ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ತೂಕದಿಂದ ನವಜಾತಶಿಶುಗಳ ಮರಣ

Last Updated 22 ಸೆಪ್ಟೆಂಬರ್ 2017, 19:37 IST
ಅಕ್ಷರ ಗಾತ್ರ

ನವದೆಹಲಿ: ಕಳೆದ 15 ವರ್ಷಗಳಲ್ಲಿ ‍‍ಕಡಿಮೆ ತೂಕದ ಕಾರಣಕ್ಕೆ ಭಾರತದಲ್ಲಿ ಸಾವಿರಾರು ನವಜಾತ ಶಿಶುಗಳು ಮರಣಹೊಂದಿದ ಆತಂಕಕಾರಿ ಸಂಗತಿ ಹೊಸ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ಈ ಅವಧಿಯಲ್ಲಿ ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲ ಮಾನದಂಡಗಳಲ್ಲಿ ಸುಧಾರಣೆಯಾಗಿದ್ದರೂ  ಕಡಿಮೆ ತೂಕದಿಂದ ಆಗ ತಾನೆ ಹುಟ್ಟಿದ ಕಂದಮ್ಮಗಳು ಪ್ರಾಣ ಕಳೆದುಕೊಳ್ಳುತ್ತಿವೆ. ಬಹುತೇಕ ಸಾವುಗಳು ಮಗು ಹುಟ್ಟಿದ ಮೊದಲ ದಿನದಲ್ಲೇ ಸಂಭವಿಸಿವೆ.

ಹಿಂದೆ ಸೋಂಕು, ಪ್ರಸವ ಕಾಲದ ತೊಂದರೆಗಳು ಮತ್ತು ಇತರೆ ಕಾಯಿಲೆಗಳಿಂದಾಗಿ ನವಜಾತ ಶಿಶುಗಳು ಹೆಚ್ಚಾಗಿ ಸಾವಿಗೀಡಾಗುತ್ತಿದ್ದವು.‌ ಈಗ ಕಡಿಮೆ ತೂಕ ನವಜಾಶ ಶಿಶುಗಳ ಪ್ರಾಣಕ್ಕೆ ಎರವಾಗುತ್ತಿದೆ ಎಂದು ಅಧ್ಯಯನ ಹೇಳಿದೆ.

2001–2015ರ ನಡುವಣ ಅವಧಿಯಲ್ಲಿ ಮಕ್ಕಳ ಆರೋಗ್ಯ ಚಿತ್ರಣದಲ್ಲಿ ಗಣನೀಯ ಸುಧಾರಣೆಯಾಗಿರುವುದು ನಿಜ. ಆದರೆ, ಈ ಆತಂಕಕಾರಿಗೆ ಬೆಳವಣಿಗೆಗೆ ಏನು ಕಾರಣ ಎಂಬ ಬಗ್ಗೆ ಆರೋಗ್ಯ ಕ್ಷೇತ್ರದ ಅಧ್ಯಯನಕಾರರಲ್ಲಿ ಉತ್ತರ ಇಲ್ಲ.

2.5 ಕೆ.ಜಿ. ಮಿತಿ

ನವಜಾತ ಶಿಶುವಿನ ತೂಕ 2.5 ಕೆ.ಜಿಗಿಂತ ಕಡಿಮೆ ಇದ್ದರೆ, ಅದನ್ನು ಕಡಿಮೆ ತೂಕ ಎಂದು ಪರಿಗಣಿಸಲಾಗುತ್ತದೆ.

* 3.7 ಲಕ್ಷ 2015ರಲ್ಲಿ ಕಡಿಮೆ ತೂಕದಿಂದಾಗಿ ಮೃತಪಟ್ಟ ನವಜಾತ ಶಿಶುಗಳು

* 1.03 ಲಕ್ಷ 2015ರಲ್ಲಿ ಸೋಂಕಿನಿಂದ ಮೃತಪಟ್ಟ ನವಜಾತ ಶಿಶುಗಳು

ಮಿಲಿಯನ್‌ ಡೆತ್‌...

ಟೊರಾಂಟೊ ವಿಶ್ವವಿದ್ಯಾಲಯದ ಪ್ರಭಾತ್‌ ಝಾ ಹಾಗೂ ಅವರ ಸಹೋದ್ಯೋಗಿಗಳು ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಸಹಯೋಗದಲ್ಲಿ ‘ಮಿಲಿಯನ್‌ ಡೆತ್‌’ (10 ಲಕ್ಷ ಸಾವು) ಎಂಬ ಹೆಸರಿನಲ್ಲಿ ಈ ಅಧ್ಯಯನ ನಡೆಸಿದ್ದಾರೆ.

ಒಂದು ಲಕ್ಷ ನವಜಾತ ಶಿಶುಗಳ ಸಾವಿನ ಕಾರಣ ತಿಳಿಯುವುದಕ್ಕಾಗಿ ಈ ಅಧ್ಯಯನ ನಡೆಸಲಾಗಿದೆ. ಅದಕ್ಕಾಗಿ ಅವರು ಮೃತಪಟ್ಟ 10 ಲಕ್ಷ ಶಿಶುಗಳ ಕುಟುಂಬದ ಸದಸ್ಯರಿಂದ ಮಾಹಿತಿ ಕಲೆ ಹಾಕಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹೆಚ್ಚು

‘ಭಾರತದ ಗ್ರಾಮೀಣ ಭಾಗ ಮತ್ತು ಬಡ ರಾಜ್ಯಗಳಲ್ಲಿ ಇಂತಹ ಸಾವಿನ ಪ್ರಮಾಣ ಹೆಚ್ಚು. ಇದರ ಹಿಂದಿನ ಕಾರಣ ನಮಗೆ ಗೊತ್ತಿಲ್ಲ’ ಎಂದು ಝಾ ಹೇಳಿದ್ದಾರೆ.

ಗ್ರಾಮೀಣ ಭಾಗ: 2000 ಇಸವಿಗೆ ಹೋಲಿಸಿದರೆ 2015ರಲ್ಲಿ ತೂಕ ಕಡಿಮೆ ಇದ್ದ ನವಜಾತ ಶಿಶುಗಳ ಮರಣ ಪ್ರಮಾಣದಲ್ಲಿ (ಪ್ರತಿ 1000 ಜನನಕ್ಕೆ) ಶೇ 3.8ರಷ್ಟು ಹೆಚ್ಚಾಗಿದೆ. 2000ರಲ್ಲಿ ಈ ಪ್ರಮಾಣ ಶೇ 13.2ರಷ್ಟಿತ್ತು. 2015ರ ವೇಳೆಗೆ ಇದು ಶೇ 17ಕ್ಕೆ ಏರಿದೆ.

ಬಡ ರಾಜ್ಯಗಳು: 2000ದಲ್ಲಿ ಶೇ 11.3ರಷ್ಟಿದ್ದ ನವಜಾತ ಶಿಶುಗಳ ಪ್ರಮಾಣ (ಪ್ರತಿ 1000 ಜನನಕ್ಕೆ) 2015ರಲ್ಲಿ ಶೇ 17.8ಕ್ಕೆ ಹೆಚ್ಚಳವಾಗಿದೆ.

ಎಲ್ಲೆಲ್ಲಿ?

ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಪಂಜಾಬ್‌ ಮತ್ತು ಹರಿಯಾಣದಲ್ಲಿ ಇಂತಹ ಪ್ರಕರಣಗಳು ಹೆಚ್ಚು ದಾಖಲಾಗಿವೆ.

ಪಂಜಾಬ್‌, ಹರಿಯಾಣ ಬಿಟ್ಟು ಉಳಿದ ಶ್ರೀಮಂತ ರಾಜ್ಯಗಳಲ್ಲಿ ಈ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಅಧ್ಯಯನ ಕಂಡುಕೊಂಡಿದೆ.

ಅವಧಿಪೂರ್ವ ಹೆರಿಗೆಯಿಂದಾಗಿ ಶಿಶುಗಳು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಕಡಿಮೆಯಾಗಿರುವುದನ್ನು ಅಧ್ಯಯನ ಪ್ರಮುಖವಾಗಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT