ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀರಶೈವ ಲಿಂಗಾಯತ ಒಂದೇ: ಸಂಗನಬಸವ ಸ್ವಾಮಿ

ಒಂದೇ ಎಂದವರಿಗೆ ಮಾತ್ರ ಚುನಾವಣೆಯಲ್ಲಿ ಮಣೆ: ಸಲಹೆ
Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಬಳ್ಳಾರಿ: ‘ವೀರಶೈವ ಲಿಂಗಾಯತ ಒಂದೇ ಎಂದು ಹೇಳುವವರಿಗೆ ಮಾತ್ರ ವೀರಶೈವ ವಿದ್ಯಾವರ್ಧಕ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಡಬೇಕು’ ಎಂದು ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮಿ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ಸಂಘದ ಶತಮಾನೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಕ್ಟೋಬರ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈ ಅಂಶವೇ ಮುಖ್ಯವಾಗಬೇಕು. ಚುನಾವಣಾಧಿಕಾರಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಒತ್ತಾಯಿಸಿದರು.

‘ಇದು ವೀರಶೈವ ಸಮುದಾಯದ ಸಂಘ. ರಾಜ್ಯದಲ್ಲಿ ಈಗ ವೀರಶೈವ ಬೇರೆ. ಲಿಂಗಾಯತ ಬೇರೆ ಎಂಬ ಪ್ರತಿಪಾದನೆ ನಡೆದಿದೆ. ಆದರೆ ಅವೆರಡೂ ಒಂದೇ. ತಾವು ವೀರಶೈವರು ಅಥವಾ ವೀರಶೈವ ಲಿಂಗಾಯತರು ಎಂದು ಹೇಳಿಕೊಳ್ಳುವವರಿಗೆ ಸ್ಪರ್ಧಿಸಲು ಅವಕಾಶ ಕೊಡಬಹುದು. ಆದರೆ, ಲಿಂಗಾಯತರು ಎಂದಷ್ಟೇ ಹೇಳುವವರಿಗೆ ಸಂಘದಲ್ಲಿ ಸ್ಥಾನವಿಲ್ಲ. ಅಂಥಹವರಿಗೆ ಎಚ್ಚರಿಕೆಯ ಗಂಟೆ ಇದು’ ಎಂದು ಹೇಳಿದರು.

‘ಲಿಂಗಾಯತ ಪ್ರತ್ಯೇಕ ಧರ್ಮ ಸ್ಥಾಪನೆಯ ವಿಚಾರ ರಾಜಕಾರಣದ ಫಲವೋ ಅಥವಾ ಯಾರದ್ದೋ ಸ್ವಹಿತಾಸಕ್ತಿಯ ಫಲವೋ ತಿಳಿಯದು. ವೀರಶೈವ ಬೇರೆ. ಲಿಂಗಾಯತ ಬೇರೆ ಎಂಬ ವಿವಾದದಿಂದ ಸಮಾಜದಲ್ಲಿ ಒಡಕು ಉಂಟು ಮಾಡಲಾಗುತ್ತಿದೆ. ಸಂಘದ ಸದಸ್ಯರಲ್ಲೂ ಗೊಂದಲ ಮೂಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT