ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಡಹಬ್ಬದ ಮೆರುಗು ಹೆಚ್ಚಿಸಿದ ಗೆಳೆಯರ ಬಳಗ

Last Updated 23 ಸೆಪ್ಟೆಂಬರ್ 2017, 6:51 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿಯ ಹೊಸ ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೊನಿಯ ಗೆಳೆಯರ ಬಳಗದ ನಾಡಹಬ್ಬ ಆಚರಣೆಗೆ ಈಗ 14 ವರ್ಷಗಳ ಸಂಭ್ರಮ. ಕಲಬುರ್ಗಿ ನಗರದ ನಾಡಹಬ್ಬದ ಮೆರುಗು ಹೆಚ್ಚಿಸಿದ್ದು ಈ ಗೆಳೆಯರ ಬಳಗದ ಹೆಮ್ಮೆ.

ಕಾಲೊನಿಯ ಉತ್ಸಾಹಿಗಳು ಸೇರಿ 2003ರಲ್ಲಿ ನಾಡಹಬ್ಬ ಆಚರಣೆಗಾಗಿಯೇ ಗೆಳೆಯರ ಬಳಗವನ್ನು ಹುಟ್ಟುಹಾಕಿದರು. ಬಡಾವಣೆಯ ಸಮಾನ ಮನಸ್ಕ 80 ಮಂದಿ ಸದಸ್ಯರು ಸಂಘದಲ್ಲಿದ್ದಾರೆ. ಪ್ರತಿ ವರ್ಷ ನಾಡಹಬ್ಬ ಆಚರಣೆಗಾಗಿ ₹3ರಿಂದ 4 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಜನಪ್ರತಿನಿಧಿಗಳು ಮತ್ತು ಬಡಾವಣೆ ನಿವಾಸಿಗಳು ಪ್ರಾಯೋಜಕತ್ವ ವಹಿಸುತ್ತಿದ್ದಾರೆ.

‘2003ರಲ್ಲಿ ಪ್ರತಿಷ್ಠಾಪಿಸಿದ ಅಂಬಾಭವಾನಿ ಮೂರ್ತಿಯನ್ನು ಬಳಗದ ಗೌರವ ಅಧ್ಯಕ್ಷ ಸೂರ್ಯಕಾಂತರಾವ ಕುಲಕರ್ಣಿ ಅವರು ನೀಡಿದ್ದರು. ಅಂದಿನಿಂದ ಅದೇ ಮೂರ್ತಿಗೆ ಪೂಜೆ ಸಲ್ಲಿಸಲಾಗುತ್ತಿದೆ. ದಸರಾ ಮುಗಿದ ನಂತರ ಮೂರ್ತಿಯನ್ನು ಅಂಬಾಭವಾನಿ ದೇವಾಲಯದಲ್ಲಿಟ್ಟು ಪೂಜಿಸಲಾಗುತ್ತದೆ. 14 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುತ್ತಿದೆ’ ಎಂದು ಅಧ್ಯಕ್ಷ ಕುಪೇಂದ್ರ ಶಹಾಪೂರಕರ ಹೇಳಿದರು.

ಹೊಸ ಜೇವರ್ಗಿ ರಸ್ತೆಯ ಎನ್‌ಜಿಒ ಕಾಲೊನಿಯ ಉದ್ಯಾನದಲ್ಲಿ ನಾಡಹಬ್ಬದ ಅಂಗವಾಗಿ 10 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಗುರುವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದ್ದು, ಸೆ.30ರಂದು ಬನ್ನಿ ಮುಡಿಯುವ ಮೂಲಕ ನಾಡಹಬ್ಬಕ್ಕೆ ತೆರೆಬೀಳಲಿದೆ.

ಕಾರ್ಯಕ್ರಮಕ್ಕಾಗಿ ಉದ್ಯಾನದಲ್ಲಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಅಲ್ಲದೆ ಉದ್ಯಾನದ ಸುತ್ತಮುತ್ತ ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ. ಪ್ರತಿದಿನ ರಾತ್ರಿ ಕಾರ್ಯಕ್ರಮದ ನಂತರ ಪ್ರಸಾದ ವಿತರಿಸಲಾಗುತ್ತದೆ. ಭಕ್ತರು ಪ್ರಸಾದ ವ್ಯವಸ್ಥೆ ಮಾಡುತ್ತಾರೆ.

ನಗರದ ಸಿಂದಗಿ ಅಂಬಾಭವಾನಿ ದೇವಾಲಯದಿಂದ ಗುರುವಾರ ನಾಡದೇವಿ ಮೆರವಣಿಗೆ ನಡೆಯಿತು. ನಂತರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಶುಕ್ರವಾರ ಆದಿಶಕ್ತಿ ಕಲಾತಂಡದಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಪ್ರಶಾಂತ ಚೌಧರಿ, ಜೂನಿಯರ್‌ ವಿಷ್ಣುವರ್ಧನ್‌, ರವಿ ಕೋರಿ ಅವರು ಹಾಸ್ಯ ಪ್ರಸಂಗಗಳ ಮೂಲಕ ಜನರನ್ನು ನಗೆಗಡಲಲ್ಲಿ ತೇಲಿಸಿದರು.

ಪ್ರತಿದಿನ ಸಂಜೆ ಕಾರ್ಯಕ್ರಮ: ಸೆ. 23ರಂದು ಮಧ್ಯಾಹ್ನ 3ಕ್ಕೆ ಕೇರಂ ಸ್ಪರ್ಧೆ, ಸಂಜೆ 4.30ಕ್ಕೆ ಚೆಸ್‌ ಸ್ಪರ್ಧೆ ನಡೆಯಲಿದೆ. ರಾತ್ರಿ 7.30ಕ್ಕೆ ಶ್ರದ್ಧಾ ಮೆಲೋಡಿಸ್‌ನಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ. 24ರಂದು ಮಧ್ಯಾಹ್ನ 3ಕ್ಕೆ ರಂಗೋಲಿ ಸ್ಪರ್ಧೆ, ಸಂಜೆ 4ಕ್ಕೆ ಚಿತ್ರ ಬರೆಯುವ ಸ್ಪರ್ಧೆ, ಸಂಜೆ 7ಕ್ಕೆ ‘ತಾಯಿ ಮಾಡಿದ ತಪ್ಪು’ ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.

ಸೆ.25ರಂದು ರಾತ್ರಿ 7.30ಕ್ಕೆ ರಸಮಂಜರಿ, 26ರಂದು ಸಂಜೆ 7ಕ್ಕೆ ಬಡಾವಣೆಯ ಮಕ್ಕಳಿಗೆ ನೃತ್ಯ ಸ್ಪರ್ಧೆ ನಡೆಯಲಿದೆ. ರಾತ್ರಿ 8ಕ್ಕೆ ಸಂಗೀತ ಸಂಜೆ ಏರ್ಪಡಿಸಲಾಗಿದೆ. 27ರಂದು ಸಂಜೆ 7ಕ್ಕೆ ಬಡಾವಣೆ ಮಕ್ಕಳಿಂದ ಫ್ಯಾನ್ಸಿ ಡ್ರೆಸ್‌ ಸ್ಪರ್ಧೆ, ಸಂಜೆ 8ಕ್ಕೆ ಬಸವರಾಜ ಘೀವಾರಿ ತಂಡದಿಂದ ಜಾನಪದ ಗೀತೆಗಳ ಜಾತ್ರೆ ಕಾರ್ಯಕ್ರಮ ನಡೆಯಲಿದೆ. 28ರಂದು ರಾತ್ರಿ 7.30ಕ್ಕೆ ಮ್ಯೂಜಿಕಲ್‌ ನೈಟ್ಸ್‌, ನಡೆಯಲಿದೆ. 29ರಂದು ರಾತ್ರಿ 7.30ಕ್ಕೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.

ಸೆ. 30ರಂದು ಬೆಳಿಗ್ಗೆ 11 ಗಂಟೆಗೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ. ಅಂದು ರಾತ್ರಿ 8.30ಕ್ಕೆ ಬಡಾವಣೆಯ ಉದ್ಯಾನದಿಂದ ಸೇವಾಲಾಲ ಮಂದಿರದವರೆಗೆ ದೇವಿ ಮೆರವಣಿಗೆ ನಡೆಯಲಿದೆ. ನಂತರ ವಿಸರ್ಜನೆ ಕಾರ್ಯಕ್ರಮದೊಂದಿಗೆ ನಾಡಹಬ್ಬಕ್ಕೆ ತೆರೆಬೀಳಲಿದೆ.

ನಾಡಹಬ್ಬದ ಯಶಸ್ಸಿಗಾಗಿ ಗೆಳೆಯರ ಬಳಗದ ಗೌರವ ಅಧ್ಯಕ್ಷ ಸೂರ್ಯಕಾಂತರಾವ ಕುಲಕರ್ಣಿ, ಅಧ್ಯಕ್ಷ ಕುಪೇಂದ್ರ ಶಹಾಪೂರಕರ, ಉಪಾಧ್ಯಕ್ಷ ವೆಂಕಟರೆಡ್ಡಿ ಎಸ್‌. ರಾಘಾಪುರ, ಕಾರ್ಯದರ್ಶಿ ಜಯಕುಮಾರ ಜೆ.ಮೂಲಿಮನಿ, ಸಹಕಾರ್ಯದರ್ಶಿ ಸಂಗಮೇಶ ಪಾಟೀಲ, ಕಾರ್ಯಕಾರಿ ಸಮಿತಿ ಸದಸ್ಯರಾದ ಬಸವರಾಜ ಪಾಟೀಲ ಬಿರಾಳ, ಶಿವಕುಮಾರ ಹಾಲ್ವಿ, ರಮೇಶ್‌ ರಾಠೋಡ, ನಾಗರಾಜ ಸಜ್ಜನ, ಸುನಿಲ ರಾಠೋಡ, ಮುಖಂಡರಾದ ರಾಜು ಕಡೇಚೂರ, ಆನಂದ ಸೊನ್ನದ, ಹನುಮಂತ ಬಿರಾದಾರ, ಪವನ ಕುಲಕರ್ಣಿ, ರಾಜು ವಾಡೇಕರ, ಸಂಜು ಬೋಶೆಟ್ಟಿ ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT