್ಸ್‌ರ ಸಿದ್ಧಾಂತಗಳು ಎಲ್ಲಿ ನಿಸ್ಸತ್ವಗೊಂಡಿವೆ?

–ಹುರುಕಡ್ಲಿ ಶಿವಕುಮಾರ, ಹಗರಿಬೊಮ್ಮನಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT