ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮುಷರಫ್‌ ಕೊಲೆಗಡುಕ–ಪುಕ್ಕಲ’

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ : ಮಾಜಿ ಸೇನಾಧಿಕಾರಿ ಪರ್ವೇಜ್‌ ಮುಷರಫ್‌ ಒಬ್ಬ ಕೊಲೆಗಡುಕ ಹಾಗೂ ಪುಕ್ಕಲ ಎಂದು ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಅವರ ಕಿರಿಯ ಪುತ್ರಿ ಅಸೀಫಾ ಭುಟ್ಟೊ ಜರ್ದಾರಿ ಆರೋಪಿಸಿದ್ದಾರೆ.

ಬೆನಜೀರ್‌ ಹತ್ಯೆಯಲ್ಲಿ ಪತಿ ಆಸೀಫ್‌ ಅಲಿ ಜರ್ದಾರಿ ಕೂಡ ಹೊಣೆಗಾರರು ಎಂದು ಮುಷರಫ್‌ ಗುರುವಾರ ಆರೋಪಿಸಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಅಸೀಫಾ, ‘ಕೊಲೆಗೈದು ಪರಾರಿಯಾಗಿರುವ ಕೊಲೆಗಡುಕನ ಬಗ್ಗೆ ಮಾಧ್ಯಮಗಳು ಪ್ರಾಮುಖ್ಯತೆ ನೀಡುತ್ತಿರುವುದು ಜಿಗುಪ್ಸೆ ಹುಟ್ಟಿಸಿದೆ’ ಎಂದು ಟ್ವೀಟ್‌ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

2007 ರ ಡಿಸೆಂಬರ್ 27 ರಂದು ರಾವಲ್ಪಿಂಡಿಯ ಲಿಯಾಖತ್ ಬಾಗ್‌ನಲ್ಲಿ ನಡೆದ ಆತ್ಮಹತ್ಯಾ ದಾಳಿಯಲ್ಲಿ ಆಗ ಪ್ರಧಾನಿಯಾಗಿದ್ದ ಬೆನಜೀರ್ ಅವರನ್ನು ಹತ್ಯೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT