ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವದ ಶ್ರೀಮಂತ ಮಹಿಳೆ ಲಿಲಿಯನ್‌ ನಿಧನ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ 14ನೇ ಸ್ಥಾನ ಗಿಟ್ಟಿಸಿಕೊಂಡಿದ್ದ ‘ಲಾರಿಯಲ್’ ಸೌಂದರ್ಯವರ್ಧಕಗಳ ಒಡತಿ ಲಿಲಿಯನ್ ಬೆಟೆನ್‌ಕೋರ್ಟ್‌ ಶನಿವಾರ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

‘95ನೇ ಹುಟ್ಟುಹಬ್ಬದ ದಿನದಂದೇ ನಮ್ಮ ತಾಯಿ ಮೃತಪಟ್ಟಿದ್ದಾರೆ. ಅವರು ತಮ್ಮ ಕೊನೆ ದಿನಗಳನ್ನು ಶಾಂತವಾಗಿ ಕಳೆದಿದ್ದಾರೆ’ ಎಂದು ಅವರ ಮಗಳು ಹೇಳಿರುವುದಾಗಿ ಇಂಗ್ಲೆಂಡಿನ ‘ದಿ ಇಂಡಿಪೆಂಡೆಂಟ್’ ಪತ್ರಿಕೆ ವರದಿ ಮಾಡಿದೆ.

2016ನೇ ಫೋರ್ಬ್ಸ್ ಪಟ್ಟಿಯಲ್ಲಿ ಲಿಲಿಯನ್ ಬೆಟೆನ್‌ಕೋರ್ಟ್‌ ಅವರಿಗೆ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎಂಬ ರ‍್ಯಾಂಕ್‌ ನೀಡಲಾಗಿತ್ತು. ಅವರ ಈ ವರ್ಷದ ಆದಾಯ ₹2.56ಲಕ್ಷ ಕೋಟಿ (39.5 ಬಿಲಿಯನ್ ಯುರೊ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT