ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಿತ್ಯಂತರ ತೆರಿಗೆ: ₹ 12 ಸಾವಿರ ಕೋಟಿ

Last Updated 22 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಸ್ಥಿತ್ಯಂತರ ತೆರಿಗೆ ವಾಪಸಾತಿಗೆ ತೆರಿಗೆದಾರರು ಸಲ್ಲಿಸಿದ ಮನವಿಯಲ್ಲಿನ ಅರ್ಹತೆಯ ಮೊತ್ತ ₹ 12 ಸಾವಿರ ಕೋಟಿಗಳಷ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಜುಲೈ ತಿಂಗಳಿನಲ್ಲಿ ಸಂಗ್ರಹವಾದ ₹ 95 ಸಾವಿರ ಕೋಟಿ ‘ಜಿಎಸ್‌ಟಿ’ಯಲ್ಲಿ  ₹ 65 ಸಾವಿರ ಕೋಟಿಗಳನ್ನು ತಮಗೆ ಮರು ಪಾವತಿಸಬೇಕು ಎಂದು ತೆರಿಗೆದಾರರು ಕೇಳಿಕೊಂಡಿದ್ದರು. ಇಂತಹ ಮನವಿಗಳ ಸೂಕ್ಷ್ಮ ಪರಿಶೀಲನೆ ನಂತರ ತೆರಿಗೆದಾರರಿಗೆ ಪಾವತಿಸಬೇಕಾದ ಮೊತ್ತ ₹ 12 ಸಾವಿರ ಕೋಟಿಗಳಷ್ಟಾಗಿದೆ ಎಂದು ಸರ್ಕಾರ ತೀರ್ಮಾನಕ್ಕೆ ಬಂದಿದೆ.

ಜುಲೈ 1ರಿಂದ ಜಾರಿಗೆ ಬಂದಿರುವ ಜಿಎಸ್‌ಟಿ ವ್ಯವಸ್ಥೆಯಡಿ, ಅದಕ್ಕೂ ಮುಂಚಿನ ತೆರಿಗೆ ವ್ಯವಸ್ಥೆಯಲ್ಲಿ ಖರೀದಿಸಿದ ಸರಕುಗಳಿಗೆ ಸಂಬಂಧಿಸಿದಂತೆ ತೆರಿಗೆ ವಾಪಸ್‌ ಮಾಡಲು ಅವಕಾಶ ಇದೆ. ಇದು ಜಿಎಸ್‌ಟಿ ಜಾರಿಗೆ ಬಂದ ನಂತರದ 6 ತಿಂಗಳವರೆಗೆ ಮಾತ್ರ ಅನ್ವಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT