ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜು: ಮಿಂಚಿದ ಪ್ರೇಕ್ಷಾ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ನಗರ ವಲಯದ ಎಚ್.ಎಂ.ಪ್ರೇಕ್ಷಾ ಅವರು ದಸರಾ ಕ್ರೀಡಾಕೂಟದ ಈಜು ಸ್ಪರ್ಧೆಯಲ್ಲಿ ಮೂರು ಚಿನ್ನದ ಪದಕ ಗೆದ್ದು ಮೊದಲ ದಿನದ ಗೌರವ ತಮ್ಮದಾಗಿಸಿಕೊಂಡರು.

ಚಾಮುಂಡಿ ವಿಹಾರ ಈಜುಕೊಳದಲ್ಲಿ ಶುಕ್ರವಾರ ನಡೆದ ಮಹಿಳೆಯರ 200 ಮೀ. ಮತ್ತು 400 ಮೀ. ಫ್ರೀಸ್ಟೈಲ್‌ ಸ್ಪರ್ಧೆಗಳಲ್ಲಿ ಅವರು ಮೊದಲ ಸ್ಥಾನ ಪಡೆದರು.

ಮಹಿಳೆಯರ 4X100 ಮೀ. ರಿಲೇ ಸ್ಪರ್ಧೆಯಲ್ಲಿ ಪ್ರೇಕ್ಷಾ, ಕೌಶ್‌ನಾಜ್‌ ಸೋನಿ, ರಿಯಾ ಸಿಂಗ್‌ ಮತ್ತು ಎಸ್‌.ವಿ.ನಿಖಿತಾ ಅವರನ್ನೊಳಗೊಂಡ ಬೆಂಗ ಳೂರು ನಗರ ವಲಯ ತಂಡ ಚಿನ್ನ ಗೆದ್ದುಕೊಂಡಿತು. ಮೊದಲ ದಿನ ನಡೆದ ಸ್ಪರ್ಧೆಗಳಲ್ಲಿ ಬೆಂಗಳೂರು ನಗರ ವಲಯದ ಈಜುಪಟುಗಳು ಪ್ರಾಬಲ್ಯ ಮೆರೆದರು.

ಫಲಿತಾಂಶ: ಪುರುಷರ ವಿಭಾಗ: 400 ಮೀ. ಫ್ರೀಸ್ಠೈಲ್‌: ರಯಾನ್‌ ಮೊಹಮ್ಮದ್‌ (ಬೆಂಗಳೂರು ನಗರ ವಲಯ)–1, ಕೆ.ಎಸ್. ಸೈಫ್‌ ಚಂದನ್‌ ಅಲಿ (ಬೆಂಗಳೂರು ನಗರ ವಲಯ)–2, ವಿ.ಬಿ.ಹೇಮಂತ್‌ ಜೆನುಕಲ್‌ (ಮೈಸೂರು ವಲಯ)–3. ಸಮಯ: 4ನಿ:21.00 ಸೆ.

200 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಕೆ.ಎಸ್‌.ಪೃಥ್ವಿ –1, ಲಿತೀಶ್‌ ಜಿ.ಗೌಡ (ಬೆಂಗಳೂರು ನಗರ)–2, ನೀಲ್‌ ಮಸ್ಕ ರೇನಸ್‌ (ಮೈಸೂರು)–3. ಸಮಯ: 2ನಿ,36.69 ಸೆ.

100 ಮೀ. ಬಟರ್‌ಫ್ಲೈ: ಪಿ.ಎಂ.ಸುಹಾಸ್‌ (ಮೈಸೂರು)–1, ಎಸ್‌.ಎಂ.ಶಶಿಕಿರಣ್‌–2, ಕೆ.ಎಸ್‌.ಸೈಫ್‌ ಚಂದನ್‌ ಅಲಿ (ಬೆಂಗಳೂರು ನಗರ)–3. ಸಮಯ: 1ನಿ, 01.09 ಸೆ.

100 ಮೀ. ಬ್ಯಾಕ್‌ಸ್ಟ್ರೋಕ್‌: ಎಂ.ಶರತ್‌ –1, ಬಿ.ಜತಿನ್‌ (ಬೆಂಗಳೂರು ನಗರ)–2, ಎಸ್‌.ಕುಶಾಲ್‌ (ಮೈಸೂರು ವಲಯ)–3. ಸಮಯ: 1ನಿ, 06.28 ಸೆ.

200 ಮೀ. ಫ್ರೀಸ್ಠೈಲ್‌: ವಿ.ಬಿ.ಹೇಮಂತ್‌ ಜೆನುಕಲ್‌ (ಮೈಸೂರು ವಲಯ)–1, ಕೆ.ಎಸ್‌.ಸೈಫ್‌ ಚಂದನ್‌ ಅಲಿ –2, ರಯಾನ್‌ ಮೊಹಮ್ಮದ್‌ (ಬೆಂಗಳೂರು ನಗರ)–3. ಸಮಯ: 2ನಿ, 03.01 ಸೆ. 4X100 ಮೀ. ಫ್ರೀಸ್ಟೈಲ್‌ ರಿಲೇ: ಬೆಂಗಳೂರು ನಗರ–1, ಮೈಸೂರು–2, ಬೆಳಗಾವಿ ವಲಯ–3. ಸಮಯ: 4ನಿ, 01.62 ಸೆ.

ಮಹಿಳೆಯರ ವಿಭಾಗ: 400 ಮೀ. ಫ್ರೀಸ್ಟೈಲ್‌: ಎಚ್‌.ಎಂ.ಪ್ರೇಕ್ಷಾ (ಬೆಂಗ ಳೂರು ನಗರ)–1, ಎಸ್‌.ವಿ.ನಿಖಿತಾ (ಬೆಂಗಳೂರು ನಗರ)–2, ಎಂ.ಎಸ್‌.ಕೀರ್ತನಾ (ಮೈಸೂರು)–3. ಸಮಯ: 4ನಿ, 53.21 ಸೆ.

200 ಮೀ. ಬ್ರೆಸ್ಟ್‌ ಸ್ಟ್ರೋಕ್‌: ಹರ್ಷಿತಾ ಜಯರಾಂ (ಬೆಂಗಳೂರು ನಗರ)–1, ಎಸ್‌.ಆರ್‌.ರಚನಾ ರಾವ್‌ (ಮೈಸೂರು)–2, ಶಿವಾಂಗಿ ರಾವತ್‌ (ಬೆಂಗಳೂರು ನಗರ)–3. ಸಮಯ: 2ನಿ, 57.41 ಸೆ.

100 ಮೀ. ಬಟರ್‌ಫ್ಲೈ: ಮಯೂರಿ ಲಿಂಗರಾಜು (ಬೆಂಗಳೂರು ನಗರ)–1, ಸಾನ್ಯಾ ಡಿ ಶೆಟ್ಟಿ (ಮೈಸೂರು)–2, ಯು.ಎಸ್‌.ಉತ್ತರೆ (ಬೆಂಗಳೂರು ನಗರ)–3. ಸಮಯ: 1ನಿ, 09.48 ಸೆ.

100 ಮೀ ಬ್ಯಾಕ್‌ಸ್ಟ್ರೋಕ್‌: ಭೂಮಿಕಾ ಆರ್‌. (ಬೆಂಗಳೂರು ನಗರ)–1, ಯು.ಎಸ್‌.ಉತ್ತರೆ (ಬೆಂಗಳೂರು ನಗರ)–2, ಸೈನಾ ಡಿಸೋಜಾ (ಮೈಸೂರು)–3. ಸಮಯ: 1ನಿ, 17.94 ಸೆ.

200 ಮೀ. ಫ್ರೀಸ್ಟೈಲ್‌: ಎಚ್‌.ಎಂ.ಪ್ರೇಕ್ಷಾ–1, ಮಯೂರಿ ಲಿಂಗ ರಾಜು–2, ನಿಖಿತಾ–3 (ಎಲ್ಲರೂ ಬೆಂಗಳೂರು ನಗರ ವಲಯ) ಸಮಯ: 2ನಿ,28.80 ಸೆ.

4X100 ಮೀ ಫ್ರೀಸ್ಟೈಲ್‌ ರಿಲೇ: ಬೆಂಗಳೂರು ನಗರ ವಲಯ–1, ಮೈಸೂರು ವಲಯ–2, ಬೆಳಗಾವಿ ವಲಯ–3. ಸಮಯ: 4ನಿ,38.01 ಸೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT